ರಾಜ್ಯ

ಚಿರತೆ ಕಾಟ: ಬೆಂಗಳೂರು ವಿವಿ ವಿದ್ಯಾರ್ಥಿಗಳು, ಅಧ್ಯಾಪಕರಿಗೆ ಮುನ್ನೆಚ್ಚರಿಕೆಯ ಸೂಚನೆ

Nagaraja AB

ಬೆಂಗಳೂರು: ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತಿತರ ಸಿಬ್ಬಂದಿಗೆ ಬೆಂಗಳೂರು ವಿಶ್ವವಿದ್ಯಾಲಯ ಮುನ್ನೆಚ್ಚರಿಕೆಯ ಸೂಚನೆ ನೀಡಿದೆ.

ಇಂತಹ ವರದಿಗಳ ಹಿನ್ನೆಲೆಯಲ್ಲಿ ಗುರುವಾರ ಬೆಂಗಳೂರು ವಿವಿ ರಿಜಿಸ್ಟ್ರರ್ ಸುತ್ತೋಲೆ ಹೊರಡಿಸಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಪತ್ರ ಕಳುಹಿಸಲಾದ ಪತ್ರದಲ್ಲಿ ಅವರು ಒತ್ತಾಯಿಸಿದ್ದಾರೆ. 

ಕ್ಯಾಂಪಸ್ ನಲ್ಲಿ ಚಿರತೆ ಪ್ರತ್ಯಕ್ಷ ಕುರಿತು ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿನ ವರದಿ ಹಿನ್ನೆಲೆಯಲ್ಲಿ ವಿವಿಯ ಎಲ್ಲಾ ವಿದ್ಯಾರ್ಥಿಗಳು  ವಿಶೇಷವಾಗಿ ಹಾಸ್ಟೆಲ್ ನಲ್ಲಿ ತಂಗಿರುವವರು, ಬೋಧನಾ ಸಿಬ್ಬಂದಿ ಮತ್ತಿತರ ಸಿಬ್ಬಂದಿ ರಾತ್ರಿ ವೇಳೆಯಲ್ಲಿ ಸಂಚರಿಸುವುದನ್ನು ತಡೆಯಬೇಕು, ಒಂದು ವೇಳೆ ಚಿರತೆ ಕಂಡುಬಂದಿಲ್ಲ ಉನ್ನತ  ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸುತ್ತೋಲೆಯಲ್ಲಿ ಹೇಳಲಾಗಿದೆ. 

ಕಳೆದ ತಿಂಗಳು ಬೆಂಗಳೂರು ದಕ್ಷಿಣ ವಲಯ ಮತ್ತು ಕನಕಪುರ ರಸ್ತೆಯ ತುರಹಳ್ಳಿ ಅರಣ್ಯದ ಸುತ್ತಮುತ್ತ ಚಿರತೆ ಕಾಣಿಸಿಕೊಂಡು ಜನರಲ್ಲಿ ಭೀತಿಯನ್ನುಂಟು ಮಾಡಿತ್ತು. ಎರಡು ಚಿರತೆಗಳು ತುರಹಳ್ಳಿ ಅರಣ್ಯದಲ್ಲಿರುವ ಬಗ್ಗೆ ಅರಣ್ಯ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು.

SCROLL FOR NEXT