ರಾಜ್ಯ

ಕರ್ನಾಟಕ ಸರ್ಕಾರ, ಜಿವಿಕೆ ಇಎಂಆರ್ ಐ ನಡುವಿನ ತಿಕ್ಕಾಟ: ಆಂಬ್ಯುಲೆನ್ಸ್ ಸೇವೆಗೆ ಸಂಕಟ

Shilpa D

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಸೇವಾ ಪೂರೈಕೆದಾರರಾದ ಜಿವಿಕೆ ಇಎಂಆರ್‌ಐ ನಡುವಿನ ಭಿನ್ನಾಭಿಪ್ರಾಯದಿಂದಾಗಿ ‘108’ ಆಂಬ್ಯುಲೆನ್ಸ್ ಸೇವೆಗಳ ಮೇಲೆ ಪರಿಣಾಮ ಬೀರಿದೆ.

ಜಿವಿಕೆ ಇಎಂಆರ್‌ಐನ ಕಳಪೆ ಸೇವೆಯಿಂದ ಕಳೆದ ಮೂರು ತಿಂಗಳಿನಿಂದ ಆಂಬ್ಯುಲೆನ್ಸ್‌ಗಳ ಚಾಲಕರಿಗೆ ಸಂಬಳ ನೀಡದಿರಲು ಕಾರಣ ಎಂದು ಸರ್ಕಾರ ಹೇಳಿದೆ.

ಜಿವಿಕೆ ಇಎಂಆರ್ ಐ ಅಧಿಕಾರಿಗಳು, ಸರ್ಕಾರವು 2008 ರಲ್ಲಿ ಸಹಿ ಮಾಡಿದ ತಿಳುವಳಿಕೆ ಒಪ್ಪಂದದ (ಎಂಒಯು) ಷರತ್ತುಗಳನ್ನು ಅನುಸರಿಸುವ ಬದಲು ಪಾವತಿಗಳನ್ನು ತೆರವುಗೊಳಿಸಲು ತನ್ನದೇ ಆದ ನಿಯಮಗಳು ಮತ್ತು ಷರತ್ತುಗಳನ್ನು ರಚಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

ಎಲ್ಲಾ ಆಂಬ್ಯುಲೆನ್ಸ್‌ಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸದ ಕಾರಣ ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸಲಾಗಿದೆ ಎಂದು ಉಪ ನಿರ್ದೇಶಕ (108 ಆಂಬ್ಯುಲೆನ್ಸ್‌ಗಳು) ಪ್ರಭುಗೌಡ ತಿಳಿಸಿದ್ದಾರೆ.

ಆಂಬ್ಯುಲೆನ್ಸ್‌ಗಳ ಬಳಕೆಯ ಆಧಾರದ ಮೇಲೆ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಏತನ್ಮಧ್ಯೆ, ಆಂಬ್ಯುಲೆನ್ಸ್‌ಗಳನ್ನು ನಿರ್ವಹಿಸುತ್ತಿರುವ ನೌಕರರು ಕಳೆದ ಮೂರು ತಿಂಗಳಿಂದ ಸಂಬಳ ಪಡೆದಿಲ್ಲ ಎಂದು ದೂರಿದ್ದಾರೆ. ಜುಲೈ 7ರೊಳಗೆ ವೇತನ ನೀಡದಿದ್ದರೆ ಮರುದಿನದಿಂದ ಮುಷ್ಕರ ನಡೆಸುವುದಾಗಿ ಜೂ.27ರಂದು ಸರಕಾರಕ್ಕೆ ಪತ್ರ ಬರೆದಿದ್ದಾರೆ.  ಶನಿವಾರದೊಳಗೆ ಪಾವತಿ ಮಾಡಲಾಗುವುದು ಎಂದು  ಪ್ರಭುಗೌಡ ತಿಳಿಸಿದ್ದಾರೆ.

SCROLL FOR NEXT