ತಪಸ್ ಮಾನವ ರಹಿತ ವಿಮಾನ 
ರಾಜ್ಯ

DRDO ದ 'ತಪಸ್ ಯುಎವಿ' ಪ್ರಯೋಗಾರ್ಥ ಹಾರಾಟ ಯಶಸ್ವಿ; ರಕ್ಷಣಾ ಸಂಶೋಧನಾ ಸಂಸ್ಥೆಗೆ ಭಾರತೀಯ ನೌಕಾಪಡೆ ಸಾಥ್!

ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ರಕ್ಷಣಾ ಸಂಶೋಧಾನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ನೌಕಾಪಡೆಯ ಸಹಯೋಗದಲ್ಲಿ ನಡೆದ ತಪಸ್ ಯುಎವಿ ಪ್ರಯೋಗಾರ್ಥ ಹಾರಾಟ ಯಶಸ್ವಿಯಾಗಿದೆ.

ಕಾರವಾರ: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ರಕ್ಷಣಾ ಸಂಶೋಧಾನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ನೌಕಾಪಡೆಯ ಸಹಯೋಗದಲ್ಲಿ ನಡೆದ ತಪಸ್ ಯುಎವಿ ಪ್ರಯೋಗಾರ್ಥ ಹಾರಾಟ ಯಶಸ್ವಿಯಾಗಿದೆ.

ಡಿಆರ್ ಡಿಒ ಮತ್ತು ಭಾರತೀಯ ನೌಕಾಪಡೆಯ ಸಹಭಾಗಿತ್ವದಲ್ಲಿ ತಪಸ್ ಮಾನವರಹಿತ ವೈಮಾನಿಕ ವಾಹನ (UAV)ದ ಕಮಾಂಡ್ ಮತ್ತು ಕಂಟ್ರೋಲ್ ಸಾಮರ್ಥ್ಯಗಳ ವರ್ಗಾವಣೆಯನ್ನು ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ. 

ಯುಎವಿಯನ್ನು ದೂರದ ಗ್ರೌಂಡ್ ಸ್ಟೇಷನ್ ನಿಂದ ಕಾರವಾರ ನೌಕಾನೆಲೆಯಿಂದ 148 ಕಿ.ಮೀ.ದೂರದಲ್ಲಿ ಸ್ಥಿತ ಐಎನ್ಎಸ್ ಸುಭದ್ರಾ ನೌಕೆಯಲ್ಲಿನ ಸ್ಟೇಷನ್ ಗೆ ಕಮಾಂಡ್ ಮಾಡುವುದನ್ನು ಜೂ.16ರಂದು ನಡೆದಿದ್ದ ಪ್ರಾತ್ಯಕ್ಷಿಕೆಯು ಒಳಗೊಂಡಿತ್ತು. ಕಾರವಾರ ನೌಕಾ ನೆಲೆಯಿಂದ 285 ಕಿ.ಮೀ.ದೂರದಲ್ಲಿರುವ ಚಿತ್ರದುರ್ಗದ ವೈಮಾನಿಕ ಪರೀಕ್ಷಾ ವಲಯ (ಎಟಿಆರ್)ದಿಂದ ಬೆಳಿಗ್ಗೆ 7:35ಕ್ಕೆ ತಪಸ್ ಹಾರಾಟವನ್ನು ಪ್ರಾರಂಭಿಸಿತ್ತು. ‘ತಪಸ್ ಸಮುದ್ರ ಮಟ್ಟದಿಂದ 20,000 ಅಡಿ ಎತ್ತರದಲ್ಲಿ ದೋಷರಹಿತವಾಗಿ ಕಾರ್ಯಾಚರಿಸಿತ್ತು. ಐಎನ್ಎಸ್ ಸುಭದ್ರಾ 40 ನಿಮಿಷಗಳ ಅವಧಿಗೆ ತಪಸ್ನ ಕಾರ್ಯಾಚರಣೆಗಳ ನಿಯಂತ್ರಣವನ್ನು ವಹಿಸಿಕೊಳ್ಳುವುದರೊಂದಿಗೆ ಮೂರು ಗಂಟೆ ಮೂವತ್ತು ನಿಮಿಷಗಳ ಹಾರಾಟವನ್ನು ಪೂರ್ಣಗೊಳಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಪ್ರಯೋಗಕ್ಕಾಗಿ ನೆಲದಲ್ಲಿ ಒಂದು ನಿಯಂತ್ರಣ ಕೇಂದ್ರ ಮತ್ತು ಐಎನ್ ಎಸ್ ಸುಭದ್ರಾದಲ್ಲಿ ಎರಡು ಶಿಪ್ ಡೇಟಾ ಟರ್ಮಿನಲ್ ಗಳನ್ನು ಸ್ಥಾಪಿಸಲಾಗಿತ್ತು. ಯಶಸ್ವಿ ಪ್ರಯೋಗದ ಬಳಿಕ ತಪಸ್ ಎಟಿಆರ್ ಗೆ ವಾಪಸಾಗಿ ಸುರಕ್ಷಿತವಾಗಿ ಇಳಿಯಿತು ಎಂದು  ಡಿಆರ್‌ಡಿಓ ಸರಣಿ ಟ್ವೀಟ್ ಗಳಲ್ಲಿ ತಿಳಿಸಿದೆ.

30,000 ಸಾವಿರ ಅಡಿಗಳ ಎತ್ತರದಲ್ಲಿ ಹಾರಾಡಬಲ್ಲ ತಪಸ್ 250 ಕಿ.ಮೀ.ಗೂ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ. ಗರಿಷ್ಠ 350 ಕೆಜಿ ಪೇಲೋಡ್ ಸಾಗಿಸುವ ಸಾಮರ್ಥ್ಯ ಹೊಂದಿರುವ ಯುಎವಿಯನ್ನು ಭಾರತೀಯ ಸೇನಾ ಪಡೆಗಳಿಗಾಗಿ ಬೇಹುಗಾರಿಕೆ, ಕಣ್ಗಾವಲು ಮತ್ತು ವಿಚಕ್ಷಣಾ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಡಿಆರ್‌ಡಿಓ ತಿಳಿಸಿದೆ.

“ಡ್ರೋನ್‌ನ ಹಾರಾಟ, ಸಂವೇದಕಗಳು ಮತ್ತು ಪೇಲೋಡ್‌ಗಳನ್ನು ನಿಯಂತ್ರಿಸುವ ಆಪರೇಟರ್‌ನ ಸಾಮರ್ಥ್ಯವನ್ನು ಪರಿಶೀಲಿಸಲು ಈ ಪರೀಕ್ಷೆಯನ್ನು C2 -- ಆಜ್ಞೆ ಮತ್ತು ನಿಯಂತ್ರಣ ಸಾಮರ್ಥ್ಯಗಳು (C2 -- command and control capabilities) ಎಂದು ಕರೆಯಲಾಗುತ್ತದೆ. ಡ್ರೋನ್‌ನ ಸುರಕ್ಷಿತ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗಳಿಗೆ C2 ಸಾಮರ್ಥ್ಯಗಳು ಅತ್ಯಗತ್ಯ. ಇದು ಮಧ್ಯಮ ಎತ್ತರದ ದೀರ್ಘ ಸಹಿಷ್ಣುತೆ (MALE) ಡ್ರೋನ್ ಆಗಿದ್ದು, ಇದು 24 ರಿಂದ 48 ಗಂಟೆಗಳ ಹಾರಾಟದ ಸಹಿಷ್ಣುತೆಯನ್ನು ಹೊಂದಿದೆ ಎಂದು ಬೆಂಗಳೂರು ಮೂಲದ ರಕ್ಷಣಾ ತಜ್ಞ ಗಿರೀಶ್ ಲಿಂಗಣ್ಣ ಮಾಹಿತಿ ನೀಡಿದ್ದಾರೆ.
 
TAPAS ಅನ್ನು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ ಮತ್ತು ಎಲ್ಲಾ ಮೂರು ಪಡೆಗಳಿಗೆ ಗಸ್ತು ಮತ್ತು ಗುಪ್ತಚರ ಸಂಗ್ರಹಣೆಗಾಗಿ ಬಳಸಬಹುದು. ಈ UAVಗಳನ್ನು ಯುನೈಟೆಡ್ ಸ್ಟೇಟ್ಸ್‌ನ ಪ್ರಿಡೇಟರ್ ಡ್ರೋನ್‌ಗಳ ಭಾರತೀಯ ಆವೃತ್ತಿ ಎಂದು ಪರಿಗಣಿಸಲಾಗುತ್ತದೆ.

ಹಗಲು ರಾತ್ರಿ ಚಿತ್ರಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಎಲೆಕ್ಟ್ರೋ ಆಪ್ಟಿಕ್ಸ್ ಸಂವೇದಕಗಳು, ಕಣ್ಗಾವಲು ಮತ್ತು ವಿಚಕ್ಷಣ ಕಾರ್ಯಾಚರಣೆಗಳಿಗೆ ಬಳಸಬಹುದಾದ ದೂರದಿಂದ ಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಲು ದೀರ್ಘ-ಶ್ರೇಣಿಯ ಎಲೆಕ್ಟ್ರೋ ಆಪ್ಟಿಕ್ಸ್ ಸಂವೇದಕಗಳು ಮತ್ತು ಶತ್ರುಗಳ ಚಲನವಲನ ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ.

ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ಭೂಪ್ರದೇಶದ ವೈಶಿಷ್ಟ್ಯಗಳು ಮತ್ತು ವಸ್ತುಗಳು, ಎಲೆಕ್ಟ್ರಾನಿಕ್ ಗುಪ್ತಚರ, ಸಂವಹನ ಬುದ್ಧಿವಂತಿಕೆ ಮತ್ತು ಇತರ ವೈಶಿಷ್ಟ್ಯಗಳಂತಹ ನೆಲದ ಮೇಲ್ಮೈ ವಿವರಗಳನ್ನು ಪಡೆಯಲು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಬಳಸಬಹುದಾದ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ರಚಿಸಲು ಸಿಂಥೆಟಿಕ್ ಅಪರ್ಚರ್ ಎಂಬ ತಂತ್ರವನ್ನು ಬಳಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT