ಶರವಣ ಮತ್ತು ಎಚ್ ಡಿ ದೇವೇಗೌಡ 
ರಾಜ್ಯ

ಪಕ್ಷ ರಾಜಕಾರಣ ಬದಿಗಿಟ್ಟು ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಗೆ ದೇವೇಗೌಡರ ಹೆಸರಿಡಿ: ಶರವಣ ಪತ್ರ

ಈ ರಸ್ತೆ ಹಾದು ಹೋಗುವ ಉದ್ದಗಲಕ್ಕೂ ಇರುವ ಮಣ್ಣಿನ ಕಣಕಣದಲ್ಲೂ, ರೈತರ ಬೆವರ ಹನಿ ಶ್ರಮದಲ್ಲಿ ದೇವೇಗೌಡರ ಹೆಸರು ಅಭಿಮಾನದಿಂದ ರಾರಾಜಿಸುತ್ತಿದೆ.

ಬೆಂಗಳೂರು: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಇದೀಗ ಹೆಸರಿನ ಕಿತ್ತಾಟಕ್ಕೆ ಒಳಗಾಗುವ ಲಕ್ಷಣಗಳು ಗೋಚರಿಸಿದೆ. ಈ ಹೆದ್ದಾರಿಗೆ ಮೈಸೂರು ರಾಜರ ಹೆಸರನ್ನು ಇಡಬೇಕು ಎಂಬ ಬಗ್ಗೆ ಈಗಾಗಲೇ ಕೆಲವರು ಪ್ರಸ್ತಾಪಿಸಿದ್ದು, ಅದರ ಬೆನ್ನಿಗೇ ದೇವೇಗೌಡರ ಹೆಸರಿಡಬೇಕು ಎಂಬ ಒತ್ತಾಯವೊಂದು ಕೇಳಿಬಂದಿದೆ. ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಈ ಕುರಿತು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು- ಮೈಸೂರು  ದಶಪಥ ಹೆದ್ದಾರಿ ವೀಕ್ಷಣೆಗೆ ಮತ್ತು ವೈಮಾನಿಕ ಸಮೀಕ್ಷೆಗೆ ರಾಜ್ಯಕ್ಕೆ ಧಾವಿಸಿರುವ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಮಂತ್ರಿಗಳಾದ ನಿತಿನ್ ಗಡ್ಕರಿ ಅವರೇ ಈ ಭಾಗದ ಜನರ ಭಾವನೆಗಳನ್ನು ನೀವು ಅರ್ಥ ಮಾಡಿಕೊಂಡಿದ್ದಾದರೆ ಈ ಹೆದ್ದಾರಿಗೆ ಮಾಜಿ ಪ್ರಧಾನಮಂತ್ರಿ, ಕರ್ನಾಟಕದ ಸಾಕ್ಷಿ ಪ್ರಜ್ಞೆಯಾಗಿರುವ ಮಾಜಿ ಪ್ರಧಾನಿ ದೇವೇಗೌಡರ ಹೆಸರಿಡಿ ಎಂದು ವಿಧಾನ ಪರಿಷತ್ ಸದಸ್ಯ ಟಿ. ಎ.ಶರವಣ ಮನವಿ ಮಾಡಿದ್ದಾರೆ.

ಈ ರಸ್ತೆ ಹಾದು ಹೋಗುವ ಉದ್ದಗಲಕ್ಕೂ ಇರುವ ಮಣ್ಣಿನ ಕಣಕಣದಲ್ಲೂ, ರೈತರ ಬೆವರ ಹನಿ ಶ್ರಮದಲ್ಲಿ ದೇವೇಗೌಡರ ಹೆಸರು ಅಭಿಮಾನದಿಂದ ರಾರಾಜಿಸುತ್ತಿದೆ. ದೇವೇಗೌಡರು ಈ ನೆಲದ ಸಾರ್ವಭೌಮ ರಾಜಕಾರಣಿ ಮತ್ತು ಅಜಾತ ಶತ್ರು ಆಗಿದ್ದಾರೆ . ಇದನ್ನು ಮನಗಂಡು ದಿಗ್ಗಜ ನಾಯಕರ ಹೆಸರಿಗೆ ಗೌರವಿಸುವ ದೃಷ್ಟಿಯಿಂದ ಈ ದಶಪಥ ರಸ್ತೆಗೆ ಅವರ ಹೆಸರಿಡುವುದು ಸೂಕ್ತ ಎಂದು ಶರವಣ  ವಿನಂತಿಸಿದ್ದಾರೆ. ಇದರಿಂದ ಮಾಜಿ ಪ್ರಧಾನಿಯಾಗಿರುವ ದೇವೆಗೌಡರಿಗೆ ಗೌರವ ನೀಡದಂತಾಗಲಿದೆ ಎಂದಿದ್ದಾರೆ.

ಕನ್ನಡ ನಾಡಿನ ನೆಲ ಜಲಕ್ಕೆ, ಇಲ್ಲಿಯ ಹಕ್ಕುಗಳಿಗೆ, ನಾಡಿನ ಅಸ್ಮಿತೆಗೆ ದೇವೇಗೌಡರ ಕೊಡುಗೆ  ಅಭೂತಪೂರ್ವ.  ನಾಡಿನ ಜೀವ ನದಿಗಳಾದ ಕಾವೇರಿ ಹೋರಾಟದಿಂದ ಹಿಡಿದು, ಕೃಷ್ಣೆಯ ವರೆಗೂ ಅವರ ಜನಪರ ಆಂದೋಲನ ಕರ್ನಾಟಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಪ್ರಧಾನಿಯಂತಹ ಉನ್ನತ ಹುದ್ದೆಯನ್ನು ಅಲಂಕರಿಸಿದ ಪ್ರಪ್ರಥಮ ಕನ್ನಡಿಗ ಎನ್ನುವ ಹಿರಿಮೆ ದೇವೇಗೌಡರದ್ದು. ಕರ್ನಾಟಕದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಕೊಂಡೊಯ್ದ ಹೆಮ್ಮೆ. ದಶ ಪಥ ರಸ್ತೆಗೆ ಅವರ ಹೆಸರಿಟ್ಟರೆ ಕೇಂದ್ರಕ್ಕೂ ಹೆಸರು ಬರುತ್ತದೆ ಎಂದು ಹೇಳಿದ್ದಾರೆ.

ರಾಜ್ಯದ ಬಿಜೆಪಿ ಸರಕಾರ ಪಕ್ಷ ರಾಜಕಾರಣವನ್ನು ಬದಿಗಿಟ್ಟು, ಬೆಂಗಳೂರು ಮೈಸೂರು ದಶಪಥ ರಸ್ತೆಗೆ ದೇವೇಗೌಡರ ಹೆಸರು ಇಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರಿಗೆ ಶರವಣ ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

TVK ಸರ್ಕಾರ ರಚನೆಯ ಕಸರತ್ತು: ಇಂದು ಮತ್ತೆ ರಾಜ್ಯಪಾಲರನ್ನು ಭೇಟಿ ಮಾಡಿದ ವಿಜಯ್; ಗವರ್ನರ್ ಹೇಳಿದ್ದೇನು?

ಸುವೇಂದು ಅಧಿಕಾರಿ ಆಪ್ತನ ಹತ್ಯೆ ಬೆನ್ನಲ್ಲೇ ಆರ್ ಜಿ ಕರ್ ಸಂತ್ರಸ್ತೆ ತಾಯಿ ಮನೆ ಬಳಿ ಬಾಂಬ್ ದಾಳಿ; 5 ಬಿಜೆಪಿ ಕಾರ್ಯಕರ್ತರಿಗೆ ಗಾಯ

'ಜಾತ್ಯತೀತ ಪಕ್ಷಗಳಿಗೆ ಮುಸ್ಲಿಂ ಮತಗಳು ವ್ಯರ್ಥವಾಗಬಾರದು, ಬದಲಾವಣೆ ಅಗತ್ಯ, ಮುಸ್ಲಿಮರ ಪ್ರತ್ಯೇಕ ನಾಯಕತ್ವಕ್ಕೆ ಇದು ಸಕಾಲ': Asaduddin Owaisi

ಮೋದಿ ಸಮ್ಮುಖದಲ್ಲಿ ಬಿಹಾರ ಸಂಪುಟ ವಿಸ್ತರಣೆ: ನಿತೀಶ್ ಕುಮಾರ್ ಪುತ್ರ ಸೇರಿ 32 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ

'50 ಕೋಟಿ ಖರ್ಚು ಮಾಡುವ ಶಕ್ತಿಯಿಲ್ಲ: ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಗುಡ್ ಬೈ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ'

SCROLL FOR NEXT