ರಾಜ್ಯ

ಜುಲೈ 1 ರಿಂದ ಎಂದು ಹೇಳಿಲ್ಲ, ಜುಲೈ 10ರಿಂದ ಹಣ ಕೊಡುವ ಪ್ರಕ್ರಿಯೆ ಆರಂಭ ಸಾಧ್ಯತೆ: ಸಿಎಂ ವ್ಯತಿರಿಕ್ತ ಹೇಳಿಕೆ

Sumana Upadhyaya

ಬೆಂಗಳೂರು: ಅನ್ನ ಭಾಗ್ಯ ಯೋಜನೆ(Anna Bhagya scheme) ಫಲಾನುಭವಿಗಳಿಗೆ ಜುಲೈ 1ರಿಂದಲೇ ಹಣ ನೀಡುತ್ತೇವೆ ಎಂದು ಹೇಳಿಲ್ಲ. ಈ ತಿಂಗಳೇ 5 ಕೆಜಿ ಅಕ್ಕಿ ಬದಲಿಗೆ ಹಣ ಕೊಡುತ್ತೇವೆ. ಬಹುಶಃ ಜುಲೈ 10ರಿಂದ ಹಣ ನೀಡುವ ಪ್ರಕ್ರಿಯೆ ಪ್ರಾರಂಭವಾಗಬಹುದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜುಲೈ ತಿಂಗಳಿನಿಂದಲೇ ಅನ್ನ ಭಾಗ್ಯ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತೇವೆ. ಹಾಗೆಂದು ಇಂದಿನಿಂದಲೇ ಹಾಕುತ್ತೇವೆ ಎಂದು ಹೇಳಿಲ್ಲ. ಗೃಹ ಜ್ಯೋತಿ ಯೋಜನೆ ಇಂದು ಜಾರಿಗೆ ಬರಲಿದ್ದು  ಈ ತಿಂಗಳಿನಿಂದ ಉಚಿತ ವಿದ್ಯುತ್ ಸಿಗಲಿದೆ. ಆಗಸ್ಟ್ ತಿಂಗಳ ಬಿಲ್ ನಲ್ಲಿ 200 ಯೂನಿಟ್ ಒಳಗೆ ಬಳಸಿದವರಿಗೆ ಶೂನ್ಯ ಮೊತ್ತ ಬರುತ್ತದೆ ಎಂದರು.

SCROLL FOR NEXT