ರಾಜ್ಯ

ಉಡುಪಿ: ಅರಿಶಿನಗುಂಡಿ ಫಾಲ್ಸ್ ನಲ್ಲಿ ಕೊಚ್ಚಿ ಹೋಗಿದ್ದ ಶರತ್ ಮೃತದೇಹ ಪತ್ತೆ

Nagaraja AB

ಉಡುಪಿ: ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತ ವೀಕ್ಷಣೆಗೆ ಬಂದಾಗ ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು, ಕೊಚ್ಚಿ ಹೋಗಿದ್ದ ಯುವಕ ಶರತ್ (23) ಮೃತದೇಹ ಪತ್ತೆಯಾಗಿದೆ. ಸತತ ಒಂದು ವಾರಗಳ ನಿರಂತರ ಶೋಧ ಕಾರ್ಯದ ಬಳಿಕ ಇಂದು ಮೃತದೇಹ ಪತ್ತೆಯಾಗಿದೆ.

ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತದ ಬಳಿ ಸ್ನೇಹಿತನೊಂದಿಗೆ ರೀಲ್ಸ್ ಮಾಡಲು ಹೋಗಿದ್ದ ಭದ್ರಾವತಿ ಮೂಲದ ಶರತ್ ಕುಮಾರ್ ಕಾಲು ಜಾರಿ ಜಲಪಾತಕ್ಕೆ ಬಿದ್ದಿದ್ದ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಯುವಕ ಶರತ್ ಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು. 

ಆದರೆ ಧಾರಾಕಾರ ಮಳೆ, ಧುಮ್ಮುಕ್ಕಿ ಹರಿಯುವ ಜಲಪಾತದ ಅಬ್ಬರದಿಂದ ಯುವಕ ಪತ್ತೆ ಆಗಿರಲಿಲ್ಲ. ಆದರೂ. ಮುಳುಗು ತಜ್ಞರು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಳೆದ ಒಂದು ವಾರದಿಂದ ಹಗಲು ರಾತ್ರಿ ಎನ್ನದೇ ಶೋಧ ಕಾರ್ಯಾಚರಣೆ ನಡೆಸಿದ್ದರು. ಕೊನೆಗೂ ಇಂದು ಯುವಕನ ಮೃತದೇಹ ಪತ್ತೆಯಾಗಿದ್ದು, ಜಲಾಶಯದ 200 ಮೀಟರ್ ಕೆಳಗಡೆ ಬಂಡೆ ಕಲ್ಲಿನ ಒಳಗೆ ಸಿಲಿಕಿತ್ತು ಎನ್ನಲಾಗಿದೆ. 

SCROLL FOR NEXT