ರಾಜ್ಯ

ಹಳೆ ಪಿಂಚಣಿ ಯೋಜನೆ ಮರು ಜಾರಿ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಸಿದ್ದರಾಮಯ್ಯ

Sumana Upadhyaya

ಬೆಂಗಳೂರು: ಹಳೆಯ ಪಿಂಚಣಿ ಯೋಜನೆಯನ್ನು (OPS) ಹಿಂಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿರುವ ಸಿಎಂ ಜುಲೈ 7 ರಂದು ರಾಜ್ಯ ಬಜೆಟ್‌ನಲ್ಲಿ ಅವರು ಇದೇ ವಿಷಯವನ್ನು ಘೋಷಿಸುವ ಸಾಧ್ಯತೆಯಿದೆ.

ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ಸದಸ್ಯರು ಸಿದ್ದರಾಮಯ್ಯ ಅವರನ್ನು ನಿನ್ನೆ ಭೇಟಿ ಮಾಡಿ ಒಪಿಎಸ್ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು. ತಮ್ಮ ಸರ್ಕಾರದ ಐದು ಖಾತರಿಗಳ ಯಶಸ್ವಿ ಅನುಷ್ಠಾನಕ್ಕೆ ಕೆಲಸ ಮಾಡುವಂತೆ ಈ ವೇಳೆ ಸಿಎಂ ಅವರನ್ನು ಕೇಳಿಕೊಂಡರು.

ಹಿರಿಯ ಕಾಂಗ್ರೆಸ್ ನಾಯಕ ವಿಎಸ್ ಉಗ್ರಪ್ಪ ಅವರು ಏಪ್ರಿಲ್ 1, 2006 ರಂದು ಹೊಸ ಪಿಂಚಣಿ ಯೋಜನೆ (NPS) ಜಾರಿಗೆ ಬಂದಿತು. ಒಟ್ಟಾರೆಯಾಗಿ, 2.98 ಲಕ್ಷ ಉದ್ಯೋಗಿಗಳು ಈ ಯೋಜನೆಯ ಅಡಿಯಲ್ಲಿ ಬರುತ್ತಾರೆ. ಅವರ ಪಿಂಚಣಿ ಹಣವನ್ನು ಎನ್‌ಎಸ್‌ಡಿಎಲ್‌ನಲ್ಲಿ ಠೇವಣಿ ಮಾಡಲಾಗಿದೆ, ಅದನ್ನು ಅವರ ನಿವೃತ್ತಿಯ ಸಮಯದಲ್ಲಿ ನೀಡಲಾಗುತ್ತದೆ. ಒಪಿಎಸ್ ನ್ನು ಹಿಂದಕ್ಕೆ ಪಡೆಯುವಂತೆ ಅವರು ಸಿಎಂಗೆ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ್ ತೇಜ್ ಕೂಡ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಎನ್‌ಪಿಎಸ್ ನ್ನು ರದ್ದುಗೊಳಿಸಲಾಗಿದೆ ಕರ್ನಾಟಕವು ಕೂಡ ಇದನ್ನು ಪಾಲಿಸಬೇಕು ಎಂದರು. ಇದುವರೆಗೆ ಠೇವಣಿ ಇಟ್ಟಿರುವ ಪಿಂಚಣಿ ಹಣವನ್ನು ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಬಹುದು. ಠೇವಣಿ ಇಟ್ಟಿರುವ 19 ಕೋಟಿ ರೂಪಾಯಿಗಳಲ್ಲಿ 9 ಕೋಟಿ ರೂಪಾಯಿಗಳು ನೌಕರರ ಪಾಲು ಆಗಿದ್ದು, ಇದನ್ನು ಸಾಮಾನ್ಯ ಭವಿಷ್ಯ ನಿಧಿಯನ್ನಾಗಿ ಪರಿವರ್ತಿಸಬಹುದು. ಸರ್ಕಾರದ ಪಾಲು 10 ಕೋಟಿ ರೂಪಾಯಿಯನ್ನು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಬಳಸಿಕೊಳ್ಳಬಹುದು ಎಂದು ಸಿಎಂಗೆ ಮನವರಿಕೆ ಮಾಡಿಕೊಟ್ಟರು. 

SCROLL FOR NEXT