ರಾಜ್ಯ

ಪರೀಕ್ಷೆಯ ಭಯದಿಂದ ನದಿಗೆ ಹಾರಿ ಪ್ರಾಣ ಕಳೆದುಕೊಂಡ 10ನೇ ತರಗತಿ ವಿದ್ಯಾರ್ಥಿ

Ramyashree GN

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ.

10ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಶುಕ್ರವಾರದಿಂದ (ಮಾರ್ಚ್ 31) ಪ್ರಾರಂಭವಾಗಲಿವೆ.

ಪ್ರಾಥಮಿಕ ತನಿಖೆಯಲ್ಲಿ, 15 ವರ್ಷದ ಅದ್ವೈತ್ ಶೆಟ್ಟಿ ಪರೀಕ್ಷೆಯ ಒತ್ತಡದಿಂದಾಗಿ ನದಿಗೆ ಹಾರಿದ್ದಾನೆ ಎಂದು ತಿಳಿದುಬಂದಿದೆ. ಕಡಬ ತಾಲೂಕಿನ ಕೋಡಿಂಬಾಳ ಸಮೀಪದ ಗುಂಡಿಮಜಲು ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.

ಪೊಲೀಸರ ಪ್ರಕಾರ, ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿಯು ಬುಧವಾರ ಸಂಜೆ  ನಾಪತ್ತೆಯಾಗಿದ್ದ. ಪೋಷಕರು ಮತ್ತು ಸಂಬಂಧಿಕರು ರಾತ್ರಿಯಿಡೀ ಆತನಿಗಾಗಿ ಹುಡುಕಾಡಿದರು. ಆದರೆ, ಬಾಲಕ ಪತ್ತೆಯಾಗಿರಲಿಲ್ಲ.

ಇಂದು ಬೆಳಗ್ಗೆ ನಾಕೂರು ಗಯಾ ಪ್ರದೇಶದ ಬಳಿ ಕುಮಾರಧಾರಾ ನದಿಯ ದಡದಲ್ಲಿ ವಿದ್ಯಾರ್ಥಿಯ ಶಾಲಾ ಬ್ಯಾಗ್ ಪತ್ತೆಯಾಗಿದೆ.

ನಂತರ, ಅಗ್ನಿಶಾಮಕ ದಳ ಮತ್ತು ತುರ್ತು ಸಿಬ್ಬಂದಿ ನದಿಯಲ್ಲಿ ಆತನ ಶವಕ್ಕಾಗಿ ಹುಡುಕಾಟ ನಡೆಸಿ ಅದನ್ನು ಹೊರತೆಗೆದರು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

SCROLL FOR NEXT