ಸಾಂದರ್ಭಿಕ ಚಿತ್ರ 
ರಾಜ್ಯ

ಮೈಸೂರು: ಸಹೋದರಿಯ ಸಾವಿನಿಂದ ಮನನೊಂದ ವೈದ್ಯ ಆತ್ಮಹತ್ಯೆಗೆ ಶರಣು!

ಸಹೋದರಿಯ ಅಕಾಲಿಕ ಮರಣದಿಂದ ಮನನೊಂದ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಕುದರಗುಂಡಿ ಗ್ರಾಮದಲ್ಲಿ ನಡೆದಿದೆ.

ಮೈಸೂರು: ಸಹೋದರಿಯ ಅಕಾಲಿಕ ಮರಣದಿಂದ ಮನನೊಂದ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಕುದರಗುಂಡಿ ಗ್ರಾಮದಲ್ಲಿ ನಡೆದಿದೆ. 

ಮೃತರನ್ನು ಸಂಜೋ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಕೆ.ಎಸ್ ವೇಣುಗೋಪಾಲ್ ಎಂದು ಗುರುತಿಸಲಾಗಿದೆ. ಮೈಸೂರಿನವರಾದ ಡಾ.ವೇಣುಗೋಪಾಲ್ ಅವರು ಕಳೆದ 20 ವರ್ಷಗಳಿಂದ ಸಂಜೋ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ವರ್ಷ ಅವರ ಸಹೋದರಿ ಗಾಯತ್ರಿ ಹೃದಯ ಸ್ತಂಭನದಿಂದ ನಿಧನರಾದರು. ಅಂದಿನಿಂದ ಡಾ ವೇಣುಗೋಪಾಲ್ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.

ಕಳೆದ ಗುರುವಾರ ತನ್ನ ಸಹೋದರಿಯ ಮರಣ ವಾರ್ಷಿಕೋತ್ಸವವನ್ನು ನಡೆಸಿದ ವೈದ್ಯರು, ತನ್ನ ಸಹೋದರಿಯ ಸಮಾಧಿಯ ಪಕ್ಕದಲ್ಲಿ ಕುಳಿತಿದ್ದರು. ಆದರೆ ಸಂಜೆಯ ವೇಳೆಗೆ ಅವನು ಮರಕ್ಕೆ ನೇಣು ಹಾಕಿಕೊಂಡಿದ್ದಾನೆ. ದೂರಿನ ಮೇರೆಗೆ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ರವಾನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ಜಾಗತಿಕ ತೈಲ ಮಾರುಕಟ್ಟೆ ಅಸ್ಥಿರ; 48 ಗಂಟೆಗಳಲ್ಲಿ 'ಹಾರ್ಮುಜ್ ಜಲಸಂಧಿ' ತೆರೆಯದಿದ್ದರೆ ವಿದ್ಯುತ್ ಸ್ಥಾವರಗಳ ನಾಶ; ಇರಾನ್'ಗೆ ಟ್ರಂಪ್ ಕಠಿಣ ಎಚ್ಚರಿಕೆ

ಬೆಂಗಳೂರಿಗರಿಗೆ ಗುಡ್ ನ್ಯೂಸ್: ನೀರಿನ ಬಿಲ್ ಬಾಕಿ ಪಾವತಿಗೆ ಸುವರ್ಣಾವಕಾಶ, BWSSBಯಿಂದ OTS ಯೋಜನೆ ಜಾರಿ..!

ಚಿತ್ರದುರ್ಗದಲ್ಲಿ ಭೀಕರ ಆ್ಯಸಿಡ್ ದಾಳಿ: ಮಹಿಳೆ, ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯ, ಆರೋಪಿಗಾಗಿ ಪೊಲೀಸರ ಶೋಧ

West Asia war: ಹಾರ್ಮುಜ್ ಜಲಸಂಧಿ 'ರೀ ಓಪನ್' ಮಾಡಲು 22 ರಾಷ್ಟ್ರಗಳು ಇರಾನ್ ಗೆ ಒತ್ತಾಯ! ಸೇನಾ ಕಾರ್ಯಾಚರಣೆ ಶೀಘ್ರ ಸ್ಥಗಿತ ಎಂದ ಅಮೆರಿಕ

IPL 2026: ಟಿಕೆಟ್ ಖರೀದಿಸುವಾಗ ನಕಲಿ ಲಿಂಕ್ ಗಳ ಬಗ್ಗೆ ಇರಲಿ ಎಚ್ಚರ- ಪೊಲೀಸರ ವಾರ್ನಿಂಗ್

SCROLL FOR NEXT