ರಾಜ್ಯ

ರಾಜಕೀಯಕ್ಕೆ ಬರುವುದಕ್ಕೂ ಮುನ್ನ ವೃತ್ತಿಯಲ್ಲಿ ಏನಾದರೂ ಸಾಧಿಸಿ: ಅಣ್ಣಾಮಲೈ

Manjula VN

ಬೆಂಗಳೂರು: ಚುನಾವಣಾ ರಾಜಕೀಯ ಸುಲಭವಲ್ಲ. ಪಕ್ಷಕ್ಕೆ ಸೇರ್ಪಡೆಗೊಳ್ಳುವುದು, ಮೆಟ್ಟಿಲು ಏರುವುದು ಮತ್ತು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆಯುವುದು ಸುಲಭವಲ್ಲ ಮಾತಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಬುಧವಾರ ಹೇಳಿದ್ದಾರೆ.

ಥಿಂಕರ್ಸ್ ಫೋರಂ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿರುವ ಅವರು, ನಮ್ಮ ಪಕ್ಷದಿಂದ ಎಂಎಲ್‌ಎ ಟಿಕೆಟ್‌ಗಾಗಿ 40ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದರು. ಆದರೆ, ನೀವು ನಿಮ್ಮ ವೃತ್ತಿ ಜೀವನದಲ್ಲಿ ಅರ್ಥಪೂರ್ಣವಾದುದನ್ನು ಸಾಧಿಸುತ್ತಿದ್ದರೆ. ನಿಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದರೆ, ನೀವು ರಾಜಕೀಯಕ್ಕೆ ಬಂದ ಮೇಲೆ ನಿಮ್ಮ ಪ್ರಯಾಣ ಸುಲಭವಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯ ಪ್ರವೇಶಕ್ಕೆ ಆರ್ಥಿಕ ಸ್ಥಿರತೆ ಮುಖ್ಯ. ರಾಜಕೀಯಕ್ಕೆ ಬರುವ ಇಚ್ಛೆ ಇರುವವರು ಕುಟುಂಬವನ್ನು ನೋಡಿಕೊಳ್ಳಲು ಪಕ್ಷದ ಮೇಲೆ ಅವಲಂಬಿತವಾಗಿರಬಾರದು ಎಂದು ಸಲಹೆ ನೀಡಿದರು.

ಯಾವುದೇ ರಾಜಕೀಯ ಪಕ್ಷವನ್ನು ಹೆಸರಿಸದೆ, ಯುವಜನರು ಪ್ರಗತಿಪರ, ಪರಿವರ್ತನಾಶೀಲ ಮತ್ತು ಯಾವಾಗಲೂ ಭವಿಷ್ಯದತ್ತ ಮತ ಚಲಾಯಿಸಬೇಕು. ರಾಜಕೀಯ ಪಕ್ಷಗಳ ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯವನ್ನು ಮೀಸಲಿಡಬೇಕು ಎಂದು ಮನವಿ ಮಾಡಿದರು.

ಅಧಿಕಾರಶಾಹಿ ಅಥವಾ ರಾಜಕಾರಣಿಯಾಗಿರುವುದರಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾಗರೀಕ ಸೇವಕರಾಗಲೂ ಬಯಸಿದ್ದೇ ಆದರೆ, ಅದನ್ನೇ ಆಯ್ಕೆ ಮಾಡಿಕೊಳ್ಳಿ. ಆ ಪ್ರಯಾಣದಲ್ಲಿ ನಿಮ್ಮ ಬದಲಾಗುತ್ತದೆ. ಅದಕ್ಕಾಗಿಯೇ ನಾಗರೀಕ ಸೇವೆಗಳು ನಿಮ್ಮ ಪ್ರಯಾಣದಲ್ಲಿ ಬಹು ಆಯ್ಕೆಗಳನ್ನು ನೀಡುತ್ತದೆ. ನೀವು ಇಲಾಖೆಯನ್ನು ಬದಲಾಯಿಸಬಹುದು. ಇಲಾಖೆಯನ್ನು ಬದಲಾಯಿಸಬಹುದು. ಕೇಂದ್ರದಲ್ಲಿ ನಿಯೋಜನೆಗೊಳ್ಳಬಹುದು. ವಿದೇಶಕ್ಕೆ ಹೋಗಿ ಮತ್ತೊಂದು ಪದವಿಯನ್ನೂ ಪಡೆಯಬಹುದು. ಅಗತ್ಯ ಎನಿಸಿದರೆ, ವಿರಾಮ ಪಡೆದುಕೊಳ್ಳಬಹುದು. ಎನ್‌ಜಿಒಗೆ ಸೇರಬಹುದು ಮತ್ತು ಹಿಂತಿರುಗಬಹುದು. ನಾನು ಆ ಪ್ರಯಾಣದಲ್ಲಿದ್ದ ಸಂದರ್ಭದಲ್ಲಿ ವಿರಾಮ ತೆಗೆದುಕೊಂಡಿದ್ದೆ. ಎನ್‌ಜಿಒ ಸ್ಥಾಪಿಸಿದೆ ಮತ್ತು ನಂತರ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದೆ ಎಂದು ತಿಳಿಸಿದ್ದಾರೆ.

SCROLL FOR NEXT