ಗೃಹ ಸಚಿವ ಜಿ ಪರಮೇಶ್ವರ 
ರಾಜ್ಯ

ಕರ್ನಾಟಕದಲ್ಲಿ 46,149 ರೌಡಿ ಶೀಟರ್‌ಗಳು ಇದ್ದಾರೆ: ಗೃಹ ಸಚಿವ ಪರಮೇಶ್ವರ್

ಕರ್ನಾಟಕದಲ್ಲಿ 46,149 ರೌಡಿ ಶೀಟರ್‌ಗಳಿದ್ದು, 2018 ರಿಂದ 27,294 ಜನರ ಹೆಸರನ್ನು ರೌಡಿ ಶೀಟ್‌ನಿಂದ ಕೈಬಿಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ 46,149 ರೌಡಿ ಶೀಟರ್‌ಗಳಿದ್ದು, 2018 ರಿಂದ 27,294 ಜನರ ಹೆಸರನ್ನು ರೌಡಿ ಶೀಟ್‌ನಿಂದ ಕೈಬಿಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

ಗುರುವಾರ ಪರಿಷತ್‌ನಲ್ಲಿ ಎಂಎಲ್‌ಸಿ ಅರವಿಂದಕುಮಾರ ಅರಳಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುವವರ ವಿರುದ್ಧ ರೌಡಿ ಶೀಟ್ ತೆರೆಯಲಾಗುತ್ತದೆ. ಬಲಪ್ರಯೋಗದಿಂದ ಜನರಿಗೆ ಕಿರುಕುಳ ನೀಡುವುದು, ಹೊಲಸು ಭಾಷೆಯಲ್ಲಿ ಬೆದರಿಕೆ ಮತ್ತು ನಿಂದನೆ, ಬೆದರಿಸಿ ಸುಲಿಗೆ ಮಾಡುವವರು, ಅಸಭ್ಯ ವರ್ತನೆ, ಚೈನ್ ಸ್ನ್ಯಾಚಿಂಗ್, ಹಲ್ಲೆ ಮತ್ತು ಇತರ ಅಪರಾಧಗಳ ವಿರುದ್ಧ ರೌಡಿ ಶೀಟ್ ತೆರೆಯಲಾಗುತ್ತದೆ ಎಂದರು.

65 ವರ್ಷ ಮೇಲ್ಪಟ್ಟ ವ್ಯಕ್ತಿ ನಿಷ್ಕ್ರಿಯರಾಗಿದ್ದರೆ, ಮರಣ ಹೊಂದಿದರೆ, ದೈಹಿಕ ವಿಕಲಚೇತನರಾಗಿದ್ದರೆ ಅಥವಾ ಮಾನಸಿಕವಾಗಿ ಅಸ್ವಸ್ಥರಾಗಿದ್ದರೆ ಅಥವಾ 10 ವರ್ಷಗಳಿಂದ (ತನಿಖೆ ಅಥವಾ ವಿಚಾರಣೆಯ ಅಡಿಯಲ್ಲಿ ಪ್ರಕರಣಗಳನ್ನು ಹೊರತುಪಡಿಸಿ) ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಕಂಡುಬಂದಲ್ಲಿ ಮತ್ತು ಉತ್ತಮ ನಡವಳಿಕೆಯನ್ನು ತೋರಿಸಿದರೆ ಅಂತವರ ಹೆಸರನ್ನು ರೌಡಿ ಶೀಟ್‌ನಿಂದ ಕೈಬಿಡಲಾಗುವುದು ಎಂದು ಅವರು ಹೇಳಿದರು.  

ರೌಡಿ ಶೀಟ್‌ಗಳನ್ನು ಜಾತಿಯಿಂದ ವಿಂಗಡಿಸಲಾಗಿಲ್ಲ. ಸೇರ್ಪಡೆ ಮತ್ತು ಅಳಿಸುವಿಕೆ ಇರುವುದರಿಂದ ರೌಡಿ ಶೀಟ್‌ಗಳ ಸಂಖ್ಯೆ ಬದಲಾಗುತ್ತಲೇ ಇರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪರಮೇಶ್ವರ ಉತ್ತರಿಸಿದರು. 'ರೌಡಿ ಶೀಟ್ ತೆರೆಯುವುದು ರೌಡಿ ಚಟುವಟಿಕೆಗಳನ್ನು ದಾಖಲಿಸುವ ಸಾಧನವಾಗಿದೆ ಎಂದು ಅವರು ತಿಳಿಸಿದರು.

ಇದು ಪೊಲೀಸರಿಗೆ ಅಂತವರ ಮೇಲೆ ನಿಗಾ ಇರಿಸಲು ಮತ್ತು ಧಾರ್ಮಿಕ ಹಬ್ಬಗಳು, ಬಂದ್‌ಗಳು, ಚುನಾವಣೆಗಳು ಮತ್ತು ಮುಂತಾದವುಗಳಿಗೆ ಮುಂಚಿತವಾಗಿ ಪರಿಸ್ಥಿತಿ ಬೇಡಿಕೆಯಿರುವಾಗ ಅಹಿತಕರ ಘಟನೆಗಳನ್ನು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಮಾಜಿ ಡಿಜಿ ಮತ್ತು ಐಜಿಪಿ ಎಸ್‌ಟಿ ರಮೇಶ್ ಹೇಳಿದರು. ರಾಜ್ಯದ ಜನಸಂಖ್ಯೆ ಮತ್ತು ಪೊಲೀಸ್ ಠಾಣೆಗಳ ಸಂಖ್ಯೆಗೆ ಅನುಗುಣವಾಗಿ ರೌಡಿ ಶೀಟ್‌ಗಳ ಸಂಖ್ಯೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರೌಡಿ ಶೀಟ್‌ನಿಂದ ಹೆಸರು ಕೈಬಿಟ್ಟ ಸಂಖ್ಯೆ
2018-    3,489

2019-   2,195

2020-   1,718

2021-   8,062

2022-   3,314

2023-   8,516

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಮೊದಲು ಪರಮೇಶ್ವರ್ ಕೂಲಿ ಚುಕ್ತಾ ಮಾಡಲಿ: ನಂತರ ವಿಧಾನಸಭೆ ವಿಸರ್ಜಿಸಿ ಡಿಕೆಶಿ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ!

SCROLL FOR NEXT