ರಾಜ್ಯ

ಗಡಿಪಾರು ಭೀತಿಯಲ್ಲಿದ್ದ ಚೇತನ್​ ಅಹಿಂಸಾಗೆ ಮತ್ತೆ ಬಿಗ್ ರಿಲೀಫ್: ತಡೆಯಾಜ್ಞೆ ವಿಸ್ತರಿಸಿದ ಕರ್ನಾಟಕ ಹೈಕೋರ್ಟ್

Srinivasamurthy VN

ಬೆಂಗಳೂರು: ಗಡಿಪಾರು ಭೀತಿಯಲ್ಲಿದ್ದ ನಟ-ಹೋರಾಟಗಾರ ಚೇತನ್​ ಅಹಿಂಸಾಗೆ ಮತ್ತೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ತಡೆಯಾಜ್ಞೆ ವಿಸ್ತರಿಸಿದೆ.

ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನದ ಆರೋಪ ಹೊತ್ತುಕೊಂಡಿರುವ ನಟ ಚೇತನ್ ಅಹಿಂಸಾ (Chetan Ahimsa) ಅವರ ಸಾಗರೋತ್ತರ ಭಾರತೀಯ ಪೌರತ್ವ ಕಾರ್ಡ್ ರದ್ದುಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ಶುಕ್ರವಾರ ವಿಸ್ತರಣೆ ಮಾಡಿದೆ. 

ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನದ ಆರೋಪ ಹಾಗೂ ಭಾರತ ವಿರೋಧಿ ಚಟುವಟಿಕೆ ಆರೋಪಗಳಿರುವ ಹಿನ್ನೆಲೆ ಕೇಂದ್ರ ಸರ್ಕಾರ ನೋಟಿಸ್ ನೀಡಿ ಉತ್ತರ ಪಡೆದಿತ್ತು. ಆದರೆ ಚೇತನ್ ಅವರಿಂದ ಸಮಾಧಾನಕರ ಉತ್ತರ ಸಿಗದ ಹಿನ್ನೆಲೆ 2018 ರಲ್ಲಿ ನೀಡಿದ್ದ ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ಅನ್ನು ಕೇಂದ್ರ ಸರ್ಕಾರ ಈ ಕಾರ್ಡ್ ಅನ್ನು ರದ್ದುಗೊಳಿಸಿತ್ತು. ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಚೇತನ್ ಅಹಿಂಸಾ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. 

ಅದರಂತೆ ಕೋರ್ಟ್ ಏ.21 ರಂದು ಚೇತನ್​ಗೆ ಷರತ್ತುಬದ್ಧ ರಿಲೀಫ್ ನೀಡಿತ್ತು. ನ್ಯಾಯಾಂಗದ ಬಗ್ಗೆ ನಟ ಚೇತನ್ ಟ್ವೀಟ್ ಮಾಡುವಂತಿಲ್ಲ, ಬಾಕಿಯಿರುವ ಕೇಸ್​​ಗಳ ಬಗ್ಗೆಯೂ ಟ್ವೀಟ್ ಮಾಡುವಂತಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿತ್ತು. ಅದರಂತೆ, ಷರತ್ತು ಪಾಲಿಸಿ ಟ್ವೀಟ್ ಡಿಲೀಟ್ ಮಾಡಿರುವುದಾಗಿ ವಕೀಲರು ಕೋರ್ಟ್ ಮುಂದೆ ಹೇಳಿದ್ದಾರೆ.

ವಾದ ಆಲಿಸಿದ ಹೈಕೋರ್ಟ್, ಈ ಹಿಂದೆ ನೀಡಿದ್ದ ಮಧ್ಯಂತ ತಡೆಯಾಜ್ಞೆಯನ್ನು ಜೂನ್ 20ರ ವರೆಗೆ ವಿಸ್ತರಿಸಿ ಆದೇಶಿಸಿದೆ. ಅಲ್ಲದೆ, ಚೇತನ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ.

SCROLL FOR NEXT