ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 'ಸೇಫ್ ಸಿಟಿ-ಬೆಂಗಳೂರು' ಮೊದಲ ಹಂತದ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದು ಈ ಮೂಲಕ ನಗರದಲ್ಲಿ ಮಹಿಳೆಯರ ಸುರಕ್ಷತೆಗೆ ಮತ್ತಷ್ಟು ಬಲ ದೊರೆತಂತಾಗಿದೆ.
ನಗರದ ಟೌನ್ ಹಾಲ್ ಬಳಿ ಅಮಿತ್ ಶಾ ಅವರು ಸೇಫ್ ಸಿಟಿ ಬೆಂಗಳೂರು ಯೋಜನೆಗೆ ಚಾಲನೆ ನೀಡಿದರು. ಈ ಮೂಲಕ ಬೆಂಗಳೂರಿನಲ್ಲಿ ಸದ್ಯ ಅಳವಡಿಸಲಾಗಿರುವ 4,100 ಸಿಸಿ ಕ್ಯಾಮೆರಾಗಳ ಕಾರ್ಯನಿರ್ವಣೆಗೆ ಚಾಲನೆ ಸಿಕ್ಕಿದೆ. ಒಟ್ಟಾರೆ 7,500 ಸಿಸಿ ಟಿವಿ ಕ್ಯಾಮೆರಾಗಳ ಅವಳಡಿಕೆ ಮಾಡುವ ಗುರಿ ಹೊಂದಲಾಗಿದೆ.
ಸೇಫ್ ಸಿಟಿ ಬೆಂಗಳೂರು ಯೋಜನೆಯ ಮೊದಲ ಹಂತದಲ್ಲಿ ನಗರದಾದ್ಯಂತ 1,640 ಸ್ಥಳಗಳಲ್ಲಿ 4,100 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಇವು ನಿರಂತರ 24 ಗಂಟೆಗಳು ಕಾರ್ಯನಿರ್ವಹಿಸಲಿವೆ. ಇದರ ಕಮಾಂಡ್ ಸೆಂಟರ್ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿದ್ದು ಪೊಲೀಸರು ವೀಕ್ಷಣೆ ಮಾಡುತ್ತಿರುತ್ತಾರೆ.