ರಾಜ್ಯ

ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಕುಟುಂಬಸ್ಥರು: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

Manjula VN

ಗೋಣಿಕೊಪ್ಪ: ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಕುಟುಂಬಸ್ಥರು ಎಂದು ಅಸ್ಸಾಂ ರಾಜ್ಯದ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ಹೇಳಿದ್ದಾರೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಬಿಜೆಪಿ ಪರ ಪ್ರಚಾರದ ವೇಳೆ ಮಾತನಾಡಿರುವ ಹಿಮಂತ ಬಿಸ್ವಾ ಶರ್ಮಾ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಟಿಪ್ಪು ಸುಲ್ತಾನನ ವಂಶಸ್ಥರು, ಅವರು ಟಿಪ್ಪು ಸುಲ್ತಾನನ ಕುಟುಂಬದವರು", ನಾನು ಅಸ್ಸಾಂನಿಂದ ಬಂದಿದ್ದೇನೆ, ಅಸ್ಸಾಂನಲ್ಲಿ ಮೊಘಲರು ದಾಳಿ ಮಾಡಿದ್ದರು. 17 ಬಾರಿ ದಾಳಿ ಮಾಡಿದರೂ ನಮ್ಮನ್ನು ಸೋಲಿಸಲು ಅವರಿಂದ ಸಾಧ್ಯವಾಗಲಿಲ್ಲ. ಟಿಪ್ಪುಸುಲ್ತಾನ್ ಹಲವು ಬಾರಿ ಸೋಲಿಸಿದ ಪ್ರದೇಶಕ್ಕೆ ನಾನಿಂದು ಬಂದಿದ್ದೇನೆ. ಈ ಭೂಮಿಗೆ ನಾನು ನಮಸ್ಕರಿಸುತ್ತೇನೆಂದು ಹೇಳಿದ್ದಾರೆ.

ಬಳಿಕ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಬೇಕು ಎಂದು ಸಿದ್ದರಾಮಯ್ಯ ಹೇಳುತ್ತಾರೆ, ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಬೇಕಾದರೆ ಪಾಕಿಸ್ತಾನದಲ್ಲಿ ಆಚರಿಸಿ, ಬಾಂಗ್ಲಾದೇಶದಲ್ಲಿ ಆಚರಿಸಿ. ಭಾರತದಲ್ಲಿ ಆಚರಿಸಲು ನಿಮಗೆ ಯಾವುದೇ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ.

2012ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಅಂದು ಜಗದೀಶ್ ಶೆಟ್ಟರ್ ರಾಜ್ಯದ ಸಿಎಂ ಆಗಿದ್ದರು. ಆಗ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ಟಿಪ್ಪು ಸುಲ್ತಾನ್ - ಎ ಕ್ರುಸೇಡರ್ ಫಾರ್ ಚೇಂಜ್’ ಎಂಬ ಪುಸ್ತಕವನ್ನು ಪ್ರಕಟಿಸಿತ್ತು. ಈ ಪುಸ್ತಕವು ಟಿಪ್ಪು ಸುಲ್ತಾನನ ಸಾಧನೆಗಳು ಮತ್ತು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧದ ಹೋರಾಟದ ಬಗ್ಗೆ ತಿಳಿಸಿತ್ತು. ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೂಡ ಪುಸ್ತಕ ಬರೆದ ಲೇಖಕರಿಗೆ ಹಾಗೂ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.

ಇದೇ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ಆದರೆ, ಕರ್ನಾಟಕ ಪಿಎಫ್‌ಐ ಕಣಿವೆ ರಾಜ್ಯವಾಗಲಿದೆ ಎಂದು ವಾಗ್ದಾಳಿ ನಡೆಸಿದರು.

SCROLL FOR NEXT