ಮೆಟ್ರೋ ಪಿಲ್ಲರ್ ಕುಸಿದು ಬಿದ್ದಿರುವುದು. 
ರಾಜ್ಯ

ಸಂಚಾರ ಬಂದ್ ಮಾಡಿ, ಮೆಟ್ರೋ ನಿರ್ಮಾಣ ಕಾರ್ಯವನ್ನು ರಾತ್ರಿ ವೇಳೆ ಮಾಡಬೇಕು: ತಜ್ಞರು

ನಮ್ಮ ಮೆಟ್ರೊ ಕಾಮಗಾರಿಯಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿರುವ ತಜ್ಞರು ಮತ್ತು ಸಿವಿಲ್ ಎಂಜಿನಿಯರಿಂಗ್ ಸಲಹೆಗಾರರು ಸಂಚಾರ ಬಂದ್ ಮಾಡಿ, ಮೆಟ್ರೋ ನಿರ್ಮಾಣ ಕಾರ್ಯವನ್ನು ರಾತ್ರಿ ಸಮಯದಲ್ಲಿ ಮಾಡಬೇಕೆಂದು ಶಿಫಾರಸು ಮಾಡಿದ್ದಾರೆ.

ಬೆಂಗಳೂರು: ನಮ್ಮ ಮೆಟ್ರೊ ಕಾಮಗಾರಿಯಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿರುವ ತಜ್ಞರು ಮತ್ತು ಸಿವಿಲ್ ಎಂಜಿನಿಯರಿಂಗ್ ಸಲಹೆಗಾರರು ಸಂಚಾರ ಬಂದ್ ಮಾಡಿ, ಮೆಟ್ರೋ ನಿರ್ಮಾಣ ಕಾರ್ಯವನ್ನು ರಾತ್ರಿ ಸಮಯದಲ್ಲಿ ಮಾಡಬೇಕೆಂದು ಶಿಫಾರಸು ಮಾಡಿದ್ದಾರೆ.

ಎಚ್‌ಬಿಆರ್ ಲೇಔಟ್‌ನ ಹೊರ ವರ್ತುಲ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಪಿಲ್ಲರ್ ಬಿದ್ದು ತಾಯಿ ಮತ್ತು ಮಗ ಸಾವನ್ನಪ್ಪಿದ್ದರು, ಘಟನೆ ಬೆನ್ನಲ್ಲೇ ಸುರಕ್ಷತಾ ನಿಯಮಗಳ ರೂಪಿಸಿ, ಅವುಗಳನ್ನು ಪರಿಣಾಮಕಾರಿ ರೀತಿಯಲ್ಲಿ ಜಾರಿಗೊಳಿಸಬೇಕೆಂದು ತಜ್ಞರು ತಿಳಿಸಿದ್ದಾರೆ.

ಇಂತರ ಕ್ರಮಗಳು ಇತರೆ ದೇಶಗಳಲ್ಲಿ ಈಗಾಗಲೇ ಜಾರಿಯಲ್ಲಿವೆ. ಅವುಗಳನ್ನು ಪರಿಣಾಮಕಾರಿ ರೀತಿಯಲ್ಲಿ ಅನುಸರಿಸಲಾಗುತ್ತಿದೆ. ಆದರೆ, ನಮ್ಮಲ್ಲಿ ದೊಡ್ಡ ಮಟ್ಟದ ಯೋಜನೆಗೆ ಅಂತಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇಂತಹ ದೊಡ್ಡ ದೊಡ್ಡ ಕಾಮಗಾರಿ ಕಾರ್ಯಗಳನ್ನು ರಾತ್ರಿ ಸಮಯದಲ್ಲಿ ಮಾಡಬೇಕು. ಕೆಲಸ ಮಾಡುವಾಗ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

“ಇಂತಹ ಎತ್ತರದ ಪಿಲ್ಲರ್ ಗಳನ್ನು ಹಾಕುವಾಗ, ಪೂರ್ವನಿರ್ಮಿತ ಕಾಲಮ್‌ಗಳನ್ನು ಸೈಟ್‌ಗೆ ತರಬೇಕು. ಹಾಗೂ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿದ್ದರೆ ಪಿಲ್ಲರ್‌ಗಳನ್ನು ನಿರ್ಮಿಸಲು ಕೆಲ ದಿನಗಳ ಗಡುವು ನೀಡಬೇಕು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ವರ್ಷಗಟ್ಟಲೆ ಕಾಮಗಾರಿ ನಡೆಸಲು ಬಿಡಬಾರದು. ತಾತ್ತ್ವಿಕವಾಗಿ, ನಿರ್ಮಾಣ ಕಾರ್ಯವನ್ನು ರಾತ್ರಿ ಸಮಯದಲ್ಲಿ ಕಾರ್ಯಗತಗೊಳಿಸಬೇಕು ಮತ್ತು ಆ ಸಮಯದಲ್ಲಿ ಸಂಚಾರಕ್ಕೆ ಅನುಮತಿ ನೀಡಬಾರದು. ಇದನ್ನು ದೆಹಲಿ ಮೆಟ್ರೋದಲ್ಲಿ, ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಅನುಸರಿಸುತ್ತಿದ್ದಾರೆಂದು ತಿಳಿಸಿದ್ದಾರೆ.

ಈ ನಡುವೆ ಸಿವಿಲ್ ಎಂಜಿನಿಯರಿಂಗ್ ಸಲಹೆಗಾರರೊಬ್ಬರು ಮಾತನಾಡಿ, ನಿರ್ಮಾಣ ಸಾಮಗ್ರಿಗಳು ಕುಸಿದಿರುವುದು ಇದೇ ಮೊದಲೇನಲ್ಲ ಎಂದಿದ್ದಾರೆ.

ಎಂಜಿ ರಸ್ತೆಯಿಂದ ಬೈಯಪನಹಳ್ಳಿ ಲೈನ್‌ನಲ್ಲಿ ಕಾಮಗಾರಿ ನಡೆಯುತ್ತಿದ್ದಾಗ ನಿಲುಗಡೆ ಮಾಡಲಾಗಿದ್ದ ಕಾರುಗಳು ಮತ್ತು ಫುಟ್‌ಪಾತ್‌ಗಳ ಮೇಲೆ ನಿರ್ಮಾಣ ಸಾಮಗ್ರಿಗಳು ಬಿದ್ದಿದ್ದವು, ಆದರೆ, ಅದೃಷ್ಟವಶಾತ್ ಜನರ ಮೇಲೆ ಬಿದ್ದಿರಲಿಲ್ಲ. "ಕಾಮಗಾರಿಗಳ ಕಾರ್ಯಗತಗೊಳಿಸುವಿಕೆಯಲ್ಲಿ ಮೆಟ್ರೋಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಅಧಿಕಾರಿಗಳು ಭದ್ರತಾ ಅಂಶಗಳಿಗೆ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನ ರಸ್ತೆಗಳು ತುಂಬಾ ಕಿರಿದಾಗಿರುವುದರಿಂದ ಸುರಕ್ಷತೆಯ ಅಂತರವನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

''12-18 ಮೀಟರ್‌ ಎತ್ತರದ ಪಿಲ್ಲರ್‌ ನಿರ್ಮಿಸುವಾಗ ಹೆಚ್ಚುವರಿಯಾಗಿ ನಾಲ್ಕು ಮೀಟರ್‌ ಅಂತರವಿದ್ದರೂ ಪ್ರಯೋಜನವಾಗುವುದಿಲ್ಲ. ರಾತ್ರಿ ವೇಳೆಯಲ್ಲಿ ಮಾತ್ರ ಕಾಮಗಾರಿಗಳನ್ನು ನಿರ್ವಹಿಸುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಯೋಜನಾ ಅವಧಿಯನ್ನು ಹೆಚ್ಚಿಸಿ, ಕಾಮಗಾರಿ ವೇಳೆ ಸಂಚಾರವನ್ನು ಬಂದ್ ಮಾಡಬೇಕೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT