ರಾಜ್ಯ

ಇದುವರೆಗೆ ಕರ್ನಾಟಕವನ್ನಾಳಿದ ಮುಖ್ಯಮಂತ್ರಿಗಳು ಯಾರ್ಯಾರು? ವಿವರ ಇಲ್ಲಿದೆ

Sumana Upadhyaya

ಬೆಂಗಳೂರು: ಕರ್ನಾಟಕದಲ್ಲಿ 1947 ರಿಂದ 2023 ರವರೆಗೆ ಎಷ್ಟು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಅವರ ಅಧಿಕಾರವಧಿ ಎಷ್ಟು, ಯಾವ ಪಕ್ಷದವರು, ಯಾವಾಗ ಮುಖ್ಯಮಂತ್ರಿ ಆಗಿದ್ದರು ಎನ್ನುವ ಮಾಹಿತಿ ಇಲ್ಲಿದೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ 30 ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದು, 6 ಬಾರಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಒಟ್ಟು 18 ಮುಖ್ಯಮಂತ್ರಿಗಳು ಅಧಿಕಾರ ನಡೆಸಿದ್ದಾರೆ.

  • ಕೆ. ಚೆಂಗಲರಾಯ ರೆಡ್ಡಿ- ಕಾಂಗ್ರೆಸ್ ಪಕ್ಷ - ಅಕ್ಟೋಬರ್ 25, 1947 ರಿಂದ ಮಾರ್ಚ್ 30, 1952 ರವರೆಗೆ.
  • ಕೆಂಗಲ್ ಹನುಮಂತಯ್ಯ - ಕಾಂಗ್ರೆಸ್ ಪಕ್ಷ - ಮಾರ್ಚ್ 30, 1952 ಆಗಸ್ಟ್ 19, 1956 ರವರೆಗೆ.
  • ಕಡಿದಾಳ್ ಮಂಜಪ್ಪ - ಕಾಂಗ್ರೆಸ್ ಪಕ್ಷ - ಆಗಸ್ಟ್ 19, 1956 ರಿಂದ ಅಕ್ಟೋಬರ್ 31, 1956 ರವರೆಗೆ.
  • ಎಸ್. ನಿಜಲಿಂಗಪ್ಪ - ಕಾಂಗ್ರೆಸ್ ಪಕ್ಷ - ನವೆಂಬರ್ 1, 1956 ರಿಂದ ಮೇ 16, 1958 ರವರೆಗೆ.
  • ಬಿ.ಡಿ. ಜತ್ತಿ - ಕಾಂಗ್ರೆಸ್ ಪಕ್ಷ - ಮೇ 16, 1958 ರಿಂದ ಮಾರ್ಚ್ 09, 1962 ರವರೆಗೆ.
  • ಎಸ್.ಆರ್. ಕಂಟಿ - ಕಾಂಗ್ರೆಸ್ ಪಕ್ಷ - ಮಾರ್ಚ್ 14, 1962 ರಿಂದ ಜೂನ್ 20, 1962 ರವರೆಗೆ.
  • ಎಸ್. ನಿಜಲಿಂಗಪ್ಪ - ಕಾಂಗ್ರೆಸ್ ಪಕ್ಷ - ಜೂನ್ 21, 1962 ರಿಂದ ಮೇ 28, 1968 ರವರೆಗೆ.
  • ವೀರೆಂದ್ರ ಪಾಟೀಲ್ ಕಾಂಗ್ರೆಸ್ ಪಕ್ಷ - ಮೇ 29, 1968 ರಿಂದ ಮಾರ್ಚ್ 18, 1971 ರವರೆಗೆ.
  • ರಾಷ್ಟ್ರಪತಿ ಆಳ್ವಿಕೆ - ಮಾರ್ಚ್ 19, 1971 ರಿಂದ ಮಾರ್ಚ್ 20, 1972 ರವೆರಗೆ.
  • ಡಿ. ದೇವರಾಜ ಅರಸ್ - ಕಾಂಗ್ರೆಸ್ ಪಕ್ಷ - ಮಾರ್ಚ್ 20, 1972 ರಿಂದ ಡಿಸೆಂಬರ್ 31, 1977 ರವರೆಗೆ.
  • ರಾಷ್ಟ್ರಪತಿ ಆಳ್ವಿಕೆ - ಡಿಸೆಂಬರ್ 31, 1977 ರಿಂದ ಫೆಬ್ರುವರಿ 28, 1978 ರವರೆಗೆ.
  • ಡಿ. ದೇವರಾಜ ಅರಸ್ - ಕಾಂಗ್ರೆಸ್ ಪಕ್ಷ - ಫೆಬ್ರುವರಿ 28, 1978 ರಿಂದ ಜನವರಿ 7, 1980 ರವರೆಗೆ.
  • ಆರ್. ಗುಂಡುರಾವ್ - ಕಾಂಗ್ರೆಸ್ ಪಕ್ಷ - ಜನವರಿ 12, 1980 ರಿಂದ ಜನವರಿ 6, 1983 ರವರೆಗೆ.
  • ರಾಮಕೃಷ್ಣ ಹೆಗ್ಡೆ - ಜನತಾ ಪಕ್ಷ - 1983 ಜನವರಿ 10ರಿಂದ 1985 ಮಾರ್ಚ್ 8, 1985 ಮಾರ್ಚ್ ನಿಂದ 1988 ಆಗಸ್ಟ್ ವರೆಗೆ
  • ಎಸ್‌.ಆರ್. ಬೊಮಾಯಿ - ಜನತಾ ಪಾರ್ಟಿ- ಆಗಸ್ಟ್‌ 13, 1988 - ಏಪ್ರಿಲ್ 21, 1989
  • ರಾಷ್ಟ್ರಪತಿ ಆಳ್ವಿಕೆ - ಏಪ್ರಿಲ್ 21, 1989 ರಿಂದ ನವೆಂಬರ್ 30, 1989 ರವರೆಗೆ.
  • ವೀರೆಂದ್ರ ಪಾಟಿಲ್ - ಕಾಂಗ್ರೆಸ್ ಪಕ್ಷ - ಕಾಂಗ್ರೆಸ್, ನವೆಂಬರ್ 30, 1989 ರಿಂದ ಅಕ್ಟೋಬರ್ 10, 1990 ರವರೆಗೆ.
  • ರಾಷ್ಟ್ರಪತಿ ಆಳ್ವಿಕೆ - ಅಕ್ಟೋಬರ್ 10, 1990 ರಿಂದ ಅಕ್ಟೋಬರ್ 17, 1990 ರವರೆಗೆ.
  • ಎಸ್. ಬಂಗಾರಪ್ಪ - ಕಾಂಗ್ರೆಸ್ ಪಕ್ಷ - ಕಾಂಗ್ರೆಸ್, ಅಕ್ಟೋಬರ್ 17, 1990 ರಿಂದ ನವೆಂಬರ್ 19, 1992 ರವರೆಗೆ.
  • ಎಂ. ವೀರಪ್ಪ ಮೊಯ್ಲಿ - ಕಾಂಗ್ರೆಸ್ ಪಕ್ಷ - ಕಾಂಗ್ರೆಸ್, ನವೆಂಬರ್ 19, 1992 ರಿಂದ ಡಿಸೆಂಬರ್ 11, 1994 ರವರೆಗೆ.
  • ಹೆಚ್.ಡಿ.ದೇವೆಗೌಡ - ಜನತಾದಳ - ಜನತಾ ದಳ, ಡಿಸೆಂಬರ್ 11, 1994 ರಿಂದ ಮೇ 31, 1996 ರವರೆಗೆ.
  • ಜೆ.ಹೆಚ್. ಪಟೇಲ್ - ಜನತಾ ಪಾರ್ಟಿ - ಜನತಾ ಪಾರ್ಟಿ, ಮೇ 31, 1996 ರಿಂದ ಅಕ್ಟೋಬರ್ 07, 1999 ರವರೆಗೆ.
  • ಎಸ್‌.ಎಂ. ಕೃಷ್ಣ - ಕಾಂಗ್ರೆಸ್ ಪಕ್ಷ - ಕಾಂಗ್ರೆಸ್, ಅಕ್ಟೋಬರ್ 11, 1999 ರಿಂದ ಮೇ 28, 2004 ರವರೆಗೆ.
  • ಧರಂಸಿಂಗ್ - ಕಾಂಗ್ರೆಸ್ ಪಕ್ಷ - ಕಾಂಗ್ರೆಸ್, ಮೇ 28, 2004 ರಿಂದ ಫೆಬ್ರುವರಿ 02, 2006 ರವರೆಗೆ.
  • ಹೆಚ್‌.ಡಿ.ಕುಮಾರಸ್ವಾಮಿ - ಜ್ಯಾತ್ಯಾತಿತ ಜನತಾದಳ - ಜೆಡಿಎಸ್‌, ಫೆಬ್ರುವರಿ 03, 2006 ರಿಂದ ಅಕ್ಟೋಬರ್ 08, 2007 ರವರೆಗೆ.
  • ರಾಷ್ಟ್ರಪತಿ ಆಳ್ವಿಕೆ - ಅಕ್ಟೋಬರ್ 08, 2007 ರಿಂದ ನವೆಂಬರ್ 12, 2007 ರವರೆಗೆ.
  • ಬಿ.ಎಸ್.ಯಡಿಯೂರಪ್ಪ - ಭಾರತೀಯ ಜನತಾ ಪಾರ್ಟಿ- ಬಿಜೆಪಿ, ನವೆಂಬರ್ 12, 2007 ರಿಂದ ನವೆಂಬರ್ 19, 2007 ರವರೆಗೆ.
  • ರಾಷ್ಟ್ರಪತಿ ಆಡಳಿತ - ನವೆಂಬರ್ 20, 2007 ರಿಂದ ಮೇ 29, 2008 ರವರೆಗೆ.
  • ಬಿ.ಎಸ್.ಯಡಿಯೂರಪ್ಪ - ಭಾರತೀಯ ಜನತಾ ಪಾರ್ಟಿ- ಮೇ 30, 2008 ರಿಂದ ಆಗಸ್ಟ್‌ 04, 2011 ರವರೆಗೆ.
  • ಡಿ.ವಿ.ಸದಾನಂದ ಗೌಡ- ಭಾರತೀಯ ಜನತಾ ಪಾರ್ಟಿ- ಆಗಸ್ಟ್‌ 05, 2011 ರಿಂದ ಜುಲೈ 11, 2012 ರವರೆಗೆ.
  • ಜಗದೀಶ್ ಶಿವಪ್ಪ ಶೆಟ್ಟರ್- ಭಾರತೀಯ ಜನತಾ ಪಾರ್ಟಿ- ಜುಲೈ 12, 2012 ರಿಂದ ಮೇ 08, 2013 ರವರಗೆ.
  • ಸಿದ್ಧರಾಮಯ್ಯ - ಕಾಂಗ್ರೆಸ್ ಪಕ್ಷ - ಮೇ 13, 2013 ರಿಂದ ಮೇ 15, 2018 ರವರೆಗೆ.
  • ಬಿ.ಎಸ್.ಯಡಿಯೂರಪ್ಪ - ಭಾರತೀಯ ಜನತಾ ಪಾರ್ಟಿ- ಮೇ 17, 2018 ರಿಂದ ಮೇ 23, 2018 ರವರೆಗೆ
  • ಹೆಚ್‌.ಡಿ.ಕುಮಾರಸ್ವಾಮಿ - ಜಾತ್ಯತೀತ ಜನತಾದಳ - ಮೇ 23, 2018 ರಿಂದ ಜುಲೈ 23, 2019 ರವರೆಗೆ.
  • ಬಿ.ಎಸ್.ಯಡಿಯೂರಪ್ಪ - ಭಾರತೀಯ ಜನತಾ ಪಾರ್ಟಿ- ಜುಲೈ 26, 2019 ರಿಂದ ಜುಲೈ 26, 2021 ರವರೆಗೆ
  • ಬಸವರಾಜ ಬೊಮ್ಮಾಯಿ - ಭಾರತೀಯ ಜನತಾ ಪಾರ್ಟಿ- ಜುಲೈ 28, 2021ರಿಂದ ಮೇ 10, 2023ರವರೆಗೆ 
SCROLL FOR NEXT