ರಾಜ್ಯ

ಮರೀಚಿಕೆಯಾದ ಮೂಲಭೂತ ಸೌಕರ್ಯ: ಭೀಮಗಡ ಅಭಯಾರಣ್ಯ ವಾಸಿಗಳಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ

Manjula VN

ಬೆಳಗಾವಿ: ಮೂಲಭೂತ ಸೌಕರ್ಯ ದೊರಯದೆ ಬೇಸತ್ತು ಹೋಗಿರುವಭೀಮಗಡ ವನ್ಯಜೀವಿ ಅಭಯಾರಣ್ಯ (ಬಿಡಬ್ಲ್ಯುಎಸ್) ಆವರಣದಲ್ಲಿರುವ ಕುಗ್ರಾಮಗಳ ಗ್ರಾಮಸ್ಥರು, ಬೇಡಿಕೆಗಳ ನಿರ್ಲಕ್ಷಿಸಿದ್ದೇ ಆದರೆ, ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವನ್ಯಜೀವಿ ಅಭಯಾರಣ್ಯ (ಬಿಡಬ್ಲ್ಯುಎಸ್) ಆವರಣದಲ್ಲಿರುವ ಶಿರೋಳಿ, ಹೇಮಡಗಾ, ತಳೇವಾಡಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಬೆಳಗಾವಿಯಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಗೆ ಸೋಮವಾರ ಭೇಟಿ ನೀಡಿದ್ದು, ಮನವಿ ಪತ್ರ ಸಲ್ಲಿಸಿದರು.

ಖಾನಾಪುರ ತಾಲೂಕಿನ ಶಿರೋಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಚುನಾವಣೆ ಬಹಿಷ್ಕರಿಸಿ ಧರಣಿ ನಡೆಸುವ ನಿರ್ಣಯವನ್ನು ಕೈಗೊಳ್ಳಲಾಯಿತು.

ಇದೇ ಗ್ರಾಮಸ್ಥರು 2019ರ ಲೋಕಸಭೆ ಚುನಾವಣೆಯನ್ನೂ ಬಹಿಷ್ಕರಿಸಿದ್ದರು. ಬೇಡಿಕೆಗಳ ಈಡೇರಿಸದ ಹಿನ್ನೆಲೆಯಲ್ಲಿ ಗವಳಿ, ಕೃಷ್ಣಾಪುರ, ಪಾಸ್ತೋಲಿ, ಕೊಂಗಾಲ, ತಳೇವಾಡಿ, ಜೋರ್ಡಾನ್, ಸಾಯಚೆ ಮಾಳ, ಚಾಪೋಲಿ, ಕಾಪೋಲಿ, ಮುದಗೈ, ಚಿರೇಖಣಿ, ಆಮಗಾಂವ ಗ್ರಾಮಗಳ ನಿವಾಸಿಗಳು ಚುನಾವಣೆಯನ್ನು ಬಹಿಷ್ಕರಿಸಿದ್ದರು. ಚುನಾವಣೆಯಲ್ಲಿ ಈ ಗ್ರಾಮಗಳ ಯಾವುದೇ ವ್ಯಕ್ತಿ ಕೂಡ ಮತ ಚಲಾಯಿಸಿರಲಿಲ್ಲ. ಇದೀಗ ಮತ್ತೊಮ್ಮೆ ಬೇಡಿಕೆಯನ್ನು ಮುಂದಿಟ್ಟು, ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದ್ದಾರೆ.  

ಬಿಡಬ್ಲ್ಯೂಎಸ್‌ನಲ್ಲಿರುವ ಹೇಮಡ್ಗಾ ಗ್ರಾಮದ ನಿವಾಸಿ ವಿಜಯ್ ಮಾದರ್ ಎಂಬುವವರು ಮಾತನಾಡಿ, ಈ ಗ್ರಾಮಗಳಿಗೆ ಸರಿಯಾದ ರಸ್ತೆಗಳಿಲ್ಲ, ಹೀಗಾಗಿಯೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಂತಾಗಿದೆ. ಮಳೆಗಾಲದಲ್ಲಿ ನದಿ, ತೊರೆಗಳಲ್ಲಿ ಪ್ರವಾಹ ಉಂಟಾಗಿ ಕಾಡಂಚಿನ ಹಲವಾರು ಗ್ರಾಮಗಳು ಸಂಪರ್ಕ ಕಡಿತಗೊಳ್ಳುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.

ಸೇತುವೆಗಳನ್ನು ನಿರ್ಮಿಸಲು ಯೋಜನೆಗಳನ್ನು ಮಂಜೂರು ಮಾಡಿದ್ದರೂ, ಅರಣ್ಯಗಳಲ್ಲಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮತಿ ನೀಡಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

SCROLL FOR NEXT