ಸಂಗ್ರಹ ಚಿತ್ರ 
ರಾಜ್ಯ

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಪದವಿ ಮಧ್ಯೆ ಕಾಲೇಜು ಬದಲಾವಣೆಗೆ ಉನ್ನತ ಶಿಕ್ಷಣ ಇಲಾಖೆ ಅವಕಾಶ!

ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಕಾಲೇಜು ಬದಲಾಯಿಸುವ ಅವಕಾಶವನ್ನು ಉನ್ನತ ಶಿಕ್ಷಣ ಇಲಾಖೆ ನೀಡಿದೆ.

ಬೆಂಗಳೂರು: ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಕಾಲೇಜು ಬದಲಾಯಿಸುವ ಅವಕಾಶವನ್ನು ಉನ್ನತ ಶಿಕ್ಷಣ ಇಲಾಖೆ ನೀಡಿದೆ.

ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಆದೇಶದಲ್ಲಿ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮೂರು, ಐದು, ಏಳನೇ ಸೆಮಿಸ್ಟರ್‌ಗಳ ಪ್ರವೇಶಕ್ಕೂ ಮೊದಲು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಅಥವಾ ಇತರೆ ಯಾವುದೇ ಸಾರ್ವಜನಿಕ ವಿಶ್ವವಿದ್ಯಾಲಯಗಳ ಕಾಲೇಜುಗಳಿಗೆ ವರ್ಗಾವಣೆ ಪಡೆಯಲು ಅವಕಾಶ ಕಲ್ಪಿಸಿರುವುದಾಗಿ ತಿಳಿಸಿದೆ.

ಪಾಸಾಗದೆ ಉಳಿದ ವಿಷಯಗಳನ್ನು ವರ್ಗಾವಣೆಗೊಂಡ ಕಾಲೇಜಿನಲ್ಲಿಯೇ ಮುಂದುವರೆಸಲು ಅವಕಾಶ ಕಲ್ಪಿಸಿ ಕೊಡಬೇಕು. ಒಂದು ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜಿಗೆ ವರ್ಗಾವಣೆ ಬಯಸಿದಲ್ಲಿ ಯುಯುಸಿಎಂಎಸ್ ತಂತ್ರಾಂಶ ಬಳಸಿ ವರ್ಗಾವಣೆ ಹಾಗೂ ಪಾಸಾಗದೆ ಉಳಿದ ವಿಷಯಗಳನ್ನು ವರ್ಗಾವಣೆಗೊಂಡ ಕಾಲೇಜಿನಲ್ಲಿಯೇ ಮುಂದುವರೆಸಲು ಅವಕಾಶ ನೀಡಬೇಕು ಎಂದು ಹೇಳಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಎರಡು ಸೆಮಿಸ್ಟರ್‌ ಪೂರೈಸಿದವರು ಓದು ಅರ್ಧಕ್ಕೆ ನಿಲ್ಲಿಸಿದರೆ ಅವರಿಗೆ ಕೆಳಹಂತದ ಪದವಿ ಪ್ರಮಾಣಪತ್ರ ನೀಡಲಾಗುತ್ತದೆ. ನಾಲ್ಕು ಸೆಮಿಸ್ಟರ್‌ ಪೂರೈಸಿದವರಿಗೆ ಡಿಪ್ಲೊಮಾ ಪದವಿ, ಆರು ಸೆಮಿಸ್ಟರ್‌ ಪೂರೈಸಿದರೆ ಪದವಿ, ಎಂಟು ಸೆಮಿಸ್ಟರ್‌ ಪೂರೈಸಿದರೆ ಆನರ್ಸ್‌ ಪದವಿ ಪ್ರದಾನ ಮಾಡಲು ಸೂಚಿಸಿದೆ.

ವಿದ್ಯಾರ್ಥಿ ಬಯಸಿದರೆ ಏಕ ಕಾಲಕ್ಕೆ ಎರಡು ಪದವಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ. ಈ ಅವಕಾಶ ಇರುವುದರಿಂದ ಒಂದೇ ವಿದ್ಯಾರ್ಥಿ ಎರಡು ಪದವಿಗಳನ್ನು ಪಡೆಯಬಹುದು. ವಿದ್ಯಾರ್ಥಿ ಬಯಸಿದರೆ ಏಕ ಕಾಲಕ್ಕೆ ಎರಡು ಪದವಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ. ಈ ಅವಕಾಶ ಇರುವುದರಿಂದ ಒಂದೇ ವಿದ್ಯಾರ್ಥಿ ಎರಡು ಪದವಿಗಳನ್ನು ಪಡೆಯಬಹುದಾಗಿದೆ.

ಒಂದು ವಿದ್ಯಾರ್ಥಿಗಳು ಕಾಲೇಜು ಬದಲಿಸುವ ಆಲೋಚನೆ ಹೊಂದಿದ್ದರೆ ಸೆಮಿಸ್ಟರ್​ ಅಂತ್ಯಕ್ಕೆ ಬೇರೆ ಕಾಲೇಜಿಗೆ ಸೇರ್ಪಡೆಗೊಳ್ಳಬಹುದಾಗಿದೆ. ಪದವಿ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಯಾರೇ ಆದರೂ ಕಾಲೇಜು ಬದಲಿಸುವ ಅವಕಾಶ ಹೊಂದಿರುತ್ತಾರೆ ಎಂದು ತಿಳಿಸಿದೆ.

ಯಾವುದೇ ಸೆಮಿಸ್ಟರ್ ನ ಮಧ್ಯದಲ್ಲಿ ವಿದ್ಯಾರ್ಥಿ ಓದುವುದನ್ನು ನಿಲ್ಲಿಸಿದರೂ ಪ್ರವೇಶ ಪಡೆದ ದಿನದಿಂದ 7 ವರ್ಷಗಳ ಒಳಗೆ ಮರು ಪ್ರವೇಶ ಪಡೆಯಬಹುದಾಗಿದೆ.

ವಿದ್ಯಾರ್ಥಿ ಪಡೆದ ಕ್ರೆಡಿಟ್ ಪಾಯಿಂಟ್ಸ್‌ಗಳನ್ನು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್‌ ಖಾತೆಯೊಂದಿಗೆ ಸಂಯೋಜಿಸಬೇಕು. ಈ ಪಾಯಿಂಟ್ಸ್ ವಿದ್ಯಾರ್ಥಿಗೆ ಸೂಕ್ತ ಪ್ರಮಾಣಪತ್ರ ನೀಡಲು ಸಂಬಂಧಪಟ್ಟ ವಿವಿಗಳು ಪರಿಗಣಿಸಬೇಕು. ಯುಜಿಸಿ ನಿಯಮಾವಳಿಯಂತೆ ಏಕಕಾಲದಲ್ಲಿ ಬಹುಪದವಿ ಪಡೆಯಲು ಅವಕಾಶವಿದ್ದು, ವಿದ್ಯಾರ್ಥಿಯ ಹಾಜರಾತಿ ಖಚಿತ ಪಡಿಸಿಕೊಂಡು ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT