ರಾಜ್ಯ

ಹುಟ್ಟೂರಿನ ಅಭಿವೃದ್ಧಿ; ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣರನ್ನು ಶ್ಲಾಘಿಸಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ

Ramyashree GN

ಹಾಸನ: ಕರ್ನಾಟಕ ವಿಧಾನಸಭೆಗೆ ಮತದಾನದ ವೇಳೆ ಜೆಡಿಎಸ್ ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಬುಧವಾರ ತಮ್ಮ ಹುಟ್ಟೂರು ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಮತ ಚಲಾಯಿಸಿದರು.

ತಮ್ಮ ಹುಟ್ಟೂರಿನಲ್ಲಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದ ಮಾಜಿ ಪ್ರಧಾನಿ, ಹಾಸನದ ಸ್ಥಳೀಯ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಇದರ ಶ್ರೇಯಸ್ಸು ನೀಡಿದ್ದಾರೆ.

'ಚಿಕ್ಕ ಗ್ರಾಮವಾಗಿದ್ದರೂ ಗಮನ ಸೆಳೆದು ಸರ್ವತೋಮುಖ ಅಭಿವೃದ್ಧಿ ಕಂಡಿದೆ. ಇಲ್ಲಿ ಮಾಡಿದ ಎಲ್ಲಾ ಕೆಲಸಗಳ ಶ್ರೇಯ ಈ ಕ್ಷೇತ್ರವನ್ನು ಪ್ರತಿನಿಧಿಸುವ (ವಿಧಾನಸಭೆಯಲ್ಲಿ) ಎಚ್‌ಡಿ ರೇವಣ್ಣ ಅವರಿಗೆ ಸಲ್ಲಬೇಕು' ಎಂದು ಎಚ್‌ಡಿ ದೇವೇಗೌಡ ಬುಧವಾರ ಎಎನ್‌ಐಗೆ ತಿಳಿಸಿದರು.

ಇದಕ್ಕೂ ಮುನ್ನ ಏಪ್ರಿಲ್ 27 ರಂದು ದೇವೇಗೌಡರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲ್ಲುವ ವಿಶ್ವಾಸವಿದೆ. 'ಕಾದು ನೋಡಿ' ಎಂದು ಹೇಳಿದ್ದರು. 

ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಈ ವರ್ಷ ಚುನಾವಣಾ ರಾಜಕೀಯಕ್ಕೆ ಕಾಲಿಡುತ್ತಿದ್ದು, ರಾಮನಗರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.

SCROLL FOR NEXT