ರಾಜ್ಯ

ಚಿಕ್ಕಮಗಳೂರು: ಶವ ಸಾಗಣೆ ವಾಹನ ಅವ್ಯವಸ್ಥೆ, ಬಿಜೆಪಿ ವಿರುದ್ಧ ಜೆಡಿಎಸ್ ಆಕ್ರೋಶ

Nagaraja AB

ಬೆಂಗಳೂರು: ಚಿಕ್ಕಮಗಳೂರು ನಗರಸಭೆಯ ವ್ಯಾಪ್ತಿಯಲ್ಲಿನ ಶವ ಸಾಗಣೆ ವಾಹನದ ಅವ್ಯವಸ್ಥೆಯಿಂದ ಕುಟುಂಬದವರೇ ಶವವಿರುವ ವಾಹನವನ್ನು ತಳ್ಳಿ ಸ್ಮಶಾನಕ್ಕೆ ಒಯ್ದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಹಂಚಿಕೊಂಡಿರುವ ಜೆಡಿಎಸ್, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. 

ಎಂತಹ ಶೋಚನಿಯ ಸ್ಥಿತಿ ಇದು! ಚಿಕ್ಕಮಗಳೂರು ನಗರಸಭೆಯ ವ್ಯಾಪ್ತಿಯಲ್ಲಿನ ಶವ ಸಾಗಣೆ ವಾಹನದ ಅವ್ಯವಸ್ಥೆಯಿಂದ ಇಂತಹ ಹೃದಯ ವಿದ್ರಾವಕ ಘಟನೆ ನಡೆದಿದೆ. ದುಃಖತಪ್ತ ಕುಟುಂಬದವರೇ ಶವವಿರುವ ವಾಹನವನ್ನು ತಳ್ಳಿ ಸ್ಮಶಾನಕ್ಕೆ ಒಯ್ಯುತ್ತಿರುವ ದೃಶ್ಯ ಅಲ್ಲಿನ ಸ್ಥಳೀಯ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ಟೀಕಿಸಿದೆ. 

ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿಯೇ  ಅಧಿಕಾರದಲ್ಲಿದೆ. ಶವ ಸಾಗಿಸುವ ವಾಹನದ ಸಮರ್ಪಕ ವ್ಯವಸ್ಥೆ ಮಾಡಲೂ ಆಗದ ನಿಮಗೆ ಅಧಿಕಾರ ಏಕೆ ಬೇಕು? ಕೋಮು ದ್ವೇಷ ಹರಡಲು ಸಮಯ ಸಿಗದಿರುವಾಗ ಜನಸೇವೆ ಎಲ್ಲಿ ಮುಖ್ಯವಾಗುತ್ತದೆ? ಎಂದು ಶಾಸಕ ಸಿಟಿ ರವಿ ಹಾಗೂ ರಾಜ್ಯ ಬಿಜೆಪಿಯನ್ನು ಜೆಡಿಎಸ್ ಪ್ರಶ್ನಿಸಿದೆ. 
 

SCROLL FOR NEXT