ರಾಜ್ಯ

ದೇವಾಲಯಗಳಲ್ಲಿ ಹನುಮಾನ್‌ ಚಾಲೀಸಾ ಪಠಣಕ್ಕೆ ನಿರ್ಧಾರ‌: ಕಾಂಗ್ರೆಸ್ ನಿಷೇಧ ಪ್ರಸ್ತಾಪಕ್ಕೆ ಬಜರಂಗದಳ ತಿರುಗೇಟು!

Manjula VN

ಬೆಂಗಳೂರು: ಸಂಘಟನೆ ನಿಷೇಧಿಸುವ ಕಾಂಗ್ರೆಸ್ ಪ್ರಸ್ತಾಪಕ್ಕೆ ತಿರುಗೇಟು ನೀಡಿರುವ ಬಜರಂಗದಳದ ಕಾರ್ಯಕರ್ತರು, ಶುಕ್ರವಾರ ರಾಜ್ಯದ ಎಲ್ಲಾ ಹನುಮಾನ್ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಣಕ್ಕೆ ಕರೆ ನೀಡಿದ್ದಾರೆ.

ಶುಕ್ರವಾರ ರಾತ್ರಿ 7 ಗಂಟೆಗೆ ರಾಜ್ಯದ ಎಲ್ಲಾ ಹನುಮಾನ್ ಮಂದಿರ ಹಾಗೂ ಇತರ ದೇವಸ್ಥಾನಗಳಲ್ಲಿ ಭಜರಂಗ ದಳ ಕಾರ್ಯಕರ್ತರಿಗೆ ಹನುಮಾನ್ ಚಾಲೀಸಾ ಪಠಣ ಮಾಡುವಂತೆ ಸೂಚನೆ ನೀಡಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಸಂಘಟನೆ ಪ್ರಕಟಿಸುತ್ತಿದೆ. ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸಿರುವ ಕಾಂಗ್ರೆಸ್ ಪ್ರಣಾಳಿಕೆಯನ್ನು ಸಂಘಟನೆ ಖಂಡಿಸಿದೆ.

ಬಜರಂಗದಳದ ಅಖಿಲ ಭಾರತ ಸಹ ಸಂಚಾಲಕ ಸೂರ್ಯನಾರಾಯಣ ಅವರು ಬಿಡುಗಡೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಖಂಡಿಸುವುದಾಗಿ ಹೇಳಿದ್ದಾರೆ.

ಬಜರಂಗದಳದ ಸದಸ್ಯರು ಮತ್ತು ಸಂಘಟನೆ ಏನು ಮಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಅರ್ಹತೆಯೇ ಇಲ್ಲ. ಬಜರಂಗದಳವನ್ನು ಪಿಎಫ್‌ಐಗೆ ಹೋಲಿಸಿದ ಕಾಂಗ್ರೆಸ್ ಪ್ರಣಾಳಿಕೆಯನ್ನು ನಾವು ವಿರೋಧಿಸುತ್ತೇವೆ. ನಾವು ಯಾವುದೇ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ. ನಾವು ಯುವಕರನ್ನು ಒಗ್ಗೂಡಿಸುತ್ತಿದ್ದೇವೆ. ಯುವಕರು ದಾರಿತಪ್ಪಿಸುವುದನ್ನು ತಡೆಯುತ್ತಿದ್ದೇವೆ. ಅವರಿಗೆ ಸಂಸ್ಕೃತಿಯನ್ನು ಕಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಪಿಎಫ್‌ಐ ಏನು ಮಾಡಿದೆ ಎಂದು ಜನರಿಗೆ ತಿಳಿದಿದೆ. ಕರ್ನಾಟಕದಲ್ಲಿ ಪಿಎಫ್‌ಐ ಅನೇಕ ಹಿಂದೂ ಮುಖಂಡರನ್ನು ಹತ್ಯೆ ಮಾಡಿದೆ. "ಕಾಂಗ್ರೆಸ್ ಅಂತಹ ಸಂಘಟನೆಯನ್ನು ಬೆಂಬಲಿಸುತ್ತಿದೆ. ಹೀಗಾಗಿ ಅವರಿಗೆ ಅಧಿಕಾರಕ್ಕೆ ಬರಲು ಯಾವುದೇ ಹಕ್ಕಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅವಕಾಶ ನೀಡುವುದಿಲ್ಲ. ಮುಸ್ಲಿಂ ಮತದಾರರನ್ನು ಓಲೈಸಲು ಮತ್ತು ಅವರನ್ನು ಸಮಾಧಾನಪಡಿಸಲು ಕಾಂಗ್ರೆಸ್ ಬಜರಂಗದಳವನ್ನು ರಾಷ್ಟ್ರವಿರೋಧಿ ಸಂಘಟನೆಗೆ ಹೋಲಿಸುತ್ತಿದೆ. ಅಲ್ಲಿನ ನಾಯಕರು ಕೊಳಕು ರಾಜಕಾರಣ ಮಾಡುತ್ತಿದ್ದಾರೆ. ಹಿಂದೂಗಳು ಮತ್ತು ನಮ್ಮ ಸಂಘಟನೆ ಅವರ ಕೃತ್ಯವನ್ನು ಖಂಡಿಸುತ್ತಿವೆ. ಇದನ್ನು ನಾವು ಸವಾಲಾಗಿ ಸ್ವೀಕರಿಸುತ್ತೇವೆ ಎಂದು ತಿಳಿಸಿದರು.

SCROLL FOR NEXT