ರಾಜ್ಯ

ಮೈಸೂರಿನಲ್ಲಿ ಬಾಲಕನ ಬಲಿ ಪಡೆದ ಚಿರತೆ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Sumana Upadhyaya

ಮೈಸೂರು : ಜಿಲ್ಲೆಯಲ್ಲಿ 11 ವರ್ಷದ ಬಾಲಕನನ್ನು ಬಲಿ ಪಡೆದ ಚಿರತೆಯನ್ನು ಕೊನೆಗೂ ಇಂದು ಗುರುವಾರ ಬೆಳಗ್ಗೆ ಸೆರೆ ಹಿಡಿದಿದ್ದು, ಗ್ರಾಮಸ್ಥರು ನಿಟ್ಟುಸಿರುವ ಬಿಟ್ಟಂತಾಗಿದೆ.

ಕಳೆದ ಹಲವು ತಿಂಗಳಿಂದ ಚಿರತೆ ಅಟ್ಟಹಾಸ ಮೆರೆಯುತ್ತಿದ್ದು, ಜನವರಿ 12ರಂದು ಟಿ ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ 11 ವರ್ಷದ ಬಾಲಕನನ್ನು ಬಲಿ ಪಡೆದ ಚಿರತೆಯನ್ನು ಇಂದು ಬೆಳಗ್ಗೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನ ಮೂಲಕ ಚಿರತೆ ಸೆರೆಯಾಗಿದೆ. ಕೂಡಲೇ ಚಿರತೆ ಸೆರೆ ವಿಚಾರ ತಿಳಿದು, ಚಿರತೆ ನೋಡಲು ಗ್ರಾಮದ ಜನರು ಕುತೂಹಲಭರಿತವಾಗಿ ಆಗಮಿಸಿದರು.

ಈ ಸಂದರ್ಭದಲ್ಲಿ ಬಾಲಕನನ್ನು ಬಲಿ ಪಡೆದ ಚಿರತೆಯನ್ನು ಕೊಲ್ಲಬೇಕೆಂದು ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಅಧಿಕಾರಿಗಳು ಚಿರತೆಯನ್ನು ಬೇರೆಡೆ ಸ್ಥಳಾಂತರ ಮಾಡಲು ಮುಂದಾಗಿದ್ದಾರೆ.

ಚಿರತೆ ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಮುಖ್ಯಮಂತ್ರಿ ಬೊಮ್ಮಾಯಿ ಧನ್ಯವಾದ ಹೇಳಿದ್ದಾರೆ. 

SCROLL FOR NEXT