ರಾಜ್ಯ

ರಾಹುಲ್ ಗಾಂಧಿ ನೀಡಿದ್ದ ಭರವಸೆಗಳ ಪೂರ್ಣಗೊಳಿಸಿ: ಸರ್ಕಾರಕ್ಕೆ ಬಳ್ಳಾರಿ ಜೀನ್ಸ್ ಕಂಪನಿಗಳ ಆಗ್ರಹ

Manjula VN

ಬಳ್ಳಾರಿ: ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಭರವಸೆಗಳ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಬಳ್ಳಾರಿ ಜೀನ್ಸ್ ಉತ್ಪಾದನಾ ಘಟಕಗಳ ಮಾಲೀಕರು ಆಗ್ರಹಿಸಿದ್ದಾರೆ.

ಉದ್ಯಮಕ್ಕೆ ಸಹಾಯ ಮಾಡಲು ಮತ್ತು ಬಳ್ಳಾರಿ ಜಿಲ್ಲೆಯನ್ನು ದೇಶದಲ್ಲಿ ಜೀನ್ಸ್ ಕೈಗಾರಿಕೆಗಳ ಕೇಂದ್ರವಾಗಿ ಅಭಿವೃದ್ಧಿಪಡಿಸಲು 5,000 ಕೋಟಿ ವಿಶೇಷ ಪ್ಯಾಕೇಜ್ ನೀಡುವುದಾಗಿ ರಾಹುಲ್ ಭರವಸೆ ನೀಡಿದ್ದರು. ಆದರೆ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಹಲವು ತಿಂಗಳು ಕಳೆದಿದ್ದರೂ, ರಾಹುಲ್ ಗಾಂಧಿ ನೀಡಿದ್ದ ಭರವಸೆಗಳಿಗೆ ಯಾವುದೇ ಮನ್ನಣೆ ನೀಡದಿರುವುದು ಹಾಗೂ ಬಜೆಟ್‌ನಲ್ಲಿ ಪ್ರಸ್ತಾಪ ಮಾಡದಿರುವುದು ಕೈಗಾರಿಕೋದ್ಯಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಜೀನ್ಸ್‌ ಜವಳಿ ಪಾರ್ಕ್‌ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಬಜೆಟ್‌ನಲ್ಲಿ ಯಾವುದೇ ಹಣ ಮೀಸಲಿಟ್ಟಿಲ್ಲ ಎಂದು ಉದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಚಾರದ ವೇಳೆ ಮಾತನಾಡಿದ್ದ ರಾಹುಲ್ ಗಾಂಧಿಯವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಸಂಪುಟ ಸಭೆಯಲ್ಲಿ ಹಣ ಹಂಚಿಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಾಹುಲ್ ಹೇಳಿದ್ದರು. ಈ ಹೇಳಿಕೆಯ ವೀಡಿಯೋ ಇದೀಗ ವೈರಲ್ ಆಗಿದೆ.

ಕಂಪನಿಗಳ ಮಾಲೀಕರಲ್ಲಿ ಒಬ್ಬರಾದ ಪೊಲಕ್ಸ್ ಮಲ್ಲಿಕಾರ್ಜುನ್ ಎಂಬುವವರು ಮಾತನಾಡಿ, 'ರಾಷ್ಟ್ರೀಯ ನಾಯಕರೊಬ್ಬರು ಭರವಸೆ ನೀಡಿದ್ದು, ಅದನ್ನು ಸರ್ಕಾರ ಗೌರವಿಸುತ್ತದೆ ಎಂಬ ವಿಶ್ವಾಸಗಳಿದ್ದವು. ಆದರೆ, ಏನೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

SCROLL FOR NEXT