ರಾಜ್ಯ

ಒಳಮೀಸಲಾತಿಗೆ ವಿರೋಧ; ಬಿಜೆಪಿ ಧ್ವಜ ತೆರವು, ಮುಖಂಡರು ತಾಂಡಾಗಳಿಗೆ ಪ್ರವೇಶಿಸದಂತೆ ತಡೆ

Ramyashree GN

ಬೆಳಗಾವಿ: ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಘೋಷಿಸಿರುವುದನ್ನು ವಿರೋಧಿಸಿ ಲಂಬಾಣಿ ಸಮುದಾಯ ನಡೆಸುತ್ತಿರುವ ಪ್ರತಿಭಟನೆಯು ಮಂಗಳವಾರ ಬಾಗಲಕೋಟೆಯಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಬಾಗಲಕೋಟೆ ಭಾಗದ ಹಲವು ಲಂಬಾಣಿ ತಾಂಡಾಗಳಲ್ಲಿ ಸಮುದಾಯದ ಹಲವು ವರ್ಗಗಳ ಯುವ ಮುಖಂಡರು ಬ್ಯಾನರ್‌ಗಳನ್ನು ಕಟ್ಟಿದ್ದು, ಬಿಜೆಪಿ ಮುಖಂಡರ ತಾಂಡಾಗಳ ಪ್ರವೇಶಕ್ಕೆ ತಡೆ ಒಡ್ಡಿದ್ದಾರೆ.

ಬಾಗಲಕೋಟೆ ಸಮೀಪದ ಮುಚ್ಚಂಡಿ ತಾಂಡಾದಲ್ಲಿ ಪ್ರತಿಭಟನಾಕಾರರು ರಾಜ್ಯದ ಬಿಜೆಪಿ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹಲವಾರು ಕಂಬಗಳು ಮತ್ತು ಮನೆಗಳಲ್ಲಿ ಬಿಜೆಪಿ ಧ್ವಜಗಳನ್ನು ತೆರವುಗೊಳಿಸಿದರು.

ಆಚನೂರ, ನೀಲಾನಗರ, ಜಡ್ರಾಮಕುಂಟಿ, ಲವಲೇಶ್ವರ, ಗುಲ್ಬಾಳ್, ಶಿರಗುಪ್ಪಿ, ಅಮೀನಗಡ, ಕಮತಗಿ, ಬಿಳಗಿ ಸೇರಿದಂತೆ ನಾನಾ ತಾಂಡಾಗಳಿಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರವೇಶ ಮಾಡದಂತೆ ತಡೆಯಲು ನಿರ್ಧರಿಸಿ ಬ್ಯಾನರ್‌ ಹಾಕಲಾಗಿದೆ ಮತ್ತು ಬಿಜೆಪಿ ಮುಖಂಡರನ್ನು ತಾಂಡಾ ಪ್ರವೇಶಿಸದಂತೆ ತಡೆಯಲು ಅವುಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಲಂಬಾಣಿ ತಾಂಡಾಗಳ ಹಲವಾರು ಯುವ ಮುಖಂಡರು ತಿಳಿಸಿದರು. 

SCROLL FOR NEXT