ರಾಜ್ಯ

ಲೋಕಸಭಾಧ್ಯಕ್ಷ ಓಂ ಬಿರ್ಲಾ, ರಾಜ್ಯಸಭೆ ಸಭಾಪತಿ ಧನಕರ್ ಭೇಟಿಯಾದ ಯು.ಟಿ. ಖಾದರ್

Nagaraja AB

ನವದೆಹಲಿ: ಇತ್ತೀಚಿಗೆ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಯು.ಟಿ.ಖಾದರ್ ಅವರು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಸೌಹಾದರ್ಯುತವಾಗಿ ಭೇಟಿಯಾಗಿದ್ದು, ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. 

ಲೋಕಸಭಾಧ್ಯಕ್ಷರು ಸದನಗಳಲ್ಲಿ ನಿಯಮಾವಳಿಗಳಂತೆ ಚರ್ಚೆಗೆ ಅವಕಾಶ ನೀಡಿ, ಧರಣಿ ಮತ್ತು ಗದ್ದಲಗಳಿಗೆ ಮುಕ್ತಿ ಕೊಟ್ಟು ಕಾರ್ಯಕಲಾಪಗಳು ಸುಗಮವಾಗಿ ನಡೆಸುವ ಪರಂಪರೆಯನ್ನು ಬೆಳೆಸೋಣ ಎಂಬ ಸಲಹೆಯನ್ನು ನೀಡಿದ್ದಾರೆ. ಈ ಭೇಟಿ ವಿಶೇಷವೆನಿಲ್ಲ. ಚರ್ಚೆಯು ಅತ್ಯಂತ ಸೌಹಾರ್ದಯುತವಾಗಿತ್ತು ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.

ನಂತರ ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರನ್ನು ಯು.ಟಿ.ಖಾದರ್ ಭೇಟಿ ಮಾಡಿದ್ದಾರೆ. ಇದೇ ವೇಳೆ ಯು.ಟಿ ಖಾದರ್ ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ಹುದ್ದೆಯನ್ನು ಕಿರಿಯ ವಯಸ್ಸಿನಲ್ಲಿ  ವಹಿಸಿಕೊಂಡಿರುವುದನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.  

SCROLL FOR NEXT