ರಾಜ್ಯ

ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಜ.27ರಂದು ಇಪಿಎಫ್ಒ ನಿಂದ 'ನಿಧಿ ಆಪ್ಕೆ ನಿಕಟ್ 2.0' ಆಯೋಜನೆ

Prasad SN

ಬೆಂಗಳೂರು: ಎಲ್ಲಾ ಕೆಲಸಗಾರರು/ಉದ್ಯೋಗಿಗಳು, ಉದ್ಯೋಗದಾತರು, ಉದ್ಯೋಗದಾತರ ಸಂಘಗಳು, ಪಿಂಚಣಿದಾರರು, ಕಾರ್ಮಿಕ ಸಂಘಗಳು, ಎನ್ ಜಿಒಗಳು ಇತರರು ತಮ್ಮ ಕುಂದುಕೊರತೆಗಳನ್ನು ಮತ್ತು ಇಪಿಎಫ್ಒ ಜೊತೆ ಬಾಕಿ ಇರುವ ಸಮಸ್ಯೆಗಳ ಪರಿಹಾರಕ್ಕಾಗಿ 'ನಿಧಿ ಆಪ್ಕೆ ನಿಕಟ್ 2.0'ನಲ್ಲಿ ಭಾಗವಹಿಸಲು ಮತ್ತು ಕಾಯಿದೆ ಮತ್ತು ಸ್ಕೀಮ್ ನಿಬಂಧನೆಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಲು ವಿನಂತಿಸಲಾಗಿದೆ. 

ಜನವರಿ 27, 2023 ರಂದು ಆಡಿಟೋರಿಂ ಹಾಲ್, 2ನೇ ಮಹಡಿ, ಯುನೈಟೆಡ್ ಮಿಷನ್ ಪಿಯು ಮತ್ತು ಪದವಿ ಕಾಲೇಜು, ಸಿಎಸ್ಐ ಕರ್ನಾಟಕ ಸೆಂಟ್ರಲ್ ಡಯಾಸಿಸ್, ಮಿಷನ್ ರಸ್ತೆ, ಬೆಂಗಳೂರು-560027 ರಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ನಿಗದಿಪಡಿಸಲಾಗಿದೆ.

ಯಾವುದೇ ಪ್ರಶ್ನೆಗೆ ಸ್ಥಿರ ದೂರವಾಣಿ ಸಂಖ್ಯೆ 080-22249133 ಮತ್ತು ಇಮೇಲ್ ro.bangalore2@epfindia.gov.in ಅನ್ನು ಸಂಪರ್ಕಿಸಲು ವಿನಂತಿಸಲಾಗಿದೆ. 

ಶಿವಮೊಗ್ಗ: ಶಿವಮೊಗ್ಗ ನಗರದಲ್ಲು ಸಹ 'ನಿಧಿ ಆಪ್ಕೆ ನಿಕಟ್ 2.0' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜನವರಿ 27, 2023 ರಂದು ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, ಕೆ ಟಿ ಶಾಮಿಯಾ ರಸ್ತೆ, ಶಿವಮೊಗ್ಗ, ಇಲ್ಲಿ ಬೆಳಿಗ್ಗೆ 9 ರಿಂದ ಕಾರ್ಯಕ್ರಮ ಪ್ರಾರಂಭವಾಗುವುದು. ವಿಚಾರಣೆಗಾಗಿ ಸಂಪರ್ಕಿಸಿ: 08182-275105/275104.

ಇಪಿಎಫ್ ಮತ್ತು ಎಂಪಿ ಕಾಯಿದೆ, 1952, ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಮೇಲೆ ಕೇಂದ್ರೀಕರಿಸಿ ಹೊಸದಾಗಿ ಸೇರಿರುವ ಸಂಸ್ಥೆಗಳಿಗೆ ಪ್ರತ್ಯೇಕ ಓರಿಯಂಟೇಶನ್ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

SCROLL FOR NEXT