ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಅಪಘಾತ 
ರಾಜ್ಯ

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಮತ್ತೊಂದು ಅಪಘಾತ: ಟ್ರಕ್-ಕಾರು ಢಿಕ್ಕಿ, ಪ್ರಯಾಣಿಕರು ಪಾರು!

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ಟಿಪ್ಪರ್ ಟ್ರಕ್ ಮತ್ತು ಕಾರಿನ ನಡುವೆ ಢಿಕ್ಕಿ ಸಂಭವಿಸಿದೆ. 

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ಟಿಪ್ಪರ್ ಟ್ರಕ್ ಮತ್ತು ಕಾರಿನ ನಡುವೆ ಢಿಕ್ಕಿ ಸಂಭವಿಸಿದೆ. 

ಮೈಸೂರು – ಬೆಂಗಳೂರು ದಶಪಥ ರಸ್ತೆಯ ರಾಮನಗರ ಬೈಪಾಸ್​​ನ ಸಂಘ ಬಸವನದೊಡ್ಡಿ ಬಳಿ ದಶಪಥ ಹೆದ್ದಾರಿ ಮೇಲ್ಸೇತುವೆವೊಂದರಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ. ಕಾರು, ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ್ದು, ಈ ವೇಳೆ ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಗೆಯೇ ಟಿಪ್ಪರ್‌ ಮೇಲ್ಸೇತುವೆಗೆ ಒರಗಿ ನಿಂತಿದೆ. 

ಸೇತುವೆ ಕೆಳಭಾಗದಲ್ಲಿ ಎಕ್ಸ್‌ಪ್ರೆಸ್‌ ಹೈವೇ ಇರುವುದರಿಂದ ಹೆಚ್ಚಿನ ವಾಹನ ಸಂಚಾರಿಸುತ್ತಿತ್ತು. ಏನಾದರು ಟಿಪ್ಪರ್ ಸೇತುವೆಯಿಂದ ಕೆಳಗೆ ಉರುಳಿದ್ದರೆ ವಾಹನಗಳ ಮೇಲೆ ಲಾರಿ ಉರುಳಿ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟಾವಷತ್ ಭಾರಿ ಅನಾಹುತ ತಪ್ಪಿದಂತಾಗಿದೆ. 

ಇನ್ನು ಕಳೆದ 8‌ ತಿಂಗಳಲ್ಲಿ ರಾಮನಗರ ವ್ಯಾಪ್ತಿಯಲ್ಲಿ 80ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು 40ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೌಕಾಪಡೆ ಭದ್ರತೆಯಲ್ಲಿ Hormuz ಜಲಸಂಧಿ ದಾಟಿದ ಭಾರತ ಮೂಲದ LPG tanker!

ಒಂದು ರೂಪಾಯಿಗೆ ಒಂದು ಲೀಟರ್ ಹಾಲು!: ಬಮುಲ್ ಅಧ್ಯಕ್ಷ DK Suresh ಹೇಳಿದ್ದೇನು?

Cricket: ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆ, ICC ಕ್ರಮ .. ಡಿಮೆರಿಟ್ ಪಾಯಿಂಟ್!

IPL 2026: ಪಂದ್ಯಾವಳಿಗೂ ಮುನ್ನವೇ RCB ಹೀನಾಯ ದಾಖಲೆ ತೋರಿಸಿ ಕೆಣಕಿದ KKR; ಕೆರಳಿದ ಆರ್​ಸಿಬಿ ಅಭಿಮಾನಿಗಳು, Video!

ಮದುವೆ ರದ್ದಾದ ನಂತರ ತನ್ನ ರಕ್ತವನ್ನೇ ಯುವತಿಗೆ ಇಂಜೆಕ್ಟ್ ಮಾಡಿದ HIV ಸೋಂಕಿತ ಯುವಕನ ಬಂಧನ!

SCROLL FOR NEXT