ಸಿಎಂ ಸಿದ್ದರಾಮಯ್ಯ 
ರಾಜ್ಯ

ವಿಸ್ಕಿ, ಬಿಯರ್ ಪುರುಷರು ಮಾತ್ರ ಕುಡಿಯುತ್ತಾರಾ? ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದೇಕೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 14ನೇ ಬಜೆಟ್ ಮಂಡಿಸಿದ್ದು, ಪ್ರಸಕ್ತ ಸಾಲಿನ ಬಜೆಟ್ ನಲ್ಲಿ  ಮದ್ಯಪ್ರಿಯರಿಗೆ ಶಾಕ್‌ ಕೊಟ್ಟಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 14ನೇ ಬಜೆಟ್ ಮಂಡಿಸಿದ್ದು, ಪ್ರಸಕ್ತ ಸಾಲಿನ ಬಜೆಟ್ ನಲ್ಲಿ  ಮದ್ಯಪ್ರಿಯರಿಗೆ ಶಾಕ್‌ ಕೊಟ್ಟಿದ್ದಾರೆ.

ಬಜೆಟ್​ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಬಾಧ್ಯತೆ, ಅಹಿಂದ ಮತಬ್ಯಾಂಕ್ ಅಸ್ಮಿತೆ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು, ಅಬಕಾರಿ ತೆರಿಗೆಯನ್ನ ಶೇ. 20ರಷ್ಟು ಹೆಚ್ಚಳ ಮಾಡಿ, ಶಾಕ್ ನೀಡಿದ್ದಾರೆ.

ಬಿಯರ್ ಮೇಲೆ ಶೇ. 10ರಷ್ಟು ಟ್ಯಾಕ್ಸ್‌ ಹೆಚ್ಚಿಸುವ ಮೂಲಕ ರೂ.36,000 ಕೋಟಿ ತೆರಿಗೆ ಸಂಗ್ರಹ ಗುರಿಯನ್ನು ಹೊಂದಿದ್ದಾರೆ.

ಬಜೆಟ್​ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಯಾವುದಕ್ಕೆಲ್ಲಾ ತೆರೆಗೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಿಗೆ ವಿವರಿಸಿದರು.

ಈ ವೇಳೆ ಅಬಕಾರಿಗೆ ಈ ಹಿಂದೆ 35 ಸಾವಿರ ಕೋಟಿ ರೂಪಾಯಿ ಗುರಿ ಇತ್ತು, ಈಗ 36 ಸಾವಿರ ಕೋಟಿ ರೂಪಾಯಿ ನೀಡಿದ್ದೇವೆ ಎಂದು ತಿಳಿಸಿದರು.

ಅಲ್ಲದೇ, ವಿಸ್ಕಿ ಮೇಲೆ ಶೇ.20, ಬಿಯರ್ ಬಾಟಲಿ ಮೇಲೆ ಶೇ.10 ಜಾಸ್ತಿ ಮಾಡಲಾಗಿದೆ. ಆದರೂ ನಾವು ಇಷ್ಟು ಹೆಚ್ಚು ಮಾಡಿದರೂ ಕೂಡ ನಾವು ಪಕ್ಕದ ರಾಜ್ಯಗಳಿಗಿಂತ ಕಡಿಮೆ ತೆರಿಗೆಯನ್ನೇ ಹಾಕುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಈ ಕುರಿತು ಮಾಧ್ಯಮ ಪ್ರತಿನಿಧಿಗಳು ಅಬಕಾರಿ ಸುಂಕ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಅವರಿಗೆ, ಯಾರು ಪ್ರಶ್ನೆ ಮಾಡೋದಿಲ್ಲ ಎಂದು ಮದ್ಯದ ಮೇಲಿನ ತೆರಿಗೆ ಹೆಚ್ಚಳ ಮಾಡಿದ್ದೀರಿ. ಆ ಮೂಲಕ ನೀವು ಪುರುಷ ವಿರೋಧಿ ಆಗುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ನಗುತ್ತಲೇ ಉತ್ತರಿಸಿದ ಮುಖ್ಯಮಂತ್ರಿಗಳು, ವಿಸ್ಕಿ- ಬಿಯರ್ ಪುರುಷರು ಮಾತ್ರ ಕುಡಿಯುತ್ತಾರಾ ಎಂದು ಮರು ಪ್ರಶ್ನೆ ಮಾಡಿದರು.

ನಾವು ಎಲ್ಲಿ ಸರ್ಕಾರದ ಆದಾಯವನ್ನು ಹೆಚ್ಚು ಮಾಡಬಹುದು ಎಂಬ ಮಾಹಿತಿ ಪಡೆದುಕೊಂಡು ತೆರಿಗೆ ಹೆಚ್ಚಳ ಮಾಡಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜೈಪುರ: ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಎಂಟು ರೋಗಿಗಳು ಸಜೀವ ದಹನ, ಮೂವರ ಸ್ಥಿತಿ ಗಂಭೀರ

Bihar Assemebly Election: ಚುನಾವಣಾ ಆಯೋಗದಿಂದ ಸಂಜೆ 4 ಗಂಟೆಗೆ ಮುಹೂರ್ತ ಫಿಕ್ಸ್ !

ಹೈಕೋರ್ಟ್ ಚಾಟಿ, ಜಿಲ್ಲಾಡಳಿತದ ಖಡಕ್ ವಾರ್ನಿಂಗ್: ಕೊನೆಗೂ Sambhal ಮಸೀದಿ ತೆರವು ಮಾಡಿದ 'ಮುಸ್ಲಿಮರು'

'ಶಾಂತಿ ಇದೆ, ಕ್ರಾಂತಿ ಎಲ್ಲಿದೆ? ನಾವೆಲ್ಲರೂ ಶಾಂತಿ ಪ್ರಿಯರು'; ಸಿಎಂ ಬದಲಾವಣೆ ವಿಚಾರ 'ಅಪ್ರಸ್ತುತ': ಬಸವರಾಜ ರಾಯರೆಡ್ಡಿ

ಯಾರು ಎಷ್ಟೇ ವಿರೋಧಿಸಿದರೂ ಸಮೀಕ್ಷೆ ನಡೆಯುತ್ತದೆ, ಎಲ್ಲರೂ ಸಹಕರಿಸಿ: DCM ಡಿಕೆ ಶಿವಕುಮಾರ್ ಮನವಿ

SCROLL FOR NEXT