ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರ ಸಾವು 
ರಾಜ್ಯ

ಮಂಡ್ಯ: ಹಳಿ ದಾಟುವಾಗ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರ ಸಾವು

ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿ ಓರ್ವ ಮಹಿಳೆ ಹಾಗೂ ಓರ್ವ ವೃದ್ಧೆ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಮಂಡ್ಯ: ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿ ಓರ್ವ ಮಹಿಳೆ ಹಾಗೂ ಓರ್ವ ವೃದ್ಧೆ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಬುಧವಾರ ಬೆಳಗ್ಗೆ 9 ಗಂಟೆಗೆ ಮೈಸೂರಿನಿಂದ  ಮಂಡ್ಯಗೆ ಸಾವಿರಾರು ಜನರನ್ನು ಹೊತ್ತು ಬಂದ ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲು ಇಬ್ಬರು ಪ್ರಾಣ ಪಕ್ಷಿಯನ್ನು ಹಾರಿಸಿದೆ. ಓರ್ವ ಮಹಿಳೆ ಹಾಗೂ ಓರ್ವ ವೃದ್ಧೆ ಬೆಂಗಳೂರಿನಿಂದ ರೈಲಿನಲ್ಲಿ ಬಂದಿಳಿದು ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದರು.

ಈ ವೇಳೆ ಪೇಟೆ ಬೀದಿಯ ರೈಲ್ವೆ ಜಂಕ್ಷನ್‌ ದಾಟುವ ವೇಳೆ ಮಾಲ್ಗುಡಿ ಎಕ್ಸ್‌ಪ್ರೆಸ್‌ ವೇಗವಾಗಿ ಬಂದಿದೆ. ಇದನ್ನು ಕಂಡ ಜನರು ಇಬ್ಬರನ್ನು ಕೂಗಿಕೊಂಡಿದ್ದಾರೆ. ರೈಲು ಬರುವ ಶಬ್ಧಕ್ಕೆ ಜನರ ಕೂಗು ಆ ಇಬ್ಬರಿಗೆ ಕೇಳಿಲ್ಲ. ನಂತರ ರೈಲು ಬಂದು ಮಹಿಳೆ ಹಾಗೂ ವೃದ್ಧೆಯ ಮೇಲೆ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರೈಲಿಗೆ ಸಿಕ್ಕಿ ಸಾವನ್ನಪ್ಪಿದ ಮಹಿಳೆ ಮಂಡ್ಯದ ಬಸರಾಳು ಸಮೀಪದ ಹುರುಳಿಜವರನಕೊಪ್ಪಲು ಗ್ರಾಮದ ಶಶಿ ಎಂದು ತಿಳಿದುಬಂದಿದೆ. ಶಶಿ ಹಾಗೂ ಸಂಸಾರ ಬೆಂಗಳೂರಿನಲ್ಲಿ ವಾಸವಾಗಿದ್ದು, ಇಂದು ಬೆಂಗಳೂರಿನಿಂದ ಹುರುಳಿಜವರನಕೊಪ್ಪಲು ಗ್ರಾಮಕ್ಕೆ ಹೋಗಲು ರೈಲಿನಿಂದ ಮಂಡ್ಯಗೆ ಬಂದಿದ್ದಾರೆ. ಈ ವೇಳೆ ರೈಲ್ವೆ ಹಳಿಯನ್ನು ದಾಟುವಾಗ ಈ ಅವಘಡ ಜರುಗಿದೆ. ಇನ್ನೂ ಸಾವನ್ನಪ್ಪಿರುವ ವೃದ್ಧೆಯ ತಲೆ ನಜ್ಜುಗುಜ್ಜು ಆಗಿರುವ ಕಾರಣ ಆಕೆಯ ಗುರುತು ಇನ್ನೂ ಪತ್ತೆಯಾಗಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಕಾವೇರಿ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ಆರಂಭ, ಡಿಕೆಶಿ ಎದುರೇ ‘5 ವರ್ಷ ಸಿದ್ದರಾಮಯ್ಯ ಸಿಎಂ’ ಘೋಷಣೆ ಕೂಗಿದ ಅಭಿಮಾನಿಗಳು..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಶಿಫ್ಟ್: ಅಹಿಂದ ಸಮೀಕರಣಕ್ಕೆ ಮಾಸ್ಟರ್‌ಪ್ಲ್ಯಾನ್, ಸತೀಶ್‌ ಜಾರಕಿಹೊಳಿಗೆ KPCC ಜವಾಬ್ದಾರಿ?

SCROLL FOR NEXT