ರಾಜ್ಯ

ಹುಬ್ಬಳ್ಳಿ: ಕೆಎಸ್‌ಆರ್ ಟಿಸಿ ಬಸ್‌ನಲ್ಲಿ ವೃದ್ಧೆಗೆ ಕಪಾಳಮೋಕ್ಷ ಮಾಡಿದ ಕಂಡಕ್ಟರ್, ವಿಡಿಯೋ ವೈರಲ್

Nagaraja AB

ಹುಬ್ಬಳ್ಳಿ: ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ನೌಕರರು ಮಹಿಳಾ ಪ್ರಯಾಣಿಕರೊಂದಿಗೆ ಸೌಹಾರ್ದಯುತವಾಗಿ ವರ್ತಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ  ಮಹಿಳಾ ಕಂಡಕ್ಟರ್‌ಯೊಬ್ಬರು ವೃದ್ಧೆಯೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ಶುಕ್ರವಾರ ವರದಿಯಾಗಿದೆ.

ಕುಂದಗೋಳದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಈ ಘಟನೆ ನಡೆದಿದೆ. 55 ಸೆಕೆಂಡ್‌ಗಳ ವಿಡಿಯೋದಲ್ಲಿ ಕಂಡಕ್ಟರ್ ಮತ್ತು ವೃದ್ಧೆಯ ನಡುವೆ ವಾಗ್ವಾದ ನಡೆದಿರುವ ದೃಶ್ಯವಿದೆ. ಇಬ್ಬರೂ ಜಗಳವಾಡುತ್ತಿದ್ದಂತೆ, ಕಂಡಕ್ಟರ್ ವೃದ್ಧೆಗೆ  ಕಪಾಳಮೋಕ್ಷ ಮಾಡಿ ಸುಮ್ಮನಿರಲು ಹೇಳುತ್ತಾಳೆ. ಆದರೆ, ವೃದ್ಧೆ  ಕಂಡಕರ್ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಿಂದಿಸಿದ್ದಾಳೆ. ಸಹ ಪ್ರಯಾಣಿಕರು ವೃದ್ಧೆಯ ಬೆಂಬಲಕ್ಕೆ ಬರುತ್ತಾರೆ.

ಘಟನೆಯ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ಸಿಬ್ಬಂದಿ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಉಚಿತ ಪ್ರಯಾಣ ಯೋಜನೆಯನ್ನು ರಾಜ್ಯದಾದ್ಯಂತ ಜನರು ಬಳಸಿಕೊಳ್ಳುತ್ತಿದ್ದಾರೆ ಮತ್ತು ಪ್ರಶಂಸಿಸುತ್ತಿದ್ದಾರೆ.

ಜೂನ್ 11 ರಿಂದ ಜೂನ್ 22 ರವರೆಗೆ ಶಕ್ತಿ ಯೋಜನೆಯಡಿ 5.98 ಕೋಟಿ ಮಹಿಳೆಯರು  ಸೇವೆಯನ್ನು ಪಡೆದಿದ್ದಾರೆ ಮತ್ತು ನೆರೆಯ ರಾಜ್ಯಗಳ ಗಡಿ ಗ್ರಾಮಗಳು ಮತ್ತು ಪಟ್ಟಣಗಳಿಗೆ 20 ಕಿ.ಮೀ. ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ  ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.ಒಟ್ಟಾರೇ ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಪ್ರಯಾಣಿಸಿರುವ ಮಹಿಳಾ ಪ್ರಯಾಣಿಕರ ಒಟ್ಟು ಮೌಲ್ಯ 139.53 ಕೋಟಿ ರೂಪಾಯಿ ಎಂದು ರಾಜ್ಯ ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.

SCROLL FOR NEXT