ಸಿದ್ದರಾಮಯ್ಯ 
ರಾಜ್ಯ

ಸಿಎಂ ಸಿದ್ದರಾಮಯ್ಯ ಜೀರೋ ಟ್ರಾಫಿಕ್ ಸಂಚಾರ: ಜನಸಾಮಾನ್ಯರ ಪರದಾಟ

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರು ತಮ್ಮ ಸಂಚಾರಕ್ಕೆ ಝೀರೋ ಟ್ರಾಫಿಕ್ ನಿಯಮವನ್ನು ಕೈಬಿಡುವುದಾಗಿ ಸಾರ್ವಜನಿಕವಾಗಿ ಘೋಷಿಸಿ, ಸಾರ್ವಜನಿಕರಿಂದ ಗೌರವ ಗಳಿಸಿದ್ದರು.

ದಾವಣಗೆರೆ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರು ತಮ್ಮ ಸಂಚಾರಕ್ಕೆ ಝೀರೋ ಟ್ರಾಫಿಕ್ ನಿಯಮವನ್ನು ಕೈಬಿಡುವುದಾಗಿ ಸಾರ್ವಜನಿಕವಾಗಿ ಘೋಷಿಸಿ, ಸಾರ್ವಜನಿಕರಿಂದ ಗೌರವ ಗಳಿಸಿದ್ದರು.

ಆದರೆ, ಸೋಮವಾರ ದಾವಣಗೆರೆಯಲ್ಲಿ ಪರಿಸ್ಥಿತಿ ವಿಭಿನ್ನವಾಗಿತ್ತು. ಸಿದ್ದರಾಮಯ್ಯನವರ ವಾಹನ ಮುಕ್ತವಾಗಿ ಸಂಚರಿಸಲು ನಾಗರಿಕರು ಹದಡಿ ರಸ್ತೆಯಲ್ಲಿ ಸುಡು ಬಿಸಿಲಿನಲ್ಲಿ ಸುಮಾರು 10 ನಿಮಿಷಗಳ ಕಾಲ ಬಲವಂತವಾಗಿ ನಿಲ್ಲಬೇಕಾಯಿತು.

ಮಧ್ಯಾಹ್ನ 1.10ರ ಸುಮಾರಿಗೆ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಊಟಕ್ಕೆ ತೆರಳುತ್ತಿದ್ದ ಸಿಎಂ, ಝೀರೋ ಟ್ರಾಫಿಕ್ ರಸ್ತೆಯಲ್ಲಿ ಸಾಗಿದರು. ಆದರೆ, ಇದರಿಂದ ಸಾರ್ವಜನಿಕರು  ಬೇಸಿಗೆಯ ಬೇಗೆ ತಾಳಲಾರದೆ ಪರದಾಡಿದರು, ಈ ಸಂಬಂಧ ಹಲವು ಮಂದಿ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು 10 ನಿಮಿಷ ಬಿಸಿಲಿನಲ್ಲಿ ನಿಲ್ಲುವಂತೆ ಒತ್ತಾಯಿಸಿದರು. ಸಿಎಂ ಕಾರ್ಯಕ್ರಮಕ್ಕೆ ವಿಳಂಬವಾಗುತ್ತಿದ್ದರೂ ನಮಗೆ ತೆರಳಲು ಬಿಡುತ್ತಿಲ್ಲ. ನಾಗರಿಕರಿಗೆ ತೊಂದರೆಯಾಗದಂತಹ ವ್ಯವಸ್ಥೆ ಇರಬೇಕು ಎಂದು, ಜಿಲ್ಲಾ ಕ್ರೀಡಾಂಗಣ ದಾಟಿ ಕೆಟಿಜೆ ನಗರಕ್ಕೆ ತೆರಳಬೇಕಿದ್ದ ಬ್ಯಾಂಕರ್ ಕೃಷ್ಣ ಪ್ರಸಾದ್ ಹೇಳಿದರು.

ಡಿಆರ್‌ಎಂ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ನೇತ್ರಾವತಿ ಮಾತನಾಡಿ, “ನಾನು ಕಾಲೇಜಿನಿಂದ ಟಿಸಿ ಸಂಗ್ರಹಿಸಬೇಕಾಗಿತ್ತು ಆದರೆ, ಪೊಲೀಸರು ರಸ್ತೆಯನ್ನು ತಡೆದಿದ್ದರಿಂದ ಚಲಿಸಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅವರು ಈ ಹಿಂದೆ ನೀಡಿದ ಹೇಳಿಕೆಗಳನ್ನು ಅನುಸರಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!