ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಸ್ನೇಹಿತನ ಪುತ್ರನ ಮೇಲೆ ಆಕಸ್ಮಿಕವಾಗಿ ಗುಂಡು ಹಾರಿಸಿದ ಉದ್ಯಮಿ, ಹೃದಯಾಘಾತದಿಂದ ನಿಧನ

ಸ್ನೇಹಿತನ ಪುತ್ರನೊಬ್ಬನ ಮೇಲೆ ಆಕಸ್ಮಿಕವಾಗಿ ಗುಂಡು ಹಾರಿಸಿದ ಉದ್ಯಮಿಯೊಬ್ಬರಿಗೆ ಆಘಾತವಾಗಿದ್ದು, ಈ ವೇಳೆ ಎದುರಾದ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ,

ಬೆಂಗಳೂರು: ಸ್ನೇಹಿತನ ಪುತ್ರನೊಬ್ಬನ ಮೇಲೆ ಆಕಸ್ಮಿಕವಾಗಿ ಗುಂಡು ಹಾರಿಸಿದ ಉದ್ಯಮಿಯೊಬ್ಬರಿಗೆ ಆಘಾತವಾಗಿದ್ದು, ಈ ವೇಳೆ ಎದುರಾದ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ,

ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯನ್ನು ಮಂಜುನಾಥ ಓಲೇಕಾರ್ (67) ಹಾಗೂ ಗುಂಡಿನ ದಾಳಿಗೊಳಗಾದ ವ್ಯಕ್ತಿಯನ್ನು (34) ಎಂದು ಗುರ್ತಿಸಲಾಗಿದೆ.

ಮೃತ ಓಲೇಕಾರ್ ಮತ್ತು ಅವರ ಪುತ್ರ ಸಂದೀಪ್ ಹೊಸ ವರ್ಷವನ್ನು ಆಚರಿಸಲು ವಿದ್ಯಾನಗರದಲ್ಲಿರುವ ತಮ್ಮ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗೆ ಓಲೇಕಾರ್ ಅವರ ಪುತ್ರನ ಇಬ್ಬರು ಗೆಳೆಯರು ಕೂಡ  ಪಾಲ್ಗೊಂಡಿದ್ದರು.

ಗಡಿಯಾರದ ಮುಳ್ಳು 12ಕ್ಕೆ ತಲುಪುತ್ತಿದ್ದಂತೆಯೇ ಓಲೇಕಾರ್ ಅವರು ಸಂಭ್ರಮದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲು ಮುಂದಾಗಿದ್ದಾರೆ. ಈ ವೇಳೆ ಗನ್ ಲೋಡ್ ಮಾಡುವ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ವಿನಯ್ ಮೇಲೆ ಬಿದ್ದಿದೆ. ಈ ವೇಳೆ ಗಾಬರಿಗೊಂಡ ಓಲೇಕಾರ್ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆಂದು ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಅವರು ಹೇಳಿದ್ದಾರೆ.

ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹೊಸನಗರ ಮೂಲದ ವಿನಯ್ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿ ಎಂದು ಮೂಲಗಳು ತಿಳಿಸಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಜಾನೆ ಖಾಲಿ? ಇರಾನ್ ಯುದ್ಧಕ್ಕೆ ಹಣ ನೀಡಲು ಅರಬ್ ರಾಷ್ಟ್ರಗಳಿಗೆ ಅಮೆರಿಕ ಒತ್ತಾಯ..: ವೈಟ್ ಹೌಸ್ ಹೇಳಿದ್ದೇನು?

ಭಾರತದ ಮೋಸ್ಟ್ ವಾಂಟೆಂಡ್ ಉಗ್ರ: ಪಾಕಿಸ್ತಾನದಲ್ಲಿ JeM ಭಯೋತ್ಪಾದಕ ಮಸೂದ್ ಅಜರ್‌ನ ಸಹೋದರ ನಿಗೂಢ ಸಾವು!

ಬೆಂಗಳೂರಿನಲ್ಲಿ ದಾರುಣ ಘಟನೆ: ಪತಿ ಆತ್ಮಹತ್ಯೆ ಬೆನ್ನಲ್ಲೇ 17ನೇ ಮಹಡಿಯಿಂದ ಜಿಗಿದು ಪತ್ನಿ ಸಾವು!

ಇರಾನ್‌ನ ಅಣುಕೇಂದ್ರ ಇಸ್ಫಹಾನ್ ಮೇಲೆ ಅಮೆರಿಕ ದಾಳಿ; ದುಬೈ ಕರಾವಳಿಯ ತೈಲ ಟ್ಯಾಂಕರ್‌ ಹೊಡೆದು ಟೆಹ್ರಾನ್ ಪ್ರತೀಕಾರ

body-worn cams ಆಫ್ ಮಾಡಿ, ವಿನಾಕಾರಣ ವಾಹನ ತಡೆದು ಹಣ ವಸೂಲಿ: 3 ಟ್ರಾಫಿಕ್ ಪೊಲೀಸರ ಅಮಾನತು

SCROLL FOR NEXT