ರಾಜ್ಯ

ಬಜರಂಗದಳ ಬ್ಯಾನ್ ವಿವಾದ ಬೆನ್ನಲ್ಲೇ ಹನುಮನ ದೇವಾಲಯಕ್ಕೆ ಡಿಕೆಶಿ ಭೇಟಿ, ವಿಶೇಷ ಪೂಜೆ ಸಲ್ಲಿಕೆ

Manjula VN

ಬೆಂಗಳೂರು: ಬಜರಂಗದಳ ನಿಷೇಧ ಮಾಡುವ ಭರವಸೆ ವಿಚಾರ ತಾರಕಕ್ಕೇರಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಹಲವು ಹಿಂದೂಪರ ಸಂಘಟನೆಗಳು ಹನುಮಾನ್ ಚಾಲೀಸಾ ಪಠನೆ ಮಾಡುವ ಮೂಲಕ ತಿರುಗೇಟು ನೀಡುತ್ತಿವೆ.

ವಿವಾದ ತಾರಕ್ಕೇರುವ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಇಂದು ಹನುಮನ ದೇವಾಲಯಕ್ಕೆ ಭೇಟಿ ನೀಡಿದ್ದು, ಬಜರಂಗಬಲಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕೆ.ಆರ್.ಮಾರುಕಟ್ಟೆಯಲ್ಲಿರುವ ಆಂಜನೇಯ ದೇವಾಸ್ಥಾನಕ್ಕೆ ಭೇಟಿ ನೀಡಿರುವ ಡಿಕೆ.ಶಿವಕುಮಾರ್ ಅವರು, ಪೂಜೆ ಸಲ್ಲಿಸಿದರು.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿತ್ತು. ಕಾಂಗ್ರೆಸ್ ಪಕ್ಷ ಈ ಭರವಸೆ ಬಿಜೆಪಿ ನಾಯಕರ ಹಾಗೂ ಹಿಂದು ಸಂಘಟನೆಗಳ ಕಣ್ಣು ಕೆಂಪಗಾಗುವಂತೆ ಮಾಡಿದೆ.

ಹೀಗಾಗಿ ಕಾಂಗ್ರೆಸ್ ವಿರುದ್ಧ ರಾಜ್ಯದಾದ್ಯಂತ ಹನುಮಾನ್ ಚಾಲೀಸಾ ಪಠಣಕ್ಕೆ ಹಿಂದೂಪರ ಸಂಘಟನೆಗಳು ಕರೆ ನೀಡಲಾಗಿದ್ದು, ಅದರಂತೆ ಕಳೆದ ಗುರುವಾರ(ಮೇ 04)ದಿಂದ ರಾಜ್ಯದ ವಿವಿಧ ದೇವಾಲಯಗಲ್ಲಿ ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಿಸಲಾಗುತ್ತಿದೆ.

SCROLL FOR NEXT