ರಾಜ್ಯ

ಬೆನ್ನಿಗಾನಹಳ್ಳಿ ಕೆರೆ: ಕಯಾಕಿಂಗ್-ಕ್ಯಾನೋಯಿಂಗ್ ಕುರಿತು ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಸಿದ ಟ್ರಸ್ಟ್

Manjula VN

ಬೆಂಗಳೂರು: ಮಕ್ಕಳನ್ನು ವಿಶೇಷವಾಗಿ ಹಿಂದುಳಿದ ಹೆಣ್ಣುಮಕ್ಕಳಿಗೆ ಬೆನ್ನಿಗಾನಹಳ್ಳಿ ಕೆರೆಯಲ್ಲಿ ಕಯಾಕಿಂಗ್-ಕ್ಯಾನೋಯಿಂಗ್ ಕುರಿತು ಡೆಮೋ ನೀಡಲಾಯಿತು.

ಕಯಾಕಿಂಗ್ ಮಾಡಲು ಪ್ರೋತ್ಸಾಹಿಸುವ ಸಲುವಾಗಿ ಬೆನ್ನಿಗಾನಹಳ್ಳಿ ಲೇಕ್ ಟ್ರಸ್ಟ್ ಮತ್ತು ಕರ್ನಾಟಕ ಕಯಾಕಿಂಗ್ ಮತ್ತು ಕೆನೋಯಿಂಗ್ ಅಸೋಸಿಯೇಷನ್ ಬೆನ್ನಿಗಾನಹಳ್ಳಿ ಕೆರೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಡೆಮೋದಲ್ಲಿ 300 ಹೆಚ್ಚು ಜನರು ಮಾಹಿತಿ ಪಡೆದುಕೊಂಡರು.

ಕೆರೆಯ ಮೇಲೆ ಮತ್ತು ಕೆಳಗೆ ಕಯಾಕಿಂಗ್ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲಾಯಿತು. ಬಹಳಷ್ಟು ಜನರು ಸಾಮಾನ್ಯವಾಗಿ ಕ್ರಿಕೆಟ್ ಅಥವಾ ಫುಟ್‌ಬಾಲ್‌ನಂತಹ ಸಾಂಪ್ರದಾಯಿಕ ಕ್ರೀಡೆಗಳ ಬಗ್ಗೆ ಆಸಕ್ತಿ ತೋರುವುದುಂಟು. ಆದರೆ ಈ ರೀತಿಯ ಕ್ರೀಡೆಗಳು ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಪ್ರಯೋಜನಕಾರಿಯಾಗಿದೆ. ಏಕೆಂದರೆ, ಕೆರೆಗಳನ್ನು ಬಡ ಮಕ್ಕಳು ಸುಲಭವಾಗಿ ಬಳಕೆ ಮಾಡಬಹುದಾಗಿದೆ ಎಂದು ಕೆರೆಯ ಕಾರ್ಯಕರ್ತ ಮತ್ತು ಸರೋವರದ ಟ್ರಸ್ಟಿಗಳಲ್ಲಿ ಒಬ್ಬರಾದ ಬಾಲಾಜಿ ರಗೋಥಮ್ ಬಾಲಿ ಅವರು ಹೇಳಿದ್ದಾರೆ.

ಬೆಂಗಳೂರಿನ ಕೆರೆಯಲ್ಲಿ ನಡೆಯುತ್ತಿರುವ ಎರಡನೇ ಡೆಮೊ ಇದಾಗಿದೆ. ಈ ಹಿಂದೆ ಕೆಆರ್ ಪುರಂನ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯಲ್ಲಿ ಮೊದಲ ಡೆಮೋವನ್ನು ನೀಡಲಾಗಿತ್ತು. ಈ ಡೆಮೋದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.

ಬೆನ್ನಿಗಾನಹಳ್ಳಿ ಕೆರೆಯಲ್ಲಿ ನಡೆಸಲಾದ ಕಾರ್ಯಕ್ರಮದ ಬಗ್ಗೆ ಬಹುತೇಕ ಜನರಿಗೆ ಮಾಹಿತಿ ಇರಲಿಲ್ಲ. ಭಾನುವಾರದ್ದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾಹಿತಿ ಇಲ್ಲದ ಕಾರಣ ಹಿಂದುಳಿದ ಹೆಣ್ಣುಮಕ್ಕಳಿಗೆ ಈ ಕ್ರೀಡೆ ಬಗ್ಗೆ ತಿಳುವಳಿಕೆಯ ಕೊರತೆ ಇದೆ. ಮಕ್ಕಳಿಗೆ ಇಂತಹ ಕ್ರೀಡೆಗಳ ಬಗ್ಗೆ ಅರಿವು ಮೂಡಿಸುವ, ತರಬೇತಿ ನೀಡುವ ಕಾರ್ಯಕ್ರಮಗಳಿಗೆ ಹಣವನ್ನು ನೀಡಲು ಹಲವಾರು ಎನ್'ಜಿಒಗಳು ಸಿದ್ಧವಾಗಿವೆ ಎಂದು ತಿಳಿಸಿದ್ದಾರೆ.

SCROLL FOR NEXT