ರಾಜ್ಯ

ಮತದಾರರಿಗೆ ಹಣ ಹಂಚದಿರುವುದೇ ಸೋಲಿಗೆ ಕಾರಣ, ಹಣ ವಾಪಸ್‌ ಕೊಡಿ: ಬಿಜೆಪಿ ನಾಯಕ ಕೆಸಿ ನಾರಾಯಣಗೌಡ

Ramyashree GN

ಮೈಸೂರು: ಬಿಜೆಪಿ ಮುಖಂಡ ಹಾಗೂ ಮಾಜಿ ಕ್ರೀಡಾ ಸಚಿವ ಕೆಸಿ ನಾರಾಯಣಗೌಡ ಸೋಮವಾರ ಮತ್ತೊಂದು ವಿವಾದಕ್ಕೆ ಸಿಲುಕಿದ್ದು, ಚುನಾವಣೆ ವೇಳೆ ಮತದಾರರಿಗೆ ಹಣ ಹಂಚಲು ಪಕ್ಷದ ಸ್ಥಳೀಯ ಮುಖಂಡರು ಹಾಗೂ ಬೆಂಬಲಿಗರು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಆರ್ ಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿರುದ್ಧ ನಾರಾಯಣ ಗೌಡ ಅವರು ಸೋಲು ಅನುಭವಿಸಿದ್ದರು. ಹೀಗಾಗಿ, ಹಣವನ್ನು ಹಿಂದಿರುಗಿಸುವಂತೆ ಸ್ಥಳೀಯ ಮುಖಂಡರನ್ನು ಕೋರಿದ್ದಾರೆ. 'ಮತದಾರರಿಗೆ ಹಣವನ್ನು ವಿತರಿಸದ ಮತ್ತು ಅದನ್ನು ತಮ್ಮ ಬಳಿ ಇಟ್ಟುಕೊಂಡಿರುವವರು ಹಣವನ್ನು ಹಿಂದಿರುಗಿಸಬೇಕು. ಅದನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತೇನೆ' ಎಂದರು.

ಮಂಡ್ಯದಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ನನ್ನ ಆಪ್ತರು ಮತದಾರರಿಗೆ ಹಣ ಹಂಚದೆ ವಂಚಿಸಿದ್ದಾರೆ. ಇದು ನನ್ನ ಹೀನಾಯ ಸೋಲಿಗೆ ಕಾರಣವಾಯಿತು. ಹಣ ಹಂಚಿರುವ ಬೆಂಬಲಿಗರ ಪಟ್ಟಿ ನನ್ನ ಬಳಿ ಇದೆ' ಎಂದಿದ್ದಾರೆ.
ನನ್ನ ಮಾಹಿತಿ ಪ್ರಕಾರ, ಕ್ಷೇತ್ರದ ಹಲವು ಗ್ರಾಮಗಳ ಮತದಾರರಿಗೆ ಹಣ ತಲುಪಿಲ್ಲ ಎಂದರು. 

ನಾರಾಯಣ ಗೌಡ ಅವರು ಆಪರೇಷನ್ ಕಮಲದ ವೇಳೆ ಬಿಜೆಪಿಗೆ ಪಕ್ಷಾಂತರಗೊಂಡು ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದರು.

SCROLL FOR NEXT