ಬೆಂಗಳೂರು: ಇದೇ ಸೋಮವಾರದಿಂದ ಬೆಂಗಳೂರಿನಿಂದ ಗದಗಕ್ಕೆ ಕೆಎಸ್ ಆರ್ ಟಿಸಿ ವೋಲ್ವೊ ಸೇವೆ ಪ್ರಾರಂಭವಾಗಲಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಗದಗಕ್ಕೆ ವೋಲ್ವೊ ಬಸ್ ನ ಅಗತ್ಯವಿದೆ ಎಂದು ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಜೋಶಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದರು.
ಈ ಟ್ವೀಟ್ ಕುರಿತು ಪ್ರತಿಕ್ರಿಯಿಸಿರುವ ಶ್ರೀರಾಮುಲು, ಕೆಎಸ್ ಆರ್ ಟಿಸಿ ಸದಾ ಜನರ ಸೇವೆಯಲ್ಲಿ ತೊಡಗಿದ್ದು, ಇದೇ ಸೋಮವಾರದಿಂದ ಗದಗಕ್ಕೆ ವೊಲ್ವೋ ಬಸ್ ಆರಂಭವಾಗಲಿದೆ. ಪೂಜನೀಯ ಪುಟ್ಟಜ್ಜೋರ ಪುಣ್ಯಭೂಮಿ, ನನ್ನ ಹೃದಯಕ್ಕೆ ಹತ್ತಿರವಾದ ಸ್ಥಳ ಗದಗಕ್ಕೆ ಬಸ್ ಸೇವೆ ಪ್ರಾರಂಭಿಸಲಾಗುತ್ತಿದ್ದು, ಅಲ್ಲಿನ ಜನ ಯಾವಾಗಲೂ ನಗೆ ವಿಶೇಷವೆನಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.