ರಾಜ್ಯ

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಕನ್ನಡ ಮನರಂಜನೆ ಇಲ್ಲದೇ ಇರುವುದಕ್ಕೆ ಆಕ್ಷೇಪ

Srinivas Rao BV

ಬೆಂಗಳೂರು: ರೈಲ್ವೆ ಅಭಿಮಾನಿಗಳು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಮನರಂಜನೆಗೆ ಮನವಿ ಮಾಡಿದ್ದಾರೆ. ವಂದೇ ಭಾರತ್ ರೈಲಿನಲ್ಲಿ ಕನ್ನಡ ಸಿನಿಮಾ, ಶೋ, ಹಾಡುಗಳಂತಹ ಮನರಂಜನೆ ಇಲ್ಲದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈಗ ಹಿಂದಿ, ತೆಲುಗು, ಇಂಗ್ಲೀಷ್, ತಮಿಳು ಸಿನಿಮಾ, ಶೋಗಳನ್ನು, ಹಾಡುಗಳನ್ನು ವಂದೇ ಭಾರತ್ ರೈಲಿನಲ್ಲಿ ಪ್ರಸಾರ ಮಾಡಲಾಗುತ್ತಿದೆ. ವಂದೇ ಭಾರತ್ ಎಕ್ಸ್ ಪ್ರೆಸ್ ಪ್ರಾರಂಭವಾದಾಗಿನಿಂದಲೂ ಕನ್ನಡ ಮನರಂಜನೆಗೆ ಕೊರತೆ ಇದ್ದು, ಇದು ಇತ್ತೀಚೆಗೆ ಬೆಳಕಿಗೆ ಬಂದಿದೆ.

ಈ ವಿಷಯವನ್ನು ನೈಋತ್ಯ ರೈಲ್ವೆ ಪ್ರಯಾಣಿಕರ ಕಲ್ಯಾಣ ಸಮಿತಿ ಪ್ರಸ್ತಾಪಿಸಿದ್ದು, ಕನ್ನಡಪರ ಇರುವ ಅನೇಕ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ.  ಕರ್ನಾಟಕದಲ್ಲೇ ಸಂಚರಿಸುವ ಬೆಂಗಳೂರು-ಧಾರವಾಡ ಎಕ್ಸ್ ಪ್ರೆಸ್ ರೈಲಿನಲ್ಲೂ ಕನ್ನಡ ಮನರಂಜನೆ ಇಲ್ಲದಂತಾಗಿದೆ ಎಂದು ಕನ್ನಡಿಗ ಪ್ರಯಾಣಿಕರು ಆರೋಪಿಸಿದ್ದಾರೆ. ರೈಲ್ವೆ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಬೆಂಗಳೂರು ವಿಭಾಗದ DRM ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ್ದಾರೆ ಮತ್ತು ಕನ್ನಡವನ್ನು ಅಳವಡಿಸಲಾಗುವುದು ಎಂದು ಹೇಳಿದರೆಂದು SWRPC ಕಾರ್ಯದರ್ಶಿ ರೋಹಿತ್ ಎಸ್ ಜೈನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು

ನೈಋತ್ಯ ರೈಲ್ವೆಯ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಪ್ರಯಾಣಿಕ ಸೇವೆಗಳ ಡಾ.ಅನುಪ್ ದಯಾನಂದ ಸಾಧು ಅವರು ದೂರನ್ನು ಗಮನಿಸಿದ್ದಾರೆ ಮತ್ತು ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದರಿಂದ ಸಮಸ್ಯೆಗೆ ಸೂಕ್ತ ಪರಿಹಾರವನ್ನು ನೀಡುವ ಭರವಸೆ ನೀಡಿದ್ದಾರೆ.

SCROLL FOR NEXT