ರಾಜ್ಯ

ಕಾಂಗ್ರೆಸ್ ಪಕ್ಷ  ನಿಷೇಧಿತ ಪಿಎಫ್ಐ ಅಜೆಂಡಾದ ಪ್ರಕಾರ ಕೆಲಸ ಮಾಡುತ್ತಿದೆ: ಗೃಹ ಸಚಿವ ಅಮಿತ್ ಶಾ

Srinivas Rao BV

ನವದೆಹಲಿ: ಕಾಂಗ್ರೆಸ್ ಪಕ್ಷ ನಿಷೇಧಿತ ಸಂಘಟನೆ ಪಿಎಫ್ಐ ನ ಅಜೆಂಡಾದ ಪ್ರಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗಂಭೀರ ಆರೋಪ ಮಾಡಿದ್ದಾರೆ. 

ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆ ಹಿನ್ನೆಲೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ,  ಕಾಂಗ್ರೆಸ್ ಪಕ್ಷ ತುಷ್ಟೀಕರಣ ರಾಜಕಾರಣವನ್ನು ಮಾಡುತ್ತಿದ್ದು ಭಗವಾನ್ ಹನುಮಂತನನ್ನು ಅವಮಾನ ಮಾಡಿದೆ ಇದಷ್ಟೇ ಅಲ್ಲದೇ ಸ್ವಾತಂತ್ರ್ಯ ಸೇನಾನಿ ಹಾಗೂ ಹಿಂದುತ್ವದ ನಾಯಕ ವಿ.ಡಿ ಸಾವರ್ಕರ್ ಅವರನ್ನು ಅವಮಾನ ಮಾಡಿದೆ, ಇಂತಹ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಡಿ ಎಂದು ಅಮಿತ್ ಶಾ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.
 
ಕಾಂಗ್ರೆಸ್ ಕೇವಲ ಮತಕ್ಕಾಗಿ ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿದೆ. ಮೊದಲು ಅವರು ಸಂವಿಧಾನಕ್ಕೆ ವಿರುದ್ಧ ಎಂಬುದು ತಿಳಿದಿದ್ದರೂ ಶೇ.4 ರಷ್ಟು ಮುಸ್ಲಿಮ್ ಮೀಸಲಾತಿ ಘೋಷಿಸಿತು, ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದಕ್ಕೆ ಬರುವುದಿಲ್ಲ ಎಂಬ ಅಂಶ ತಿಳಿದಿದ್ದರೂ ಸಹ ಕಾಂಗ್ರೆಸ್ ಈ ಕೃತ್ಯ ಎಸಗಿತ್ತು. ಆದರೆ ಬಿಜೆಪಿ ಸಂವಿಧಾನಕ್ಕೆ ವಿರುದ್ಧವಾಗಿರುವ ಮೀಸಲಾತಿಯನ್ನು ಬಿಜೆಪಿ ತೆಗೆದುಹಾಕಿ, ಲಿಂಗಾಯತರು, ಒಕ್ಕಲಿಗರ ಕೋಟಾವನ್ನು ಶೇ.2 ರಷ್ಟು ಹೆಚ್ಚಿಸಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

SCROLL FOR NEXT