ರಾಜ್ಯ

ಸ್ಥಳೀಯರ ವಿರೋಧ: ಹಂಪಿಯಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣ ಸ್ಥಗಿತಗೊಳಿಸಿದ ಎಎಸ್‌ಐ

Manjula VN

ಹೊಸಪೇಟೆ: ಹಂಪಿಯ ಬಡವಿಲಿಂಗ ದೇವಸ್ಥಾನದ ಸುತ್ತ 10 ದಿನಗಳ ಹಿಂದೆ ಕೈಗೆತ್ತಿಕೊಂಡಿದ್ದ ಕಾಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಗೆ ಎಎಸ್ಐ ತಡೆ ನೀಡಿದೆ.

ದೇಗುಲದ ಸುತ್ತ ಕಾಂಪೌಂಡ್ ಗೋಡೆ ನರಿಮಾಣಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮುಂದಾಗಿತ್ತು. ಇಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಿರ್ಮಾಣ ಕಾಮಗಾರಿಯನ್ನು ಅಧಿಕಾರಿಗಳು ನಿಲ್ಲಿಸಿದ್ದಾರೆಂದು ತಿಳಿದುಬಂದಿದೆ.

ಕಾಮಗಾರಿ ಆರಂಭವಾಗುತ್ತಿದ್ದಂತೆಯೇ ಇದನ್ನು ಗಮನಿಸಿದ ಸ್ಥಳೀಯರು ಪ್ರತಿಭಟನೆ ನಡೆಸಿದರು. ಕಾಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಯು ಅವೈಜ್ಞಾನಿಕವಾಗಿದ್ದು, ಇದು ಹಂಪಿಯಲ್ಲಿರುವ ಸ್ಮಾರಕಗಳ ನೈಸರ್ಗಿಕ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಇದರಂದೆ ಎಎಸ್ಐ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ.

ಈ ನಡುವೆ ಇತ್ತೀಚೆಗೆ, ಹಂಪಿಯಲ್ಲಿ ಅಕ್ರಮ ನಿರ್ಮಾಣಗಳು, ವಿರೂಪಾಕ್ಷ ದೇವಸ್ಥಾನದ ಬಳಿ ಸಿಲಿಂಡರ್ ಸ್ಫೋಟ ಘಟನೆಗಳ ಬಗ್ಗೆ ವರದಿ ಸಲ್ಲಿಸುವಂತೆ ಯುನೆಸ್ಕೋ ಎಎಸ್ಐ ಅಧಿಕಾರಿಗಳಿಗೆ ಸೂಚಿಸಿದೆ.

ಹಂಪಿ ನಿವಾಸಿ ರಾಘವೇಂದ್ರ ಭಟ್ ಮಾತನಾಡಿ, ಪಾರಂಪರಿಕ ತಾಣಗಳು ಮತ್ತು ಸ್ಮಾರಕಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಯುನೆಸ್ಕೋದ ಮಾರ್ಗಸೂಚಿಗಳನ್ನು ಹಲವು ಬಾರಿ ಉಲ್ಲಂಘಿಸಲಾಗಿದೆ. ಉಗ್ರನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ತೆರೆದ ಮ್ಯೂಸಿಯಂ, ಹೋಟೆಲ್‌ಗಳು, ಹೋಂಸ್ಟೇಗಳಂತಹ ಅವೈಜ್ಞಾನಿಕ ನಿರ್ಮಾಣಗಳನ್ನು ತಡೆಯಲು ಎಎಸ್‌ಐ ಮತ್ತು ಎಚ್‌ಡಬ್ಲ್ಯೂಎಚ್‌ಎಎಂಎ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

SCROLL FOR NEXT