ರಾಜ್ಯ

ಬಿಬಿಎಂಪಿ ಆಸ್ಪತ್ರೆಗೆ ಟಿಬಿ ಯಂತ್ರಗಳ ಕೊಡುಗೆಯಾಗಿ ನೀಡಿದ ಸಂಸದ ಲೆಹರ್ ಸಿಂಗ್

Manjula VN

ಬೆಂಗಳೂರು: ರಾಜ್ಯಸಭಾ ಸಂಸದ ಲೆಹರ್ ಸಿಂಗ್ ಅವರು ತಮ್ಮ ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ (ಎಂಪಿ ಲ್ಯಾಡ್)ಯಿಂದ ಚಾಮರಾಜಪೇಟೆಯ ಡಾ ಬಾಬು ಜಗಜೀವನ್ ರಾಮ್ ಬಿಬಿಎಂಪಿ ರೆಫರಲ್ ಆಸ್ಪತ್ರೆಗೆ ಸಿಬಿಎನ್‍ಎಎಟಿ ಯಂತ್ರ ಮತ್ತು ಮೊಬೈಲ್ ಹ್ಯಾಂಡ್‌ಹೆಲ್ಡ್ ಎಕ್ಸ್-ರೇ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ.

ರೋಗ ಪತ್ತೆ ಹಚ್ಚುವಿಕೆಗೆ ಉನ್ನತ ತಾಂತ್ರಿಕತೆ ಹೊಂದಿರುವ ಸಿಬಿಎನ್‍ಎಎಟಿ ಯಂತ್ರ ಸಹಾಯ ಮಾಡುತ್ತದೆ. ಈ ಯಂತ್ರವು ಎರಡು ಗಂಟೆಗಳೊಳಗೆ ಫಲಿತಾಂಶವನ್ನು ಒದಗಿಸಲಿದೆ.

50 ಲಕ್ಷ ಮೌಲ್ಯದ ಉಪಕರಣಗಳು ಟಿಬಿ ರೋಗನಿರ್ಣಯಕ್ಕೆ ಸಹಾಯ ಮಾಡುತ್ತವೆ. CBNAAT ಯಂತ್ರವು ಎರಡು ಗಂಟೆಗಳೊಳಗೆ ಫಲಿತಾಂಶಗಳನ್ನು ಒದಗಿಸುತ್ತದೆ. ಆರೋಗ್ಯ ಸೌಲಭ್ಯಗಳಿಂದ ವಂಚಿತವಾದ ಪ್ರದೇಶಗಳಲ್ಲಿ ಸಮುದಾಯಗಳನ್ನು ಕ್ಷಯ ಪರೀಕ್ಷೆಗೊಳಪಡಿಸಲು ಮೊಬೈಲ್‌ ಎಕ್ಸ್‌-ರೇ ಯಂತ್ರ ನೆರವಾಗಲಿದೆ. ಇವುಗಳಿಗೆ ಒಟ್ಟು 50 ಲಕ್ಷ ರೂಪಾಯಿ ವೆಚ್ಚವಾಗಿದೆ.

ಲೆಹರ್‌ ಸಿಂಗ್‌ ಮಾತನಾಡಿ, “ಆಧುನಿಕ ತಪಾಸಣಾ ವ್ಯವಸ್ಥೆಯುಳ್ಳ ಸಿಬಿನಾಟ್ ಮತ್ತು ತ್ವರಿತ ಖಚಿತ ಫಲಿತಾಂಶ ನೀಡುವುದನ್ನು ತಿಳಿಸುವ ಮೊಬೈಲ್‌ ಎಕ್ಸ್‌-ರೇ ಉಪಕರಣ ಕ್ಷಯವನ್ನು ಮಣಿಸಲು ಸಹಕಾರಿ. ಪ್ರಧಾನಮಂತ್ರಿ ಕ್ಷಯ-ಮುಕ್ತ ಭಾರತ ಅಭಿಯಾನದಲ್ಲಿ ಎಲ್ಲರೂ ತಮ್ಮ ಕೈಲಾದ ಕೊಡುಗೆ ನೀಡಬೇಕು. 2025 ರೊಳಗೆ ಕರ್ನಾಟಕವನ್ನು ಕ್ಷಯ ಮುಕ್ತಗೊಳಿಸಲು ಕೈ ಜೋಡಿಸಬೇಕು” ಎಂದು ಮನವಿ ಮಾಡಿದರು.

SCROLL FOR NEXT