ಸಾಂದರ್ಭಿಕ ಚಿತ್ರ 
ರಾಜ್ಯ

ಬೀದರ್: ಹಾಲುಗಲ್ಲದ ಹಸುಗೂಸುಗಳಿಗೆ ವಿಷವುಣಿಸಿ, ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ನಿಲಮನಹಳ್ಳಿ ತಾಂಡಾದಲ್ಲಿ ನಡೆದಿದೆ.

ಬೀದರ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ನಿಲಮನಹಳ್ಳಿ ತಾಂಡಾದಲ್ಲಿ ನಡೆದಿದೆ.

25 ವರ್ಷದ ಮೀರಾಬಾಯಿ ತನ್ನ ಮೂರು ಮತ್ತು ಎರಡು ವರ್ಷದ ಮಕ್ಕಳಾದ ನಚ್ಚುಬಾಯಿ ಮತ್ತು ಗೋಲುಬಾಯಿಗೆ ವಿಷ ಉಣಿಸಿದ್ದಾರೆ. ಅವೆರಡೂ ನಿದ್ದೆಯಲ್ಲೇ ಉಸಿರು ನಿಲ್ಲಿಸುತ್ತಿದ್ದಂತೆಯೇ ಮೀರಾಬಾಯಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನಾ ಸ್ಥಳಕ್ಕೆ ಧನ್ನೂರು ಪೊಲೀಸರು ದೌಡಾಯಿಸಿದ್ದಾರೆ. ಗಂಡನ ಮನೆಯವರ ಹಿಂಸೆ, ಮಾನಸಿಕ ಒತ್ತಡ ತಡೆಯಲಾಗದೆ ಮೀರಾಬಾಯಿ ಈ ಕೃತ್ಯ ನಡೆಸಿದ್ದಾರೆ ಎಂಬ ಮಾತು ಪರಿಸರದಲ್ಲಿ ಕೇಳಿಬರುತ್ತಿದೆ. ಪೊಲೀಸರು ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಾಡೆಲ್​ ತ್ವಿಷಾ ಶರ್ಮಾ ನಿಗೂಢ ಸಾವು ಪ್ರಕರಣ: CBI ತನಿಖೆಗೆ ಸುಪ್ರೀಂಕೋರ್ಟ್ ಅಸ್ತು, ಸಾಕ್ಷ್ಯ-ಹೇಳಿಕೆಗಳ ಪ್ರಕಟಿಸದಂತೆ ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಸೂಚನೆ..!

ಮತ್ತೆ ಏರಿದ ಇಂಧನ ದರ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳ; 2 ವಾರಗಳಲ್ಲಿ ರೂ. 7.5 ಏರಿಕೆ, ತೈಲ ಕಂಪನಿಗಳಿಂದ ವಾಹನ ಸವಾರರಿಗೆ ಮತ್ತೆ ಶಾಕ್..!

ನಿತಿನ್ ನಬೀನ್ ಭೇಟಿ ಬಳಿಕ BJP ನಾಯಕತ್ವ ಚರ್ಚೆ ಮತ್ತೆ ಮುನ್ನೆಲೆಗೆ: ವಿಜಯೇಂದ್ರ ಭವಿಷ್ಯ ಕುರಿತು ಹೆಚ್ಚಿದ ಕುತೂಹಲ; ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ತೀವ್ರ..!

ಬೆಂಗಳೂರು ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್‌ಗಳೇ ಕಾರಣ? ‘Heat island’ ಪರಿಣಾಮ ಕುರಿತು ತಜ್ಞರ ಗಂಭೀರ ಎಚ್ಚರಿಕೆ..!

SIR ಹೆಸರಿನಲ್ಲಿ ಮತದಾರರ ಹೆಸರು ಡಿಲೀಟ್ ಆರೋಪ; war room ಸ್ಥಾಪಿಸಿದ ಕಾಂಗ್ರೆಸ್, ಎಚ್ಚರ ವಹಿಸುವಂತೆ 'ಕೈ' ನಾಯಕರಿಗೆ ಸಿದ್ದು-ಡಿಕೆಶಿ ಸೂಚನೆ

SCROLL FOR NEXT