ಸಾಂದರ್ಭಿಕ ಚಿತ್ರ 
ರಾಜ್ಯ

ಲೆಕ್ಕಪರಿಶೋಧನೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ: ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು, ವಿ.ವಿಗಳ ಲೆಕ್ಕಪರಿಶೋಧನೆ ಮೇಲೆ ಹೊಡೆತ!

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ(The Karnataka State Audit and Accounts Department (KSAAD)ಯಲ್ಲಿ ತೀವ್ರ ಸಿಬ್ಬಂದಿ ಕೊರತೆ ಎದುರಾಗಿದೆ. 4,564 ಅನುಮೋದಿತ ಹುದ್ದೆಗಳಲ್ಲಿ ಸರಿಸುಮಾರು ಶೇಕಡಾ 50ರಷ್ಟು ಖಾಲಿ ಉಳಿದುಕೊಂಡಿವೆ. 

ಬೆಂಗಳೂರು: ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ(The Karnataka State Audit and Accounts Department (KSAAD)ಯಲ್ಲಿ ತೀವ್ರ ಸಿಬ್ಬಂದಿ ಕೊರತೆ ಎದುರಾಗಿದೆ. 4,564 ಅನುಮೋದಿತ ಹುದ್ದೆಗಳಲ್ಲಿ ಸರಿಸುಮಾರು ಶೇಕಡಾ 50ರಷ್ಟು ಖಾಲಿ ಉಳಿದುಕೊಂಡಿವೆ. 

ಇದರಿಂದ ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಲೆಕ್ಕಪರಿಶೋಧನೆಗೆ ಇದರಿಂದ ತೀವ್ರ ತೊಂದರೆಯಾಗುತ್ತಿದೆ. ಸಿಬ್ಬಂದಿ ಕೊರತೆಯಿಂದಾಗಿ ಇಲ್ಲಿ ಅಧಿಕಾರಿಗಳು ಕೂಲಂಕಷವಾಗಿ ಸಂಪೂರ್ಣ ಆಡಿಟಿಂಗ್ ನಡೆಸದೆ ರ್ಯಾಂಡಮ್ ಆಗಿ ಮಾಡುತ್ತಿದ್ದಾರೆ. 

TNIE-ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಅನುಮೋದನೆಗೊಂಡ 4,564 ಹುದ್ದೆಗಳ ಪೈಕಿ 2,400 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಅಂದರೆ ಇಲಾಖೆಯಲ್ಲಿ ಶೇಕಡಾ 48ರಷ್ಟು ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇವುಗಳಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹೆಚ್ಚಿನ ಹುದ್ದೆಗಳಾಗಿವೆ. ಗ್ರೂಪ್ ಸಿ ಹುದ್ದೆಗಳೆಂದರೆ ಲೆಕ್ಕಪತ್ರ ಆಡಿಟರ್, ಅಕೌಂಟ್ ಸೂಪರಿಂಟೆಂಡೆಂಟ್ ಮತ್ತು ಅಕೌಂಟ್ ಸಹಾಯಕ ಹುದ್ದೆಗಳು, ಇವರು ಆಟಿಟಿಂಗ್ ನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಪ್ರತಿ ಸಂಸ್ಥೆಯನ್ನು ದಿನದ ಕೆಲಸದ ಅವಧಿಯಲ್ಲಿ ಲೆಕ್ಕಪರಿಶೋಧನೆ ಮಾಡಲಾಗುತ್ತದೆ. ಗ್ರಾಮ ಪಂಚಾಯತಿಯಲ್ಲಿ ನಾಲ್ಕರಿಂದ ಆರು ದಿನಗಳವರೆಗೆ ಲೆಕ್ಕಪರಿಶೋಧನೆಗೆ ಒಳಗಾಗುತ್ತದೆ, ಆದರೆ ನಗರ ಸ್ಥಳೀಯ ಸಂಸ್ಥೆಗಳು 400 ರಿಂದ 600 ದಿನಗಳನ್ನು ತೆಗೆದುಕೊಳ್ಳುತ್ತವೆ. ದಿನಗಳ ಸಂಖ್ಯೆಯು ವಹಿವಾಟಿನ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಹೆಚ್ಚಿನ ವಹಿವಾಟುಗಳಿಗೆ ಹೆಚ್ಚಿನ ಕೆಲಸದ ಅವಧಿ ಬೇಕಾಗುತ್ತದೆ. ನಾವು ಕಡಿಮೆ ಸಂಖ್ಯೆಯ ಸಿಬ್ಬಂದಿಯನ್ನು ಹೊಂದಿರುವುದರಿಂದ, ಲೆಕ್ಕಪರಿಶೋಧನೆಯನ್ನು ಪೂರ್ಣಗೊಳಿಸಲು ಹೆಚ್ಚು ದಿನಗಳನ್ನು ತೆಗೆದುಕೊಳ್ಳುತ್ತೇವೆ ಅಥವಾ ಹೆಚ್ಚಿನ ಸಮಯವನ್ನು ನಾವು ಯಾದೃಚ್ಛಿಕ ಲೆಕ್ಕಪರಿಶೋಧನೆಗೆ ಹೋಗುತ್ತೇವೆ ಇದರಿಂದ ಲೆಕ್ಕಪರಿಶೋಧನೆ ನಿಕರವಾಗುವುದಿಲ್ಲ ಎಂದು ಹಿರಿಯ ಅಧಿಕಾರಿಗಳೊಬ್ಬರು ಹೇಳುತ್ತಾರೆ.

ಇದರ ಹೊರತಾಗಿ, ಈಗಿರುವ ಸಿಬ್ಬಂದಿಯ ಕೆಲಸದ ಹೊರೆ ಬಹುತೇಕ ದುಪ್ಪಟ್ಟಾಗಿರುವುದರಿಂದ ಅವರ ಮೇಲೆ ಹೊರೆಯಾಗಿದೆ. "ಕೆಲವು ಸಂದರ್ಭಗಳಲ್ಲಿ, ಅವರು ಕೆಲಸದಲ್ಲಿ ಹಿಂದುಳಿಯುತ್ತಾರೆ. .ನಾವು ವಿವಿಧ ಏಜೆನ್ಸಿಗಳು ಅಥವಾ ಸ್ಥಳಗಳಿಗೆ ಲೆಕ್ಕಪರಿಶೋಧನೆಗಾಗಿ ಅಧಿಕಾರಿಗಳನ್ನು ನಿಯೋಜಿಸುತ್ತೇವೆ ಎಂದು ಇನ್ನೊಬ್ಬ ಅಧಿಕಾರಿ ಹೇಳುತ್ತಾರೆ. ಇತ್ತೀಚೆಗೆ 242 ಪ್ರಥಮ ವಿಭಾಗದ ಸಹಾಯಕರು, 67 ದ್ವಿತೀಯ ವಿಭಾಗದ ಸಹಾಯಕರು, 54 ಲೆಕ್ಕ ಪರಿಶೋಧಕರು ಮತ್ತು 43 ಸಹಾಯಕ ನಿಯಂತ್ರಕರ ನೇಮಕಾತಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಹಣಕಾಸು ಇಲಾಖೆಯೂ ಸಮ್ಮತಿ ಸೂಚಿಸಿದೆ. ಆದಾಗ್ಯೂ, ಈ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT