ರಾಜ್ಯ

ಹೆಚ್ಚಿದ ಕೋವಿಡ್ ಆತಂಕ: ರಾಜ್ಯದಲ್ಲಿ ಬಿಎಫ್.7, ಎಕ್ಸ್'ಬಿಬಿ 1.5 ರೂಪಾಂತರಿ ವೈರಸ್ ಪತ್ತೆ?; ಇಲ್ಲ ಎಂದ ಅಧಿಕಾರಿಗಳು

Manjula VN

ಬೆಂಗಳೂರು: ಕೋವಿಡ್-19 ರೂಪಾಂತರಿ ವೈರಸ್ ಎಕ್ಸ್'ಬಿಬಿ 1.5 ಐದು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿದ್ದು, ಈ ಪೈಕಿ ಒಂದು ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ರಾಜ್ಯದಲ್ಲಿ ಮಹಾಮಾರಿ ವೈರಸ್ ಕುರಿತ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಈ ನಡುವೆ ರಾಜ್ಯದಲ್ಲಿ XBB.1.5 ರೂಪಾಂತರಿ ವೈರಸ್ ಪತ್ತೆಯಾದ ವರದಿಗಳನ್ನು ಹಿರಿಯ ಆರೋಗ್ಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಲ್ಯಾಬ್ ಗಳಿಂದ ಇಂತಹ ಯಾವುದೇ ವರದಿಗಳೂ ಬಂದಿಲ್ಲ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

XBB.1.5 ರೂಪಾಂತರವು ಅಮೆರಿಕಾದಲ್ಲಿ ಇತ್ತೀಚಿನ ಕೋವಿಡ್ ಪ್ರಕರಣಗಳಲ್ಲಿ ಶೇ.40 ಸೋಂಕು ಹೆಚ್ಚಾಗಲು ಕಾರಣವಾಗಿದೆ.

INSACOG ಪ್ರಕಾರ, XBB.1.5 ನ ಮೂರು ಪ್ರಕರಣಗಳು ಗುಜರಾತ್‌ನಲ್ಲಿ ಮತ್ತು ರಾಜಸ್ಥಾನ ಮತ್ತು ಕರ್ನಾಟಕದಲ್ಲಿ ತಲಾ ಒಂದು ಪ್ರಕರಣಗಳು ಕಂಡುಬಂದಿವೆ ಎಂದು ಹೇಳಿದೆ.

ಏತನ್ಮಧ್ಯೆ, ಡಿಸೆಂಬರ್ ಮತ್ತು ಜನವರಿಯಲ್ಲಿ ಕರ್ನಾಟಕದಿಂದ ಕೋವಿಡ್‌ನ ಎಕ್ಸ್‌ಬಿಬಿ ರೂಪಾಂತರಗಳ 189 ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಡಿಸೆಂಬರ್ 2 ರಿಂದ 31 ರವರೆಗೆ ಒಂಟ್ಟು 41 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಜನವರಿ 2 ರಂದು 24 ಪ್ರಕರಣಗಳು ಪತ್ತೆಯಾಗಿವೆ.

INSACOG ಭಾರತದ ರೋಗಿಗಳಲ್ಲಿ ಕೋವಿಡ್ ವೈರಸ್‌ನಲ್ಲಿನ ಜೀನೋಮಿಕ್ ವ್ಯತ್ಯಾಸಗಳನ್ನು ಮೇಲ್ವಿಚಾರಣೆ ಮಾಡುವ 54 ಲ್ಯಾಬ್‌ಗಳ ಒಕ್ಕೂಟವಾಗಿದೆ.

ಇದನ್ನು ಕೇಂದ್ರ ಆರೋಗ್ಯ ಸಚಿವಾಲಯ, ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಕೌನ್ಸಿಲ್ ಫಾರ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಜಂಟಿಯಾಗಿ ಪ್ರಾರಂಭಿಸಿದೆ.

SCROLL FOR NEXT