ರಾಜ್ಯ

ಬೆಂಗಳೂರು: ಪ್ರತ್ಯೇಕ ಅಪಘಾತದಲ್ಲಿ ಮೂವರ ಸಾವು

Manjula VN

ಬೆಂಗಳೂರು: ನಗರದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

ವೇಗವಾಗಿ ಬಂದ ಲಾರಿಯೊಂದು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿದ್ದು, ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಗಡಿ ರಸ್ತೆಯಲ್ಲಿ ನಡೆದಿದೆ.

ಮೃತರು ರಾಮನಗರದ ಸುಂಕದಕಟ್ಟೆ ನಿವಾಸಿ ರವಿಕುಮಾರ್ ಯಾದವ್ (28) ಮತ್ತು ಸುಮನಹಳ್ಳಿಯ ನಿವಾಸವಾಗಿರುವ ಆಂಧ್ರಪ್ರದೇಶ ಮೂಲದ ವಿಕಾಸ್ (20) ಎಂದು ಗುರ್ತಿಸಲಾಗಿದೆ. ಇಬ್ಬರೂ ಸುಂಕದಕಟ್ಟೆಯ ಕಾರ್ ಶೋ ರೂಂವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸೋಮವಾರ ರಾತ್ರಿ 9.15ರ ಸುಮಾರಿಗೆ ಅಂಜನಾನಗರದ ಮಾಗಡಿ ರಸ್ತೆಯಲ್ಲಿ ವೇಗವಾಗಿ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಈ ಬೈಕ್ ಮುಭಾಗದಲ್ಲಿದ್ದ ಸ್ಕೂಟರ್'ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಭವಾನಿ ಸಿಂಗ್ ಎಂಬ ಮಹಿಳೆ ಗಾಯಗೊಂಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತೊಂದು ಘಟನೆ ಬಾಣಸವಾಡಿ ಹೊಸ ವರ್ತುಲ ಮುಖ್ಯ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಬಿಹಾರ ಮೂಲದ ಗುಡ್ಡು ಮಾಂಝಿ (37) ಎಂಬುವರು ಮೃತಪಟ್ಟಿದ್ದಾರೆ. ಹೊರ ವರ್ತುಲ ಮುಖ್ಯರಸ್ತೆಯ ಮದರ್ ವುಡ್ ಆಸ್ಪತ್ರೆ ಬಳಿ ಮೆಟ್ರೋ ಬ್ಯಾರಿಕೇಡ್ ಗಳನ್ನು ನಸುಕಿನ 4.30ರ ಸುಮಾರಿಗೆ ಸ್ವಚ್ಛತೆಯಲ್ಲಿ ಮಾಂಝಿ ನಿರತರಾಗಿದ್ದರು. ಈ ವೇಳೆ ಅತಿವೇಗವಾಗಿ ಬಂದ ಟಾಟಾ ಏಸ್ ಚಾಲನ ನಿಯಂತ್ರಣ ತಪ್ಪಿ ಮೊದಲು ಬ್ಯಾರಿಕೇಡ್'ಗೆ ಡಿಕ್ಕಿ ಹೊಡೆದು ನಂತರ ಮಾಂಝಿಗೆ ಗುದ್ದಿದೆ, ಘಟನೆಯಲ್ಲಿ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿ ಮಾಂಝಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

SCROLL FOR NEXT