ಬೆಂಗಳೂರು ಶಾಸಕರು, ಅಧಿಕಾರಿಗಳೊಂದಿಗೆ ಡಿಸಿಎಂ ಶಿವಕುಮಾರ್ ಸಭೆ 
ರಾಜ್ಯ

ಬೆಂಗಳೂರು ನಗರ ಸಂಚಾರ ದಟ್ಟಣೆ ತಗ್ಗಿಸಲು ಕ್ರಮ: ನಗರದ ಶಾಸಕರು, ಅಧಿಕಾರಿಗಳ ಸಲಹೆ ಕೇಳಿದ ಡಿಸಿಎಂ ಶಿವಕುಮಾರ್

ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ನಗರದ ಶಾಸಕರ ಜತೆ ಚರ್ಚೆ ನಡೆಸಿ, ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಕುರಿತು ಮತ್ತು ಇತರ ಮೂಲಸೌಕರ್ಯ ಒದಗಿಸಲು ಅಭಿಪ್ರಾಯ ಕೇಳಿದರು.

ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ನಗರದ ಶಾಸಕರ ಜತೆ ಚರ್ಚೆ ನಡೆಸಿ, ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಕುರಿತು ಮತ್ತು ಇತರ ಮೂಲಸೌಕರ್ಯ ಒದಗಿಸಲು ಅಭಿಪ್ರಾಯ ಕೇಳಿದರು.
AECOM ಇಂಡಿಯಾ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ನಗರದ ಸುರಂಗ ರಸ್ತೆಗಳು, ಎಲಿವೇಟೆಡ್ ರಸ್ತೆಗಳು ಮತ್ತು ಇತರ ದೇಶಗಳಲ್ಲಿ ಜಾರಿಗೆ ತಂದ ಯೋಜನೆಗಳ ಪ್ರಸ್ತುತಿ ನೀಡುವಂತೆ ಅಧಿಕಾರಿಗಳನ್ನು ಕೇಳಿದ್ದರು. 

ಎಇಕಾಂ ಹಿರಿಯ ಉಪಾಧ್ಯಕ್ಷ ಜಿ.ವಿ.ಆರ್.ರಾಜು ಮತ್ತು ತಾಂತ್ರಿಕ ನಿರ್ದೇಶಕ ಶಿವಾನಂದ ಕೆ.ಟಿ ಅವರು ನಗರದ ಶಾಸಕರಿಗೆ ಸುರಂಗ ರಸ್ತೆಗಳ ವಿನ್ಯಾಸ ಮತ್ತು ಕಾರ್ಯಸಾಧ್ಯತೆಯ ಕುರಿತು ಪ್ರಸ್ತುತಪಡಿಸಿದರು. ಪ್ರಸ್ತುತಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಸುರಂಗ ಮಾರ್ಗದ ಕುರಿತು ಉನ್ನತ ನಾಗರಿಕ ಅಧಿಕಾರಿಗಳು ಮತ್ತು ನಗರ ಶಾಸಕರ ಅಭಿಪ್ರಾಯ ಮತ್ತು ಸಲಹೆಗಳನ್ನು ಕೇಳಿದ್ದೇನೆ. ನಮ್ಮ ಸರ್ಕಾರವು ನಂತರ ತನ್ನ ನಿಲುವನ್ನು ಪ್ರಕಟಿಸುತ್ತದೆ ಎಂದರು. 

ಕಾಂಗ್ರೆಸ್ ಸರ್ಕಾರದ ಜನಪರ ನೀತಿಗಳ ಬಗ್ಗೆ ಪ್ರತಿಪಕ್ಷದವರು ವಿರೋಧ ಮಾಡಿ ನಮಗೆ ಉತ್ತಮ ಪ್ರಚಾರ ನೀಡುತ್ತಿದ್ದಾರೆ. ಅದಕ್ಕೆ ನಾನು ಕೃತಜ್ಞ ಎಂದರು.

ಬಹುಕಾಲದಿಂದ ಬಾಕಿ ಉಳಿದಿರುವ ಬಿಬಿಎಂಪಿ ಚುನಾವಣೆಯನ್ನು ವಿಂಗಡಣೆ ಪ್ರಕ್ರಿಯೆಯಿಂದ ವಿಳಂಬಗೊಳಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರವು ನ್ಯಾಯಾಲಯದ ತೀರ್ಪಿಗೆ ಹೋಗಿ ಕಾನೂನು ಅನುಸರಿಸುತ್ತದೆ ಎಂದು ಹೇಳಿದರು. ಕರ್ನಾಟಕ ಹೈಕೋರ್ಟ್ ವಾರ್ಡ ವಿಂಗಡಣೆ ಪ್ರಕ್ರಿಯೆಯನ್ನು ಪುನರ್ರಚನೆ ಮಾಡಲು ಸರ್ಕಾರಕ್ಕೆ 12 ವಾರಗಳ ಕಾಲಾವಕಾಶ ನೀಡಿದೆ ಎಂದರು. 

ಮುಂದಿನ 30 ವರ್ಷಗಳ ಅವಶ್ಯಕತೆಗಳನ್ನು ಪೂರೈಸಲು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ತಾಲ್ಲೂಕುಗಳು ಮತ್ತು ಪ್ರದೇಶಗಳಲ್ಲಿ ಸಂಚಾರ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕೆಂದು ಡಿಸಿಎಂ ಕೇಳಿದರು.ವಿದೇಶದಲ್ಲಿ ಕೆಲವು ಸುರಂಗ ರಸ್ತೆಗಳನ್ನು ವಿನ್ಯಾಸಗೊಳಿಸಿರುವ AECOM ನಂತಹ ಪ್ರತಿಷ್ಠಿತ ಕಂಪನಿಯು ಬೆಂಗಳೂರಿಗೆ ವಿನ್ಯಾಸ ರೂಪಿಸಲು ಬಯಸಿದೆ ಎಂದರು. 

ಸಭೆಯಲ್ಲಿ ಪಾಲ್ಗೊಂಡಿದ್ದವರು ಬಿಬಿಎಂಪಿ ಚುನಾವಣೆ, ತುಮಕೂರು ರಸ್ತೆ, ಕೆಆರ್ ಪುರಂ, ಹೊಸೂರು ರಸ್ತೆ, ಬಿಟಿಎಂ ಲೇಔಟ್ ಮತ್ತು ಮೈಸೂರು ರಸ್ತೆ ಸೇರಿದಂತೆ ನಗರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಸಂಚಾರ ಪುನರ್ರಚನೆ ಕುರಿತು ಸಲಹೆಗಳನ್ನು ನೀಡಿದರು. ಸಚಿವರು ತಮ್ಮ ಅಧಿಕಾರಾವಧಿಯಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ವಿಷಯದಲ್ಲಿ ಪೂರ್ವನಿದರ್ಶನವನ್ನು ಸ್ಥಾಪಿಸಲು ಬಯಸುತ್ತಾರೆ ಎಂದು ಹೇಳಿದರು.

ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಸಾರಿಗೆ ಸಚಿವ ಹಾಗೂ ಬಿಟಿಎಂ ಶಾಸಕ ರಾಮಲಿಂಗಾರೆಡ್ಡಿ, ಇಂಧನ ಸಚಿವ ಹಾಗೂ ಸರ್ವಜ್ಞನಗರ ಶಾಸಕ ಕೆ.ಜೆ.ಜಾರ್ಜ್, ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ, ವಸತಿ ಸಚಿವ ಹಾಗೂ ಚಾಮರಾಜಪೇಟೆ ಶಾಸಕ ಬಿ.ಝಡ್.ಜಮೀರ್ ಅಹಮದ್ ಖಾನ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಪುಲಕೇಶಿನಗರ ಶಾಸಕ ಎಸಿ ಶ್ರೀನಿವಾಸ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT