ಅಪರೂಪದ ಬಣ್ಣ ಹೊಂದಿರುವಬೆಲ್ಜಿಯನ್ ಮಾಲಿನೋಯಿಸ್‌ ನಾಯಿಯೊಂದಿಗೆ ರಾಘವೇಂದ್ರ ಭಟ್. 
ರಾಜ್ಯ

ಬೆಲ್ಜಿಯನ್ ಮಾಲಿನೋಯಿಸ್: ದೇಶ ಸೇವೆಗೆ ಸೇನೆ ಸೇರಿದ ಅಂಕೋಲಾದ 17 ನಾಯಿ ಮರಿಗಳು!

ಸಾಕು ಪ್ರಾಣಿಗಳಲ್ಲಿ ಮನುಷ್ಯ ಹೆಚ್ಚು ಇಷ್ಟಪಡುವ ಪ್ರಾಣಿ ಎಂದರೆ ಅದು ನಾಯಿ. ನಿಯತ್ತಿಗೆ ಮತ್ತೊಂದು ಹೆಸರು ನಾಯಿ ಎಂದು ಕರೆಯಲಾಗುತ್ತದೆ. ಇಂತಹ ಶ್ವಾನದ ಮರಿಗಳೀಗ ದೇಶಕ್ಕೆ ಸೇವೆ ಸಲ್ಲಿಸಲು ಸೇನಾಪಡೆಯನ್ನು ಸೇರಿಕೊಂಡಿವೆ.

ಅಂಕೋಲಾ (ಉತ್ತರ ಕನ್ನಡ): ಸಾಕು ಪ್ರಾಣಿಗಳಲ್ಲಿ ಮನುಷ್ಯ ಹೆಚ್ಚು ಇಷ್ಟಪಡುವ ಪ್ರಾಣಿ ಎಂದರೆ ಅದು ನಾಯಿ. ನಿಯತ್ತಿಗೆ ಮತ್ತೊಂದು ಹೆಸರು ನಾಯಿ ಎಂದು ಕರೆಯಲಾಗುತ್ತದೆ. ಇಂತಹ ಶ್ವಾನದ ಮರಿಗಳೀಗ ದೇಶಕ್ಕೆ ಸೇವೆ ಸಲ್ಲಿಸಲು ಸೇನಾಪಡೆಯನ್ನು ಸೇರಿಕೊಂಡಿವೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾವಿಕೆರೆ ನಿವಾಸಿ ರಾಘವೇಂದ್ರ ಭಟ್ ಎಂಬುವವರು ಸಾಕಿದ್ದ ಬೆಲ್ಜಿಯನ್ ಮಾಲಿನೋಯಿಸ್ (Belgian Malinois) ತಳಿಯ 17 ನಾಯಿ ಮರಿಗಳನ್ನು ಸೇನೆಗೆ ಸೇರ್ಪಡೆಯಾಗಿವೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗಿಯಾಗಿರುವ ರಾಘವೇಂದ್ರ ಭಟ್ ಅವರು, 25 ವರ್ಷಗಳಿಂದ ವಿವಿಧ ತಳಿಯ ನಾಯಿಗಳನ್ನು ಸಾಕುತ್ತಿದ್ದಾರೆ.

ರಾಘವೇಂದ್ರ ಅವರು ಈವರೆಗೂ ವಿಶೇಷ ಹಾಗೂ ಬೆಲೆ ಬಾಳುವ ತಳಿಗಳಾದ ಡಾಬರ್‌ಮನ್, ಜರ್ಮನ್ ಶೆಫರ್ಡ್, ಪಿಟ್‌ಬುಲ್, ಅಮೇರಿಕನ್ ಬುಲ್ಲಿ, ಮುಧೋಳ್, ಪಾಕಿಸ್ತಾನ ಬುಲ್ಲಿ, ಬಾಕ್ಸರ್, ಪಗ್, ಗ್ರೇಟ್ ಡೇನ್, ಲ್ರಾಬ್ರಡಾರ್ ಹಾಗೂ ಬೆಲ್ಜಿಯನ್ ಮಾಲಿನೋಯಿಸ್ ಮುಂತಾದ ನಾಯಿಗಳನ್ನು ಸಾಕಿದ್ದಾರೆ.

ರಾಘವೇಂದ್ರ ಭಟ್ ಅವರು ಮನೆಯಲ್ಲಿದ್ದ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ನಾಯಿ ಮರಿಗಳು ಸೇನೆಗೆ ಸೇರ್ಪಡೆಗೊಂಡಿವೆ. ಈ ನಾಯಿ ಮರಿಗಳನ್ನು ಸೇನೆಯ ಕಮಾಂಡೋ ಹಾಗೂ ಜವಾನರು ಎಸಿ ಬಸ್‌ನಲ್ಲಿ ಅಸ್ಸಾಂಗೆ ಕೊಂಡೊಯ್ದಿದ್ದಾರೆ.

ಇವರು ಈ ಹಿಂದೆ ಸಾಕಿದ್ದ ಬೆಲ್ಜಿಯನ್ ಮಾಲಿನೋಯಿಸ್ ಜಾತಿಯ ನಾಯಿಗಳು ಬೆಂಗಳೂರಿನ ಪೊಲೀಸ್ ಇಲಾಖೆ, ಕಾರ್ಕಳ ಎಎನ್‌ಎಫ್, ಬೆಳಗಾಂ ಮತ್ತು ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ.

ಇವರು ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಗೆ ನೀಡಿದ್ದ ನಾಯಿಯನ್ನು ನೋಡಿ ಹಾಗೂ ಇವರ ಫೇಸ್‌‌ಬುಕ್ ಪೇಜ್‌ ಅನ್ನು ವೀಕ್ಷಿಸಿ ಭಾರತೀಯ ಸೇನಾಪಡೆಯ ಅಧಿಕಾರಿಗಳು ಇವರನ್ನು ಸಂಪರ್ಕಿಸಿದ್ದಲ್ಲದೇ ನಾಯಿಗಳ ವೀಕ್ಷಣೆಗೆ ಇವರ ಮನೆಗೆ ಭೇಟಿ ನೀಡಿ ಪರಿಶೀಲನೆ ಕೂಡಾ ನಡೆಸಿದ್ದರು.

ಆ ನಂತರ ಸೇನಾಪಡೆಯ ಯೋಧರು45 ದಿನಗಳಿಂದ ಇವರ ಮನೆಯಲ್ಲೇ ಇದ್ದು, ನಾಯಿಗಳ ನಡವಳಿಕೆ, ಆಹಾರ ಪದ್ಧತಿ, ಅವುಗಳ ಬುದ್ಧಿಮತ್ತೆ, ಆರೋಗ್ಯ ಪರಿಶೀಲಿಸಿ ಪ್ರತಿನಿತ್ಯ ಉನ್ನತಾಧಿಕಾರಿಗಳಿಗೆ ವರದಿ ನೀಡುತ್ತಿದ್ದರು.

ಗುರುವಾರ ಭಾರತೀಯ ಸೇನೆಯ ತಂಡವೇ ಬಂದು 17 ನಾಯಿ ಮರಿಗಳನ್ನು ಖಾಸಗಿ ಎಸಿ ಬಸ್‌ನಲ್ಲಿ ಕುಳ್ಳಿರಿಸಿ ಅಸ್ಸಾಂನತ್ತ ಕೊಂಡೊಯ್ದಿದ್ದಾರೆ.

ತಾವು ಸಾಕಿರುವ ನಾಯಿಮರಿಗಳು ಪ್ರಸ್ತುತ ದೇಶಸೇವೆಗೆ ತೆರಳಿರುವುದು ರಾಘವೇಂದ್ರ ಭಟ್ ಮನೆಯವರಿಗೆಲ್ಲಾ ಸಾಕಷ್ಟು ಖುಷಿ ತಂದುಕೊಟ್ಟಿದೆ.

ಈ ನಾಯಿಗಳು ಗುಣಮಟ್ಟದ ಆಧಾರದ ಮೇಲೆ ತಲಾ 80 ಸಾವಿರ ರೂ.ಗಳಿಂದ 2 ಲಕ್ಷ ರೂ.ಗಳ ತನಕ ಬೆಲೆ ಬಾಳುತ್ತವೆ. ಇವರು ಸಾಕಿರುವ ಒ೦ದು ನಾಯಿ, ಕಾರವಾರ, ಶಿವಮೊಗ್ಗ, ಮಂಗಳೂರು, ಉಡುಪಿ, ಗೋವಾ, ಬೆಳಗಾವಿ, ಶಿರಸಿ ಮತ್ತಿತರ ಕಡೆ ನಡೆದ ಡಾಗ್ ಶೋಗಳಲ್ಲಿ ಪ್ರಶಸ್ತಿ ಹಾಗೂ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆದ್ದಿವೆ.

ಈ ನಾಯಿಗಳಿಗೆ ಅನ್ನ, ಮಜ್ಜಿಗೆ, ಮೊಸರು, ಹಾಲು, ಮೊಟ್ಟೆ, ಸ್ವಲ್ಪ ಚಿಕನ್, ಡ್ರೈ ಫ್ರೂಟ್, ಮಲ್ಟಿ ಗ್ರೇನ್‌ ಪೌಡರ್‌ ಮಿಶ್ರಣ ನೀಡಲಾಗುತ್ತದೆ. ಇದರೊಂದಿಗೆ ತರಕಾರಿ ಕೂಡಾ ಬೇಯಿಸಿ ನೀಡಲಾಗುತ್ತದೆ. ರಾಘವೇಂದ್ರ ಭಟ್ ಅವರ ಪತ್ನಿ ರಾಜೇಶ್ವರಿ ಹಾಗೂ ಅವರ ತಾಯಿ ನಾಯಿಗಳಿಗೆ ಆಹಾರವನ್ನು ತಯಾರಿಸುತ್ತಾರೆ. ಮಾಂಸಾಹಾರಿ ಆಹಾರವನ್ನು ತಂದು ನೀಡಲು ಒಬ್ಬರನ್ನು ನೇಮಕ ಮಾಡಿಕೊಂಡಿದ್ದಾರೆ.

ಸೇನಾಧಿಕಾರಿಗಳು ನನ್ನನ್ನು ಸಂಪರ್ಕಿಸಿದಾಗ ಆಶ್ಚರ್ಯವಾಯಿತು. ಬಳಿಕ ಅಧಿಕಾರಿಯೊಬ್ಬರನನ್ನು ಮನೆಗೆ ಕಳುಹಿಸಿದ್ದರು. ಸೇನೆಗೆ ಸೇರ್ಪಡೆಗೊಳಿಸಿಕೊಳ್ಳುವುದಕ್ಕೂ ಮುನ್ನ ಎಲ್ಲಾ ನಾಯಿಮರಿಗಳನ್ನೂ 45 ದಿನಗಳ ಕಾಲ ಪರೀಕ್ಷೆ ನಡೆಸಿದರು ಎಂದು ರಾಘವೇಂದ್ರ ಭಟ್ ಅವರು ಹೇಳಿದ್ದಾರೆ.

ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುವ ಸ್ನೇಹಿತರೊಬ್ಬರು ತಳಿಯ ಬಗ್ಗೆ ಮಾಹಿತಿ ನೀಡಿದ್ದರು. ಆ ಬಳಿಕ ನಾನು ಬೆಲ್ಜಿಯನ್ ಮಾಲಿನೋಯಿಸ್ ಬಗ್ಗೆ ತಿಳಿದುಕೊಂಡೆ. ನಾಯಿಗಳಿಗಾಗಿ ಹುಡುಕಾಟ ನಡೆಸಿದೆ. ಬೆಂಗಳೂರಿನಲ್ಲಿ ಒಂದು ಗಂಡು, ಹರಿಯಾಣದಿಂದ ಜೋಡಿ ಹೆಣ್ಣು ನಾಯಿಗಳು ಹಾಗೂ ಹೈದರಾಬಾದ್ ನಿಂದ ಒಂದು ಗಂಡು ನಾಯಿಯನ್ನು ತರಲಾಗಿದ್ದು.  ಈ ನಾಯಿಗಳಿಗೆ ಡೆವಿಲ್, ಲಿಸಾ, ಕೆಎಫ್ ಹಾಗೂ ಟಿನಿ ಎಂದು ಹೆಸರಿಟ್ಟಿದ್ದೆ.

ಲಿಸಾ 10 ಹಾಗೂ ಟಿನಿ 8 ನಾಯಿ ಮರಿಗಳಿಗೆ ಜನ್ಮ ನೀಡಿತ್ತು. ಈ ನಾಯಿ ಮರಿಗಳು ಸೇನೆಗೆ ಹೋಗುತ್ತವೆಂದು ಎಂದಿಗೂ ನಿರೀಕ್ಷಿಸಿರಲಿಲ್ಲ. ಈ ಹಿಂದೆ ಕೆಲ ನಾಯಿ ಮರಿಗಳು ರಾಜ್ಯ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದವು ಎಂದು ರಾಘವೇಂದ್ರ ಅವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Imran Khan ಸಾವಿನ ಊಹಾಪೋಹ ನಡುವೆ ಜೈಲಿನಲ್ಲಿ ಮಾಜಿ ಪ್ರಧಾನಿ ಭೇಟಿಯಾಗಿ ಬಂದ ಸಹೋದರಿ ಉಜ್ಮಾ ಖಾನಮ್ ಹೇಳಿದ್ದೇನು?

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಇದ್ದ ವೇದಿಕೆಗೆ ನುಗ್ಗಿದ ಆಗಂತುಕ!

ದರ್ಶನ್ ಲಾಕಪ್ ಡೆತ್: ಇನ್ಸ್ ಪೆಕ್ಟರ್ ಶಿವಕುಮಾರ್ ಸೇರಿ 4 ಮಂದಿ ಅಮಾನತು!

'ನಮ್ ಜೊತೆ ಯುದ್ಧ ಬೇಕು ಅಂದ್ರೆ.. ನಾವು ಸಿದ್ಧ': ಯೂರೋಪ್ ಗೆ Vladimir Putin ಬಹಿರಂಗ ಎಚ್ಚರಿಕೆ

Video: 'ಅಯೋಧ್ಯೆ ಮಾತ್ರವಲ್ಲ.. ಮುಸ್ಲಿಮರು ಇನ್ನೂ 2 ಐತಿಹಾಸಿಕ ಸ್ಥಳಗಳ ಬಿಟ್ಟುಕೊಡಿ, ಭಾರತ ಜಾತ್ಯಾತೀತವಾಗಿರಲು ಹಿಂದೂಗಳೇ ಕಾರಣ': Muhammad

SCROLL FOR NEXT