ರಾಜ್ಯ

ಬೆಂಗಳೂರಿನಲ್ಲಿ ಮೋದಿ ರೋಡ್ ಶೋ: ಮರಗಳ ತೆರವುಗೊಳಿಸಿದ ಬಿಬಿಎಂಪಿ, ಆಕ್ರೋಶ

Manjula VN

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರೋಡ್‌ ಶೋ ತೆರಳುವ ರಸ್ತೆಗಳಲ್ಲಿ ಇದ್ದ ಮರಗಳ ಕೊಂಬೆಗಳನ್ನು ಬಿಬಿಎಂಪಿ ಕತ್ತರಿಸಿದ್ದು, ಅಧಿಕಾರಿಗಳ ಈ ಕ್ರಮದ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಬಸವನಗುಡಿ, ಜಯನಗರ, ಬಸವೇಶ್ವರ ನಗರ ಮತ್ತು ಇಂದಿರಾ ನಗರ ಸೇರಿದಂತೆ ಹಲವು ರಸ್ತೆಗಳಲ್ಲಿ ಇದ್ದ ಮರಗಳ ಕೊಂಬೆಗಳನ್ನು ಬಿಬಿಎಂಪಿ ಕತ್ತರಿಸಿದೆ ಎಂದು ತಿಳಿದುಬಂದಿದೆ.

ಪಾಲಿಕೆ ಅಧಿಕಾರಿಗಳು ಶುಕ್ರವಾರ ಕೃಷ್ಣರಾವ್ ಪಾರ್ಕ್ ಬಳಿಯಿದ್ದ ಮರಗಳ ಕೊಂಬೆಗಳನ್ನು ಕತ್ತರಿಸಿದ್ದು, ಕನಿಷ್ಠ ಎರಡು ಟ್ರಕ್ ಲೋಡ್ ಕೊಂಬೆಗಳನ್ನು ಕತ್ತರಿಸಿದೆ ಎಂದು ಸ್ತಳೀಯ ನಿವಾಸಿ ಸಲ್ಮಾನ್ ಎಂಬುವವರು ಹೇಳಿದ್ದಾರೆ.

ಮರಗಳ ಕೊಂಬೆಗಳ ಕಡಿತಗೊಳಿಸಲು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆ, 1976 ರ ಅಡಿಯಲ್ಲಿ ಟ್ರೀ ಆಫೀಸರ್ ಅನುಮತಿ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ರಾಜಕಾರಣಿಯೊಬ್ಬರು ರ್ಯಾಲಿ ನಡೆಸುತ್ತಾರೆಂಬ ಮಾತ್ರಕ್ಕೆ ನಗರದ ಹಸಿರನ್ನು ಹಾಳು ಮಾಡುವುದು ಸರಿಯಲ್ಲ ಎಂದು ವಿನಯ್ ಶ್ರೀನಿವಾಸ್ ಎಂಬುವವರು ಹೇಳಿದ್ದಾರೆ.

ಈ ನಡುವೆ ಆರೋಪಗಳನ್ನು ಬಿಬಿಎಂಪಿ ದಕ್ಷಿಣದ ಜಂಟಿ ಆಯುಕ್ತ ಜಗದೀಶ್ ನಾಯ್ಕ್ ಅವರು ತಿರಸ್ಕರಿಸಿದ್ದಾರೆ. ವಾಹನ ಚಾಲಕರು ಮತ್ತು ಸಾರ್ವಜನಿಕ ಉಪಯುಕ್ತತೆಗಳಿಗೆ ಅಪಾಯವನ್ನುಂಟು ಮಾಡುವ ಮರಗಳ ಕೊಂಬೆಗಳನ್ನು ಬಿಬಿಎಂಪಿ ಕತ್ತರಿಸುತ್ತಲೇ ಇರುತ್ತದೆ. ಮಳೆಗಾಲ ಆರಂಭವಾದಾಗ ಈ ರೀತಿಯ ಕಾರ್ಯವನ್ನು ಬಿಬಿಎಂಪಿ ಕೈಗೆತ್ತಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

SCROLL FOR NEXT