ಸಾಂದರ್ಭಿಕ ಚಿತ್ರ 
ರಾಜ್ಯ

ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಯ್ತು 'ಬೈಬೈ ಬಿಜೆಪಿ': ಸೋಷಿಯಲ್ ಮೀಡಿಯಾದಲ್ಲಿ ಪಕ್ಷಗಳ ಪ್ರಚಾರ; ದೂರು ದಾಖಲಿಸಿದ ಆಯೋಗ

ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆ ಬಿದ್ದಿದೆ, ಮಂಗಳವಾರ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚಿಸಿದರು.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆ ಬಿದ್ದಿದೆ, ಮಂಗಳವಾರ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚಿಸಿದರು. ಇದೇ ವೇಳೆ  ರಾಜಕೀಯ ಪಕ್ಷಗಳ ಪ್ರಚಾರವು ರ್ಯಾಲಿಗಳು ಮತ್ತು ರೋಡ್‌ಶೋಗಳಿಂದ ಸಾಮಾಜಿಕ ಮಾಧ್ಯಮಕ್ಕೆ ಶಿಫ್ಟ್ ಆಗಿವೆ.

ಪಕ್ಷಗಳ ಗಡಿ ದಾಟಿ, ಹಲವಾರು ರಾಜಕೀಯ  ಮುಖಂಡರು ಮತ್ತು ಕಾರ್ಯಕರ್ತರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ಪಕ್ಷದ ಭರವಸೆಗಳ ಕುರಿತು ಪೋಸ್ಟ್‌ಗಳನ್ನು ಹಂಚಿಕೊಂಡರು, ಅವರಿಗೆ ಮತ ಚಲಾಯಿಸುವಂತೆ ನಾಗರಿಕರನ್ನು ಮನವೊಲಿಸಿದರು.

ಈ ಪಟ್ಟಿಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಆಮ್ ಆದ್ಮಿ ಪಕ್ಷ ಮತ್ತು ಸ್ವತಂತ್ರ ಅಭ್ಯರ್ಥಿಗಳು ಸೇರಿದ್ದರು. #5 ಗ್ಯಾರಂಟಿ ಪ್ರತಿಜ್ಞೆ ಬಳಸಿಕೊಂಡು ಕಾಂಗ್ರೆಸ್ ನಾಯಕರು ಅನೇಕ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಿದ್ದಾರೆ,  ಇದರ ಜೊತೆಗೆ #ByeByeBJP Twitter ನಲ್ಲಿ ಟ್ರೆಂಡಿಂಗ್ ಆಗಿತ್ತು.

ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿರುವ ಎಲ್ಲ ರಾಜಕೀಯ ಪಕ್ಷಗಳ ವಿರುದ್ಧ ಚುನಾವಣಾ ಆಯೋಗ 63 ದೂರುಗಳನ್ನು ದಾಖಲಿಸಿಕೊಂಡಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾ ಕಚೇರಿಯ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ (ಎಂಸಿಎಂಸಿ) ನೋಡಲ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಹೇಳಿದ್ದಾರೆ. ತೊಂಬತ್ತರಷ್ಟು ದೂರುಗಳು ಸ್ವಯಂ ಪ್ರೇರಿತವಾಗಿದ್ದು, ಎಂಸಿಎಂಸಿ ತಂಡವು ಸರಿಯಾದ ಜಾಗರೂಕತೆಯ ನಂತರ ಮಾಡಲಾಗಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಚುನಾವಣೆಗೆ ಮುಂಚಿನ 48 ಗಂಟೆಗಳ ಅವಧಿಯಲ್ಲಿ, ಮತದಾರ ಚಿಂತಿಸಲು ಅನುವು ಮಾಡಿಕೊಟ್ಟಿದೆ.  ಚುನಾವಣೆಗೆ ಮುಂಚಿತವಾಗಿ ಪಕ್ಷದ ಭರವಸೆಗಳು, ಪ್ರಣಾಳಿಕೆಗಳು ಮತ್ತು ಚುನಾವಣಾ-ಸಂಬಂಧಿತ ಪ್ರತಿಜ್ಞೆಗಳಿಲ್ಲದೆ ಯೋಚಿಸಿ ಮತದಾರ ತನ್ನ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ.. ಇದರಿಂದ ನಾಗರಿಕರು ಪಕ್ಷಪಾತವಿಲ್ಲದ ನಿರ್ಧಾರವನ್ನು ತೆಗೆದುಕೊಳ್ಳಲು  ಸಾಧ್ಯವಾಗುತ್ತದೆ. ಜೊತೆಗೆ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರ ಮರ್ಜಿಗೆ ಒಳಗಾಗುವುದಿಲ್ಲ ಎಂದು ಚುನಾವಣಾ ಆಯೋಗದ (EC) ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುತ್ತಿರುವ ಯುಗದಲ್ಲಿ ಅದನ್ನು ನಿಯಂತ್ರಿಸುವುದು ಅಧಿಕಾರಿಗಳಿಗೆ ಕಷ್ಟಕರವಾಗಿದೆ. ರಾಜಕೀಯ ಪಕ್ಷದ ಮುಖಂಡರು ಮನೆ ಮನೆಗೆ ತೆರಳಿ ಪ್ರಚಾರ ನಡೆಸುವ ರೀತಿಯಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಸಂದೇಶ ಒಂದೇ, ಸಂವಹನ ಮಾಧ್ಯಮ ಮಾತ್ರ ಬದಲಾಗಿದೆ ಎಂದು  ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ (ಎಪಿಯು) ಸ್ಕೂಲ್ ಆಫ್ ಪಾಲಿಸಿ ಅಂಡ್ ಗವರ್ನೆನ್ಸ್‌ನ ನಾರಾಯಣ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪರಸ್ಪರ ನಂಬಿಕೆ, ಗೌರವದ ಆಧಾರದ ಮೇಲೆ ಸಂಬಂಧ ಮುಂದುವರಿಸಲು ಬದ್ಧ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪ್ರಧಾನಿ ಮೋದಿ

SCO ಶೃಂಗಸಭೆ: ಮೋದಿ ಭೇಟಿ ಹಿನ್ನೆಲೆ, ಅಮೆರಿಕದ ಸುಂಕಾಸ್ತ್ರ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಕಿಡಿ! ಹೇಳಿದ್ದು ಏನು?

Pepsi To McDonald: ಸುಂಕ ಸಂಘರ್ಷದ ನಡುವೆ ಅಮೆರಿಕದ ದೈತ್ಯ ಕಂಪನಿಗಳಿಗೆ ಭಾರತದಲ್ಲಿ #Boycott ಬಿಸಿ!

SCO ಶೃಂಗಸಭೆ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು; ರಷ್ಯಾಕ್ಕೆ ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ!

US President: ಅನಾರೋಗ್ಯದ ವದಂತಿ, ಕೆಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸದ ಡೊನಾಲ್ಡ್ ಟ್ರಂಪ್!

SCROLL FOR NEXT