ಬೆಂಗಳೂರು: ಬಿಜೆಪಿ ಸಮಾವೇಶದಲ್ಲಿ ಕೂಲ್‌ಡ್ರಿಂಕ್ಸ್, ನೀರು ಕೊಂಡೊಯ್ದ ಜನ: ವ್ಯಾಪಾರಿಯ ನಷ್ಟ ಭರಿಸಿ ಮಾನವೀಯತೆ ಮೆರೆದ ಪ್ರತಾಪ್ ಸಿಂಹ
ಗದಗ ಜಿಲ್ಲೆಯಲ್ಲಿ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಾವೇಶದ ಬಳಿಕ ಜನರ ಗುಂಪು ವಾಹನವೊಂದರ ಮೇಲೆ ಮುಗಿಬಿದ್ದು, ಅದರಲ್ಲಿದ್ದ ತಂಪು ಪಾನೀಯ ಕುಡಿದು ವ್ಯಾಪಾರಿಗೆ ನಷ್ಟ ಉಂಟು ಮಾಡಿದ್ದರು.
ವ್ಯಾಪಾರಿ ಸಮೀರ್ ಹಸನ್ ಸಾಬ್ ಗೆ ಜನರ ವರ್ತನೆಯಿಂದ ತೀವ್ರ ನಷ್ಟ ಉಂಟಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಫೋಟೋ ಸಹಿತ ವೈರಲ್ ಆಗಿತ್ತು.
ತಕ್ಷಣವೇ ಸ್ಪಂದಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ ವ್ಯಾಪಾರಿ ಸಮೀರ್ ಹಸನ್ ಸಾಬ್ ಅವರಿಗೆ ಸ್ಪಂದಿಸಿ, ನಷ್ಟ ಭರಿಸುವ ಮೂಲಕ ಮಾನವಿಯತೆ ಮೆರೆದಿದ್ದಾರೆ.
ವ್ಯಾಪಾರಿಗೆ ನಷ್ಟ ಉಂಟಾಗಿದ್ದ 35,000 ರೂಪಾಯಿಗಳನ್ನು ಸಂದಾಯ ಮಾಡಿರುವ ಸಂಸದ ಪ್ರತಾಪ್ ಸಿಂಹ, Sorry Brother ಎಂದು ಟ್ವೀಟ್ ಮಾಡಿದ್ದಾರೆ ಸಂಸದರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಲಕ್ಷ್ಮೇಶ್ವರದಲ್ಲಿ ಅಮಿತ್ ಶಾ ಸಮಾವೇಶಕ್ಕೆ ಬದಿದ್ದ ಜನರು ಬಿಸಿಲಿನ ಬೇಗೆಗೆ ತುತ್ತಾಗಿದ್ದರು. ಬಾಯಾರಿಕೆಯಿಂದ ಬಳಲುತ್ತಿದ್ದ ಮಂದಿ, ವ್ಯಾಪಾರಿ ಸಮೀರ್ ಹಸನ್ ಸಾವ್ ಎನ್ನುವಾತನ ಕೂಲ್ ಡ್ರಿಂಕ್ಸ್ ವಾಹನ ಕಂಡು ಬಿಜೆಪಿ ಪಕ್ಷದಿಂದ ಕೂಲ್ ಡ್ರಿಂಕ್ಸ್ ವ್ಯವಸ್ಥೆಯಾಗಿದೆ ಎಂದು ಭಾವಿಸಿ ವಾಹನಕ್ಕೆ ಮುಗಿಬಿದ್ದು, ಕೂಲ್ ಡ್ರಿಂಕ್ಸ್, ಜ್ಯೂಸ್, ನೀರಿನ ಬಾಟಲ್ ತಗೆದುಕೊಂಡು ಹೋಗಿದ್ದರು.