ಬೆಂಗಳೂರು: ನಗರದ ಮೂರು ಪಬ್ ಗಳ ಮೇಲೆ ಸಿಸಿಬಿ ಪೊಲೀಸರು ಭಾನುವಾರ ದಾಳಿ ನಡೆಸಿದ್ದು, ನಾಲ್ವರು ವಿದೇಶಿಯರು ಸೇರಿ 87 ಮಂದಿ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.
ಶನಿವಾರ ರಿಚ್‌ಮಂಡ್ ರಸ್ತೆಯಲ್ಲಿರುವ ಫ್ಯೂಯಲ್ ರೆಸ್ಟೋಬಾರ್, ಅಮರಜ್ಯೋತಿ ಎಚ್‌ಬಿಸಿಎಸ್ ಲೇಔಟ್‌ನ ಕ್ಲಬ್ 7, ಹೆಣ್ಣೂರು ಮುಖ್ಯರಸ್ತೆಯಲ್ಲಿರುವ ಶೇಗನ್ ಬಾರ್ ಆ್ಯಂಡ್ ಕಿಚನ್ ಮೇಲೆ ಸಿಸಿಬಿ ಮಹಿಳಾ ರಕ್ಷಣಾ ದಳ ದಾಳಿ ನಡೆಸಿತ್ತು. ದಾಳಿ ವೇಳೆ 9 ಮಂದಿಯನ್ನು ಬಂಧನಕ್ಕೊಳಪಡಿಸಿದೆ.
ಪರವಾನಗಿ ಇಲ್ಲದೆ ಬಾರ್ ನಡೆಸುತ್ತಿರುವುದು, ನಿಯಮ ಉಲ್ಲಂಘಿಸಿ ಅವಧಿ ಮೀರಿ ಬಾರ್-ಬರ್ ತೆರೆದು ಹೊರರಾಜ್ಯಗಳಿಂದ ಯುವತಿಯನ್ನು ಕರೆಸಿ ಅಸಭ್ಯ ಉಡುಪು ತೊಡಿಸಿ ಗ್ರಾಹಕರಿಗೆ ಲೈಂಗಿಕ ಪ್ರಚೋದಿಸುವ ಚಟುವಟಿಕೆಗಳಲ್ಲಿ ತೊಡಗಿರುವ ಕುರಿತು ಖಚಿತ ಮಾಹಿತಿಗಳ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.
ಫ್ಯುಯೆಲ್ ರೆಸ್ಟೋಬಾರ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಮೂವರುನ್ನು ಬಂಧನಕ್ಕೊಳಪಡಿಸಲಾಗಿದೆ. ಬಾರ್ ನಲ್ಲಿದ್ದ 19 ಮಂದಿಯರನ್ನು ರಕ್ಷಣೆ ಮಾಡಿದ್ದಾರೆ. ಕ್ಲಬ್ 7ರಲ್ಲಿ ಸಿಸಿಬಿ ಮೂವರು ಬಂಧನಕ್ಕೊಳಪಡಿಸಲಾಗಿದ್ದು, 55 ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.
ಶೆಗಾನ್ ಬಾರ್ ಆ್ಯಂಡ್ ಕಿಚನ್ ಮೇಲೆ ನಡೆದ ದಾಳಿಯಲ್ಲಿ ಮೂವರನ್ನು ಬಂಧನಕ್ಕೊಳಪಡಿಸಲಾಗಿದ್ದು, 13 ಮಹಿಳೆಯರನ್ನು ರಕ್ಷಣೆ ಮಾಡಿದೆ.